ದೃಶ್ಯ ಮಾಧ್ಯಮದಿಂದ ನಾಟಕ ಕಲೆ ಅವನತಿ

KannadaprabhaNewsNetwork |  
Published : Jun 20, 2024, 01:04 AM IST
೧೯ ಇಳಕಲ್ಲ ೧ | Kannada Prabha

ಸಾರಾಂಶ

ಆಧುನಿಕತೆ ಬೆಳೆದಂತೆ ದೂರದರ್ಶನ ಮತ್ತು ದೃಶ್ಯ ಮಾಧ್ಯಮಗಳು ಬೆಳೆದಂತೆ ರಂಗ ಕಲೆ ಅವನತಿಯತ್ತ ಸಾಗುತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಆಧುನಿಕತೆ ಬೆಳೆದಂತೆ ದೂರದರ್ಶನ ಮತ್ತು ದೃಶ್ಯ ಮಾಧ್ಯಮಗಳು ಬೆಳೆದಂತೆ ರಂಗ ಕಲೆ ಅವನತಿಯತ್ತ ಸಾಗುತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರದ ಚೌಡೇಶ್ವರಿ ಭವನದಲ್ಲಿ ಇಳಕಲ್ಲಿನ ನಾಟ್ಯ ರಾಣಿ ಕಲಾ ಸಂಘ ಇದರ ೧೮ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಾಗೂ ಜಾನಪದ ಗೀತೆ, ದನಕಾಯುವವರ ದೊಡ್ಡಾಟ ನಾಟಕ ಪ್ರದರ್ಶನ ಸಮಾರಂಭವನ್ನು ಗಧೆ ಎತ್ತುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಿಂದೆ ಪ್ರತಿಯೊಂದು ಊರಲ್ಲಿ, ಪ್ರತಿಯೊಂದು ಜಾತ್ರೆಯಲ್ಲಿ ನಾಟಕ ಕಂಪನಿಗಳ ಕಲಾವಿದರು ತಮ್ಮ ನಿಜವಾದ ಪ್ರತಿಭೆಯನ್ನು ತೊರಿಸಿ ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಇಂದು ಮೊಬೈಲ್‌ಗಳ ಹಾವಳಿಯಿಂದ ನಾಟಕ ನೋಡಲು ಜನ ಬಾರದೆ ಅನೇಕ ನಾಟಕ ಕಂಪನಿಗಳು ದಿವಾಳಿಯಾಗಿವೆ. ನಾಟಕ ಕಲಾವಿದರು ಬೀದಿಗೆ ಬಂದಿದ್ದಾರೆ, ಕಾರಣ ಪ್ರತಿಯೊಬ್ಬರು ನಾಟಕ ನೊಡುವ ಮೂಲಕ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಚಿಕ್ಕುಂಬಿಯ ನಾಗಲಿಂಗ ಶ್ರೀಗಳು, ಇಳಕಲ್ಲಿನ ಗುರುಮಹಾಂತ ಶ್ರೀಗಳು, ನಾಟಕ ಅಕಾಡೆಮಿಯ ಮಾಜಿ ರಾಜ್ಯಾಧ್ಯಕ್ಷ ಎಲ್. ಬಿ. ಶೇಖ ಮಾಸ್ತರ, ಸಾಹಿತಿ ಇಂದುಮತಿ ಪುರಾಣಿಕ ಹಾಗೂ ಇತರರು ಮಾತನಾಡಿದರು. ಸಂಘದ ಪರವಾಗಿ ಸಮಾಜ ಸೇವೆ ಮಾಡಿದ ಎಲ್.ಬಿ. ಶೇಖ ಮಾಸ್ತರ, ಬಸವರಾಜ ಮಠದ, ಡಾ.ವಿ.ಕೆ. ವಂಶಾಕೃತಮಠ, ಪ್ರೊ. ಕೆ.ಎ. ಬನ್ನಟ್ಟಿ, ವಿಜಯ ಸಿಂಗಶೆಟ್ಟಿ, ಸ್ವದೇಶ ಅಂಗಡಿ, ಇಂದುಮತಿ ಪುರಾಣಿಕ, ಚಿಂದೋಡಿ ಶ್ರೀಕಂಠೇಶ, ಸಿದ್ದು ನಾಲತವಾಡ , ಮಲ್ಲಯ್ಯ ಕೋಮಾರಿ ಹಾಗೂ ಇತರರನ್ನು ಗೌರವಿಸಿ ಸತ್ಕರಿಸಲಾಯಿತು. ಸಂಘದ ಅದ್ಯಕ್ಷೆ ಉಮಾರಾಣಿ ಬಾರಿಗಿಡದ ಸ್ವಾತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುನಂದಾ ಕಂದಗಲ್ಲ ವಂದಿಸಿದರು. ಪುರುಷೋತ್ತಮ ಹಂದ್ಯಾಳ ನಿರೂಪಿಸಿದರು.

PREV

Recommended Stories

ಕಾಲ್ತುಳಿತದ ನಂತರ ನಾನು ವಿಚಲಿತ : ಸಿದ್ದರಾಮಯ್ಯ
ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ