ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬರಗಾಲವಿದ್ದರೂ ರಾಜ್ಯ ಸರ್ಕಾರ ತನ್ನ ಖಾತೆಯಿಂದ ಒಂದೇ ಒಂದು ರುಪಾಯಿ ಪರಿಹಾರ ಕೊಡದೇ ಕೇಂದ್ರಕ್ಕೆ ನಿಯೋಗ ಕರೆದರೆ ಹೇಗೆ?. ತುರ್ತಾಗಿ ತಮ್ಮ ರಾಜ್ಯ ಖಾತೆಯಿಂದ ಎಕರೆಗೆ ಕನಿಷ್ಟ ₹25 ಸಾವಿರ ಬರ ಪರಿಹಾರ ಕೊಟ್ಟು, ನಂತರದಲ್ಲಿ ಕೇಂದ್ರಕ್ಕೆ ನಿಯೋಗ ಹೋಗಬೇಕು. ಬಳಿಕ ಕೇಂದ್ರ ಕೊಡುವ ಪರಿಹಾರವನ್ನು ರೈತರಿಗೆ ಕೊಡಬೇಕು. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ತಕ್ಷಣ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣರು ರಾಜ್ಯವನ್ನು ಬರಗಾಲ ಎಂದು ಘೋಷಿಸುವುದರ ಜೊತೆಗೆ 10 ಅಧಿಕಾರಿಗಳನ್ನು ರಾಜ್ಯಕ್ಕೆ ಕಳಿಸಿದ್ದಾರೆ. ಸ್ವತಃ ಸಚಿವರೇ ರಾಜ್ಯಕ್ಕೆ ಬರಲಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರದ ತಂಡ ಹೋದಲ್ಲಿ ನಾವು ಹೋಗಿ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ವಿಫಲವಾಗಿರುವ ಕುರಿತು ಮನವಿ ಸಲ್ಲಿಸಲಿದ್ದೇವೆ ಎಂದರು. ರೈತರ ಹಾಗೂ ರೈತ ಸಂಘದ ಹೋರಾಟಕ್ಕೆ ಯಾವಾಗಲೂ ನಮ್ಮ ಬೆಂಬಲವಿದೆ. ಈ ಹಿಂದೆ ಗುರ್ಲಾಪುರ ಕ್ರಾಸ್‌ನಲ್ಲಿ ನಡೆದ ಹೋರಾಟದಲ್ಲಿ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರರವರೇ ಭಾಗಿಯಾಗಿ ಕಬ್ಬು ಬೆಳೆಗಾರರಿಗೆ ಬೆಂಬಲಿಸಿದ್ದಾರೆ. ಹಾಗಾಗಿ ವ್ಯಕ್ತಿಗತ ಗುರಿಯಾಗಿಸಿಕೊಂಡು ಹೋರಾಟ ನಡೆಸುವ ಬದಲು ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹1 ಸಾವಿರ ಎಸ್‌ಎಪಿ ದರವನ್ನು ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ ₹3,650 ಎಫ್‌ಆರ್‌ಪಿ ದರ ನಿಗದಿ ಮಾಡಿದೆ. ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಎಂಎಸ್‌ಪಿ ಬಗ್ಗೆ ಮುಕ್ತ ಚರ್ಚೆಯಾಗಲಿ. ಎಫ್‌ಆರ್‌ಪಿ ಎಂದರೆ ಕೃಷಿ ಉತ್ಪನ್ನಗಳಿಗೆ ಕೊಡುವ ಬೆಂಬಲ ಬೆಲೆಯಾಗಿದೆ. ಎಂಎಸ್‌ಪಿ ಎಂದರೆ ಸಕ್ಕರೆಗೆ ನಿಗದಿಪಡಿಸುವ ಕನಿಷ್ಟ ಬೆಲೆಯಾಗಿದೆ. ಇನ್ನು ಎಸ್‌ಎಪಿ ಎಂಬುವುದು ರಾಜ್ಯ ಸಲಹಾ ಬೆಲೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಎಸ್‌ಎಪಿ ದರ ನಿಗದಿ ಮಾಡಿಲ್ಲ. ಕಬ್ಬು ಕಟಾವಿಗೆ ಮುಂಚಿತವಾಗಿ ಮಾಡಬೇಕಿದ್ದ ಎಸ್‌ಎಪಿ ಬೆಲೆಯನ್ನು ನಿಗದಿ ಮಾಡಬೇಕು. ರಾಜ್ಯ ಸರ್ಕಾರ ಕಳೆದ ವರ್ಷ ₹50 ನಿಗದಿ ಮಾಡಿದ್ದು, ಅದನ್ನು ಸರಿಯಾಗಿ ರೈತರಿಗೆ ಕೊಟ್ಟಿಲ್ಲ ಎಂದು ದೂರಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಬಾಲರಾಜ ರೆಡ್ಡಿ, ಶಿವಾನಂದ ಭುಯ್ಯಾರ, ಗೀತಾ ಚೌಧರಿ, ವಿಜಯ ಜೋಶಿ ಇದ್ದರು.ಕಬ್ಬಿಗೆ ಉತ್ಪಾದನೆ ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ರೈತರಿಗೆ ಸರಿಯಾದ ಬೆಲೆ ಕೊಡಿಸುವಂತೆ ರೈತ ಸಂಘಟನೆಗಳ ಹೋರಾಟ ಆಗಬೇಕು. ಆದರೆ, ಓರ್ವ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹೋರಾಟ ಆಗಬಾರದು. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ತೇಜೋವಧೆ ಮಾಡುವ ಹೋರಾಟ ಶೋಭೆ ತರುವಂತದ್ದಲ್ಲ. ಉದ್ದೇಶದಿಂದ ಹೋರಾಟ ಆಗಬೇಕು, ದುರುದ್ದೇಶದಿಂದ ಹೋರಾಟ ಆಗಬಾರದು.