ಆಗಸ್ಟ್ ೨೩ರಿಂದಲೇ ಹೊಸದಾಗಿ ಮತದಾರರಾಗಿ ಹೆಸರು ನೋಂದಾಯಿಸಲು, ಮತಪಟ್ಟಿಯಿಂದ ಹೆಸರು ಬಿಟ್ಟವರು ಸೇರ್ಪಡೆ ಹಾಗೂ ಅನಿವಾಸಿ ಮತದಾರರು ಮತದಾನದ ಹಕ್ಕು ಪಡೆಯಲು ಹಾಗೂ ಮತಪಟ್ಟಿಯಲ್ಲಿ ಹೆಸರು ತಿದ್ದುಪಡಿ, ಬೇರೆಡೆಗೆ ವರ್ಗಯಿಸಲು ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೮೫ ಮತಗಟ್ಟೆಗಳಿದ್ದು ಪರಿಷ್ಕರಣೆಯ ನಂತರ ೧೨೦೦ಕ್ಕೂ ಅಧಿಕ ಮತದಾರರಿರುವ ೧೩ ಮತಗಟ್ಟೆಗಳನ್ನು ಬೇರ್ಪಡಿಸಲು ಮನವಿ ಮಾಡಲಾಗಿತ್ತು. ಇದರಲ್ಲಿ ೧೦ ಮತಗಟ್ಟೆಗಳನ್ನು ಬೇರ್ಪಡಿಸಲು ಆಯೋಗ ಅನುಮತಿ ನೀಡಿರುವುದರಿಂದ ಮತಗಟ್ಟೆಗಳ ಸಂಖ್ಯೆ ೧೯೫ಕ್ಕೆ ಏರಿಕೆಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಕಲೇಶಪುರ ವಿಧಾನ ಸಭಾ ಕ್ಷೇತ್ರದಲ್ಲಿ 18 ಸಾವಿರ ಮತದಾರರನ್ನು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಕೈಬಿಡಲಾಗಿದೆ ಎಂದು ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ಹೇಳಿದರು.

ಸೋಮವಾರ ಮಿನಿವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮತಪಟ್ಟಿ ಪರಿಷ್ಕರಣೆಗೂ ಮುನ್ನ ೨.೫ ಲಕ್ಷ ಮತದಾರರಿದ್ದು ಸದ್ಯ ಪರಿಷ್ಕರಣೆಯಿಂದ ಮತದಾರರ ಸಂಖ್ಯೆ ೧.೮೭ ಲಕ್ಷಕ್ಕೆ ಇಳಿಕೆಯಾಗಿದೆ. ಶೇ. ೯೧ರಷ್ಟು ನೈಜ ಮತದಾರರು ಪರಿಷ್ಕರಣೆ ವೇಳೆ ಕಂಡು ಬಂದಿದ್ದಾರೆ. ೧೮ ಸಾವಿರ ಮತದಾರರ ಪೈಕಿ ಐದು ಸಾವಿರ ಮತದಾರರು ಮೃತಪಟ್ಟಿದ್ದರೆ, ೯ ಸಾವಿರ ಮತದಾರರು ಬೇರೆಡೆಗೆ ತಮ್ಮ ಹಕ್ಕನ್ನು ಬದಲಿಸಿಕೊಂಡಿದ್ದಾರೆ. ಇನ್ನುಳಿದ ಮತದಾರರು ಎರಡು ಪ್ರತ್ಯಕ ಸ್ಥಳಗಳಲ್ಲಿ ಮತದಾನದ ಹಕ್ಕನ್ನು ಪಡೆದಿರುವ ಕಾರಣ ೧೮ ಸಾವಿರದ ೬೨ ಮತದಾರರು ಮತಪಟ್ಟಿಯಿಂದ ಕೈಬಿಡಲಾಗಿದೆ. ಆಗಸ್ಟ್ ೨೪ರಿಂದ ಸೆ.೨೩ರವರೆಗೆ ಕರಡು ಮತದಾರರ ಪಟ್ಟಿ ಆಕ್ಷೇಪಣೆ ಹಾಗೂ ಹಕ್ಕು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮತಪಟ್ಟಿ ಪರಿಷ್ಕರಣೆಯ ವೇಳೆ ಮ್ಯಾಪಿಂಗ್‌ನಲ್ಲಿ ಬಾಗವಹಿಸದ ೩ ಸಾವಿರ ಹಾಗೂ ಗ್ರಾಮದಲ್ಲಿ ಇಲ್ಲದ ೩೭೦೦ ಮತದಾರರಿಗೆ ನೋಟಿಸ್ ನೀಡಲು ತಿರ್ಮಾನಿಸಲಾಗಿದ್ದು ಪ್ರತಿಯೊಬ್ಬರಿಗೂ ಎರಡು ಬಾರಿ ನೋಟಿಸ್ ನೀಡಲು ಉದ್ದೇಶಿಸಲಾಗಿದ್ದು ಇವರ ವಿಚಾರಣೆಗಾಗಿ ೧೧ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಚಾರಣೆಯಲ್ಲಿ ಭಾಗವಹಿಸಲು ಒಟ್ಟು ೫೮ ದಿನಗಳ ಕಾಲಮಿತಿಯನ್ನು ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರಿಗೆ ನೋಟಿಸ್ ನೀಡುತ್ತಿರುವ ಕ್ಷೇತ್ರ ಸಕಲೇಶಪುರ ವಿಧಾನಸಭಾ ಕ್ಷೇತ್ರವಾಗಿದ್ದು ನೋಟಿಸ್ ನೀಡಿದವರ ವಿಚಾರಣೆಯನ್ನು ಶೀಘ್ರವಾಗಿ ಮುಗಿಸಲು ಉದ್ದೇಶಿಸಲಾಗಿದೆ. ನೈಜ ಮತದಾರರು ಮತ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯನಿರ್ವಹಿಸಲಾಗುತ್ತಿದ್ದು ನಿವೇಶನ ರಹಿತ ಹಾಗೂ ದಾಖಲೆ ಹೊಂದಿಲ್ಲದ ವ್ಯಕ್ತಿಗಳು ಮತಗಟ್ಟೆ ಅಧಿಕಾರಿಗಳ ಮುಂದೆ ಹಾಜುರಾಗಿ ಮತದಾನದ ಹಕ್ಕು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು. ಆಗಸ್ಟ್ ೨೩ರಿಂದಲೇ ಹೊಸದಾಗಿ ಮತದಾರರಾಗಿ ಹೆಸರು ನೋಂದಾಯಿಸಲು, ಮತಪಟ್ಟಿಯಿಂದ ಹೆಸರು ಬಿಟ್ಟವರು ಸೇರ್ಪಡೆ ಹಾಗೂ ಅನಿವಾಸಿ ಮತದಾರರು ಮತದಾನದ ಹಕ್ಕು ಪಡೆಯಲು ಹಾಗೂ ಮತಪಟ್ಟಿಯಲ್ಲಿ ಹೆಸರು ತಿದ್ದುಪಡಿ, ಬೇರೆಡೆಗೆ ವರ್ಗಯಿಸಲು ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೮೫ ಮತಗಟ್ಟೆಗಳಿದ್ದು ಪರಿಷ್ಕರಣೆಯ ನಂತರ ೧೨೦೦ಕ್ಕೂ ಅಧಿಕ ಮತದಾರರಿರುವ ೧೩ ಮತಗಟ್ಟೆಗಳನ್ನು ಬೇರ್ಪಡಿಸಲು ಮನವಿ ಮಾಡಲಾಗಿತ್ತು. ಇದರಲ್ಲಿ ೧೦ ಮತಗಟ್ಟೆಗಳನ್ನು ಬೇರ್ಪಡಿಸಲು ಆಯೋಗ ಅನುಮತಿ ನೀಡಿರುವುದರಿಂದ ಮತಗಟ್ಟೆಗಳ ಸಂಖ್ಯೆ ೧೯೫ಕ್ಕೆ ಏರಿಕೆಯಾಗಿದೆ ಎಂದರು.ಈ ವೇಳೆ ಸಕಲೇಶಪುರ ತಹಸೀಲ್ದಾರ್‌ ಸುಪ್ರೀತಾ, ಆಲೂರು ತಹಸೀಲ್ದಾರ್‌ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಉಪಸ್ಥಿತರಿದ್ದರು.