ಸಂಭ್ರಮದ ಶತಮಾನೋತ್ತರ ಕಾರ್ಯಕ್ರಮ ನಡೆಸಲು ತೀರ್ಮಾನ

KannadaprabhaNewsNetwork |  
Published : Apr 13, 2026, 02:15 AM IST
ನಾಗರಾಜ ನಾಯ್ಕ ಮಾಳ್ಕೋಡ ರವರ ಅಧ್ಯಕ್ಷತೆಯಲ್ಲಿ ನಡೆದ ಚಿಂತನಾ ಸಭೆ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಮಾಳ್ಕೋಡ ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ವರ್ಷಾಚರಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.

ತಾಲೂಕಿನ ಮಾಳ್ಕೋಡ ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಮಾಳ್ಕೋಡ ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ವರ್ಷಾಚರಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಸಂಭ್ರಮಾಚರಣೆಯ ಪೂರ್ವದಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮ ಆಯೋಜಿಸುವುದು. ಹಳೆಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಸಿ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವುದು. ಶಾಲೆಯ ಮೂಲಭೂತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಕಾರದೊಂದಿಗೆ ನಡೆಸುವುದಕ್ಕೆ ನಿರ್ಣಯಿಸಲಾಗಿದೆ.ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷತೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ೧೦೦ಕ್ಕೂ ಹೆಚ್ಚು ವಸಂತಗಳನ್ನು ಪೂರೈಸಿರುವ ಶಾಲೆಯ ಶತಮಾನೋತ್ತರ ಸಂಭ್ರಮಾಚರಣೆಯನ್ನು ಮುಂದಿನ ಡಿಸೆಂಬರ್-ಜನವರಿ ತಿಂಗಳಲ್ಲಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕೂ ಪೂರ್ವದಲ್ಲಿ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಹಂತಗಳಲ್ಲಿ ಬೇರೆ ಬೇರೆ ಕಾರ್ಯಕ್ರಮ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಶಾಲೆಗೆ ಆಗಬೇಕಾಗಿರುವ ಅಗತ್ಯ ಮೂಲಭೂತ ಸೌಕರ್ಯಗಳ ಕೆಲಸ ಕಾರ್ಯಗಳ ಪಟ್ಟಿ ಮಾಡಲಾಗಿದ್ದು ಜನಪ್ರತಿನಿಧಿಗಳ, ಸರಕಾರದ ನೆರೆವಿನೊಂದಿಗೆ ಮಾಡುವುದಕ್ಕೆ ಸಮಿತಿ ಪ್ರಯತ್ನಿಸುವುದು. ಉಳಿದಂತೆ ಚಿಕ್ಕ ಪುಟ್ಟ ಕೆಲಸ ಕಾರ್ಯಗಳನ್ನು ದಾನಿಗಳ ಮತ್ತು ಪ್ರಾಯೋಜಕರ ನೆರವಿನೊಂದಿಗೆ ಮಾಡುವುದಕ್ಕೆ ಸಮಿತಿ ಮುಂದಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಸುವುದು. ನಂತರದಲ್ಲಿ ಹಳೆ ವಿದ್ಯಾರ್ಥಿಗಳ ಮಹಾಸಂಗಮ ಸಮಾವೇಶವನ್ನು ಮುಂದಿನ ದಿನಗಳಲ್ಲಿ ನಡೆಸುವುದಕ್ಕೆ ಕಾರ್ಯಯೋಜನೆಯನ್ನ ಹಾಕಿಕೊಳ್ಳುವಂತೆ ನಿರ್ಣಯಿಸಲಾಯಿತು. ಈಗಾಗಲೇ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಂಪ್ಯೂಟರ್ ತರಬೇತಿಯನ್ನು ನಡೆಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು. ಸಭೆಯಲ್ಲಿ ಈ ವರೆಗಿನ ಜಮಾ ಖರ್ಚು ಮಂಡಿಸಲಾಯಿತು.

ಸಭೆಯಲ್ಲಿ ವಿಶೇಷ ಆಮಂತ್ರಿತರಾಗಿ ಕುಮಟಾ ಉಪವಿಭಾಗದ ಎಸಿಎಫ್ ಆಗಿರುವ ಕೃಷ್ಣ ಅಣ್ಣಯ್ಯ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ, ಉಪಾಧ್ಯಕ್ಷ ಮಂಗಲಾ ಅಣ್ಣಯ್ಯ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಎಚ್.ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯಾ ನಾಯ್ಕ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಜಿ.ಹೆಗಡೆ, ಕಾರ್ಯದರ್ಶಿಯಾದ ಮುಖ್ಯಾಧ್ಯಾಪಕಿ ಲಕ್ಷ್ಮೀ ಎನ್.ಭಟ್ಟ, ಪದಾಧಿಕಾರಿಗಳಾದ ಜಿ.ಕೆ. ಹೆಗಡೆ, ಶಂಕರ ಗಣಪತಿ ನಾಯ್ಕ, ಮಂಜುನಾಥ ಕೆ.ನಾಯ್ಕ, ಗಣಪತಿ ಎನ್.ನಾಯ್ಕ, ಗಜಾನನ ಎನ್. ಹಳ್ಳೆರ್, ಮೂರ್ತಿ ಎಂ.ಆಚಾರಿ, ಮಾರುತಿ ಎನ್.ನಾಯ್ಕ, ಕೇಶವ ಈರಾ ಅಂಬಿಗ, ವೀಣಾ ಪಿ.ನಾಯ್ಕ, ಶರಾವತಿ ಎಂ.ಗೌಡ, ಜ್ಯೋತಿ ಎಸ್ ಮಡಿವಾಳ, ಸುಮಿತ್ರಾ ಎಸ್. ಹಳ್ಳೇರ್, ಕಮಲಾಕರ್ ನಾಯ್ಕ, ಗಣೇಶ ಎಸ್.ನಾಯ್ಕ, ವೆಂಕಟ್ರಮಣ ಜಿ.ನಾಯ್ಕ, ಮಹೇಶ ಜಿ.ನಾಯ್ಕ ಮೊದಲಾದವರಿದ್ದರು.

ಸಮಿತಿಯ ಲಾಂಛನ ಅಂತಿಮ:

ಶತಮಾನೋತ್ತರ ಸಂಭ್ರಮಾಚರಣೆಯ ಅಂಗವಾಗಿ ರಚಿಸಲಾದ ಲಾಂಛನವನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಲಾಂಛನವನ್ನು ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್.ವೈದ್ಯರಿಂದ ಬಿಡುಗಡೆಗೊಳಿಸುವುದಕ್ಕೆ ಸಮಿತಿ ಸಭೆಯು ನಿರ್ಣಯಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಸುಬ್ರಹ್ಮಣ್ಯ ಶ್ರೀ
ಕಾರ್ಕಳ: 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ