ನಗರದ ಆಜಾದ್ ಪಾರ್ಕಿನಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಹಿಳೆಯರ ಹಕ್ಕುಗಳು, ಸಾಧನೆ, ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಮುಖ ವೇದಿಕೆ. ವಾಲ್ಮಿಕಿ ರಾಮಾಯಣ, ಕುಮಾರವ್ಯಾಸನ ಮಹಾಭಾರತ ಹೆಣ್ಣಿನಿಂದಲೇ ನಡೆದಿದೆ ಎನ್ನುತ್ತಾರೆ. ಆದರೆ, ವಾಸ್ತವಾಗಿ ತಪ್ಪು ಮಾಡಿರುವುದು ಗಂಡಸರು ಕಳಂಕ ಹೊತ್ತಿರುವುದು ಮಾತ್ರ ಮಹಿಳೆಯರು ಎಂದರು.
ಯಾವುದೇ ಒಂದು ಸಮುದಾಯದ ಅಭಿವೃದ್ಧಿಯನ್ನು ನಾನು ಆ ಸಮುದಾಯದ ಮಹಿಳೆಯರ ಸಾಧನೆಯನ್ನು ಮಾನದಂಡ ವಾಗಿಟ್ಟು ಕೊಂಡು ಅಳೆಯುತ್ತೇನೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ ಎಂದು ಹೇಳಿದರು.ವಿಧಾಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಮಹಿಳೆಯರ ಪಾತ್ರ ಸಮಾಜದಲ್ಲಿ ಬಹಳ ಹಿರಿದಾಗಿರು ವಂತಹದ್ದು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ನೀಡಿಲ್ಲ ಎಂಬ ಕೊರಗಿದೆ. ಆದರೆ, ಮಹಿಳೆರಿಗೆ ಎಲ್ಲ ರೀತಿಯ ಸ್ಥಾನಮಾನವನ್ನು ಅವರಿಗೆ ನಿರ್ವಹಿಸುವ ಶಕ್ತಿ ಇರುವುದಕ್ಕೆ ನೀಡಲಾಗಿದೆ. ಬುದ್ಧಿ ಶಕ್ತಿ, ಜ್ಞಾನಶಕ್ತಿ ಮಹಿಳೆಯರಲ್ಲಿ ಹೆಚ್ಚಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಇಂದು ಗ್ರಾಮೀಣ ಭಾಗದಲ್ಲಿ ಅನೇಕ ಚಟುವಟಿಕೆ ಮೂಲಕ ತಮ್ಮಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಈ ವೇಳೆ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ ಉಪಸ್ಥಿತರಿದ್ದರು.
----ಬಾಕ್ಸ್---ಸ್ವ ಸಹಾಯ ಸಂಘಗಳಿಂದ ವಸ್ತು ಪ್ರದರ್ಶನ
ಅಂರಾತಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಅಜಾದ್ ಪಾರ್ಕ್ ಬಳಿ ಸ್ವಸಹಾಯ ಗುಂಪುಗಳು ತಯಾರಿಸಿದ ವಸ್ತು, ತಿನ್ನಿಸುಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಜಿಲ್ಲೆಯ ಸುಮಾರು 40 ರಿಂದ 50 ಸ್ವ ಸಹಾಯ ಗುಂಪುಗಳು ಭಾಗವಹಿಸಿದ್ದವು.-- ಫೋಟೋ--
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಸ್ವ ಸಹಾಯ ಗುಂಪುಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತಾ ಉಪಸ್ಥಿತರಿದ್ದರು.