ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಕದಂಬ ಕಲಾಪೀಠ, ಉದಯಗಿರಿ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸುಜಯಾ ಸುರೇಶ್ ಅವರ ''''''''''''''''ಶುಭ ಮುಹೂರ್ತಗಳು'''''''''''''''' ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅತ್ಯುತ್ತಮ ಲೇಖಕ, ಪ್ರಕಾಶಕ, ಮುಖಪುಟ ವಿನ್ಯಾಸಕಾರರಿಗೆ ಪ್ರಾಧಿಕಾರ ಪ್ರಶಸ್ತಿ ನೀಡುತ್ತಿದೆ. ಆದರೆ ಎಲ್ಲವನ್ನು ಸಂಯೋಜಿಸಿ, ಸುಂದರವಾಗಿ ಮುದ್ರಿಸುವ ಮುದ್ರಣಕಾರನಿಗೆ ಯಾವುದೇ ಪ್ರಶಸ್ತಿ ಇಲ್ಲದಿರುವುದನ್ನು ಗಮನಿಸಿ, ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಶುಭಮುಹೂರ್ತಗಳು ಕೃತಿ ಅತ್ಯುತ್ತಮವಾಗಿ ಮುದ್ರಣವಾಗಿರುವುದನ್ನು ಗಮನಿಸಿದ ನಂತರ ತಮಗೆ ಈ ಆಲೋಚನೆ ಬಂದಿತು ಎಂದರು.ಶುಭ ಮುಹೂರ್ತಗಳು ಕೃತಿಯಲ್ಲಿ ಜ್ಞಾನಕೋಶವೂ ಇದೆ. ಮಾಹಿತಿ ಕೋಶವೂ ಇದೆ. ಲೇಖಕಿಯ ಜೀವನಪ್ರೀತಿ, ಪುಸ್ತಕ ಪ್ರೀತಿ ವ್ಯಕ್ತವಾಗಿದೆ. ಈ ಕೃತಿಯಲ್ಲಿ ಎಲ್ಲವೂ ಇದೆ. ಯಾವುದನ್ನು ಬಿಟ್ಟಿಲ್ಲ. ಅವರು ಎಲ್ಲವನ್ನು ಮಿತಿಯಲ್ಲಿಯೇ ಹೇಳಿದ್ದಾರೆ ಎಂದರು.
ಯುವರಾಜ ಕಾಲೇಜಿನ ಆಂಗ್ಲ ಉಪನ್ಯಾಸಕಿ, ಅಂಕಣಕಾರ್ತಿ ಎಚ್. ನಿವೇದಿತಾ ಕೃತಿ ಕುರಿತು ಮಾತನಾಡಿ, ಗೃಹಿಣಿಯಾದ ಲೇಖಕಿ ಸುಜಯಾ ಸುರೇಶ್ ಅವರು ಅಧ್ಯಯನಶೀಲತೆಯಿಂದ ಈ ಜ್ಞಾನಶಾಖೆಯನ್ನು ರಚಿಸಿದ್ದಾರೆ. ಇದನ್ನು ಓದಿದಾಗ ನಮ್ಮ ಶಾಸ್ತ್ರ, ಸಂಪ್ರದಾಯಗಳು ಸ್ಮತಿಪಟಲದಲ್ಲಿ ಹಾದು ಹೋದವು ಎಂದರು.
ನಾವು ಈಗ ಸಂಧಿ ಕಾಲದಲ್ಲಿದ್ದೇವೆ. ಎರಡು ದೋಣಿಗಳ ಮೇಲೆ ಪ್ರಯಾಣಿಸುತ್ತಿದ್ದೇವೆ.
ಹಿರಿಯ ಸಂಪ್ರದಾಯಗಳನ್ನು ಪಾಲಿಸಿದರೆ ಶ್ರೇಯಸ್ಕರ ಎಂಬ ನೀತಿ ಕೋಶದಂತೆ ಈ ಕೃತಿ ಇದೆ. ಸಂಪ್ರದಾಯದ ಮದುವೆಗಳ ಜೊತೆಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಬಗ್ಗೆ ಕೂಡ ಬರೆದಿದ್ದಾರೆ. ಹೀಗಾಗಿ ಲೇಖಕಿ ಎಲ್ಲಿಯೂ ಸಂಪ್ರದಾಯಗಳನ್ನು ಓದುಗರ ಮೇಲೆ ಹೇರಲು ಹೋಗಿಲ್ಲ. ಬದಲಿಗೆ ಈ ರೀತಿಯ ಆಚರಣೆಗಳಿವೆ. ಯಾವುದನ್ನಾದರೂ ಪಾಲಿಸಿ ಎಂಬ ಧೋರಣೆ ತೋರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರು ರೀಲ್ಸ್ ನೋಡಿಕೊಂಡು ಕಾಲ ಕಳೆಯುತ್ತಿರುವಾಗ ಗೃಹಿಣಿಯಾಗಿರುವ ಹಾಗೂ ಹೆಚ್ಚು ಓದದ ಲೇಖಕಿ ಸಂಸ್ಕಾರ, ಸಂಪ್ರದಾಯ ಕುರಿತು ಈವರೆಗೆ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ ಎಂದರು.
ಕದಂಬ ಕಲಾಪೀಠದ ಅಧ್ಯಕ್ಷ ಬಿ. ವಿದ್ಯಾಸಾಗರ ಕದಂಬ ಸ್ವಾಗತಿಸಿದರು. ರಾಜು ಪ್ರಾರ್ಥಿಸಿದರು. ಜಯಣ್ಣ ನಿರೂಪಿಸಿದರು. ಉದಯಗಿರಿ ಕನ್ನಡ ಸಂಘದ ಕಾರ್ಯದರ್ಶಿ ಜಯಕುಮಾರ್, ಕೆ.ಎಸ್. ಸತೀಶ್ ಕುಮಾರ್, ಡಾ.ಬಿ. ಬಸವರಾಜು, ಟಿ. ಲೋಕೇಶ್ ಹುಣಸೂರು, ಆರ್. ಸಹನಾ, ಚಂದ್ರು ಮಂಡ್ಯ, ನಾಗೇಶ್ ಕಾವ್ಯಪ್ರಿಯ. ಅವ್ವ ಪರಮೇಶ್ ಮೊದಲಾದವರು ಇದ್ದರು.