ಕಡೂರನ್ನು ಬರಪೀಡಿತ ತಾಲೂಕೆಂದು ಘೋಷಿಸಿ: ವೈ.ಎಸ್.ವಿ ದತ್ತ

KannadaprabhaNewsNetwork |  
Published : Aug 26, 2026, 01:45 AM IST
13 | Kannada Prabha

ಸಾರಾಂಶ

ಕಡೂರುಮುಂಗಾರು ಮಳೆ ಕೈ ಕೊಟ್ಟು ತಾಲೂಕಿನ ರೈತ ವರ್ಗ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಹಿನ್ನೆಲೆಯಲ್ಲಿ ತಾವು ಅನೇಕ ಗ್ರಾಮಗಳಿಗೆ ತೆರಳಿ ಸರ್ವೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಕಡೂರನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡದ ಕಾರಣ ಆ.28ರ ಶುಕ್ರವಾರದಿಂದ 2 ದಿನಗಳ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಮುಂಗಾರು ಮಳೆ ಕೈ ಕೊಟ್ಟು ತಾಲೂಕಿನ ರೈತ ವರ್ಗ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಹಿನ್ನೆಲೆಯಲ್ಲಿ ತಾವು ಅನೇಕ ಗ್ರಾಮಗಳಿಗೆ ತೆರಳಿ ಸರ್ವೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಕಡೂರನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡದ ಕಾರಣ ಆ.28ರ ಶುಕ್ರವಾರದಿಂದ 2 ದಿನಗಳ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಮಂಗಳವಾರ ಪಟ್ಟಣದ ಕೋಟೆಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಾಲೂಕಿನ ಎರಡು ಪ್ರಮುಖ ಕಾರಣಗಳಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಕಲ್ಕೆರೆ ಗ್ರಾಮದಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದು, ಒಂದು ಕಲ್ಕೆರೆ ಕುಕ್ಕಸಮುದ್ರ ಕೆರೆ ತುಂಬಿಸುವುದು ಮತ್ತೊಂದು ಕಡೂರು ತಾಲೂಕನ್ನು ಬರಪೀಡಿತವೆಂದು ಘೋಷಿಸ ಬೇಕು. ಕುಕ್ಕಸಮುದ್ರ ಕೆರೆ ತುಂಬಿಸಲು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಂದ್ರ ಒಪ್ಪಿಕೊಂಡಿರು ವುದರಿಂದ 80 ಕಿ.ಮೀ ಪಾದಯಾತ್ರೆಯನ್ನು 40 ಕಿ.ಮೀ.ಗೆ ನಿಗದಿ ಪಡಿಸಲಾಗಿದೆ. ಕಲ್ಕೆರೆ ಗ್ರಾಮದಿಂದ ಆ.28 ರ ಶುಕ್ರವಾರ ಬೆಳಗ್ಗೆ ನೂರಾರು ರೈತರೊಂದಿಗೆ, ಜಾತ್ಯತೀತವಾಗಿ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಪಾದಯಾತ್ರೆಗೆ ಬೆಳಗ್ಗೆ 9 ಗಂಟೆಗೆ ಚಾಲನೆ ನೀಡಿ ಶನಿವಾರ ಸಂಜೆ ಕಡೂರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.

ನಮ್ಮ ಪಾದಯಾತ್ರೆಗೆ ಸರ್ಕಾರ ಸ್ಪಂದಿಸಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿದ್ದರೆ ಮುಂದಿನ ಹೋರಾಟಕ್ಕೂ ಸಿದ್ಧವಾಗಿದ್ದೇವೆ. ಜಿಲ್ಲಾಧಿಕಾರಿಗಳು ಬರದ ವಿಷಯದಲ್ಲಿ ಸರ್ವೇ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದು ಕಡೂರು ತಾಲೂಕನ್ನು ಕೈ ಬಿಟ್ಟಿರುವುದಕ್ಕೆ ಕಾರಣ ತಿಳಿಸಬೇಕು. ಇದರಿಂದ ಇಲ್ಲಿನ ರೈತರಿಗೆ ಅನ್ಯಾಯ ಮತ್ತು ನೋವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರೇಮಕುಮಾರ್, ಬಿ.ಟಿ. ಗಂಗಾಧರನಾಯ್ಕ, ಪಾಲಾಕ್ಷಪ್ಪ, ಬ್ಯಾಗಡೇಹಳ್ಳಿ ಕುಮಾರ್ ಮತ್ತಿತರರು ಇದ್ದರು.

--- ಬಾಕ್ಸ್...

ಪಾದಯಾತ್ರೆ ಎಲ್ಲೆಲ್ಲಿ?

ಆ. 28 ರ ಶುಕ್ರವಾರ ಬೆಳಗ್ಗೆ 9 ಕ್ಕೆ ಕಲ್ಕೆರೆಯಿಂದ ಆರಂಭ, 10 ಕ್ಕೆ ಎಚ್.ತಿಮ್ಮಾಪುರ, 11 ಕ್ಕೆ ಕಳ್ಳಿಹೊಸಹಳ್ಳಿ, 12 ಕ್ಕೆ ಹುರುಕನಹಳ್ಳಿ, 1ಕ್ಕೆ ದೊಡ್ಡಬಳ್ಳೇಕೆರೆ, 2 ಕ್ಕೆ ಪಿ.ಕೋಡಿಹಳ್ಳಿ,4 ಕ್ಕೆ ಹಿರೇಗರ್ಜೆ, 5ಕ್ಕೆ ಗರ್ಜೆ, 6 ಕ್ಕೆ ಜಿ.ಮಾದಾಪುರ ಗೇಟ್, 7. ಗಂಟೆಗೆ ಬಿಳುವಾಲ ಗ್ರಾಮದಲ್ಲಿ ರಾತ್ರಿ ತಂಗುವುದು, 29 ರ ಶನಿವಾರ ಬೆಳಗ್ಗೆ 10 ಕ್ಕೆ ಬಿಳುವಾಲದಿಂದ ನಿರ್ಗಮನ. 11 ಕ್ಕೆ ಎಂ.ಕೋಡಿಹಳ್ಳಿ, 12 ಕ್ಕೆ ಮಚ್ಚೇರಿ, 1 ಗಂಟೆಗೆ ಮಲ್ಲೇಶ್ವರ, 3 ಕ್ಕೆ ಕಡೂರು ತಾಲೂಕು ಕಚೇರಿಗೆ ತಲುಪುವುದು ಇಲ್ಲಿಗೆ ೪೦- ಕಿ.ಮೀ ಪಾದಯಾತ್ರೆ ಪೂರ್ಣಗೊಳ್ಳಲಿದೆ ಎಂದರು.

25ಕೆಕೆಡಿಯು5.

ವೈ.ಎಸ್.ವಿ ದತ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 18 ಸಾವಿರ ಮತದಾರರು ಹೊರಕ್ಕೆ
ಪಡಿತರ ಕಾರ್ಡ್ ಹೊಂದಿರುವ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಮೂಡ್ಲೀಗೌಡ