ಕನ್ನಡಪ್ರಭ ವಾರ್ತೆ ಚಿಂತಾಮಣಿ
ತೆಲುಗು ಚಿತ್ರನಟ ಜ್ಯೂನಿಯರ್ ಎನ್‌ಟಿಆರ್‌ರ ಹುಟ್ಟುಹಬ್ಬದ ಪ್ರಯುಕ್ತ ಯಂಗ್ ಟೈಗರ್ ಎನ್‌ಟಿಆರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ರಕ್ತ ಸಂಗ್ರಹಣೆ ಪ್ರಮಾಣ ಕುಸಿತರಕ್ತ ಸಂಗ್ರಹಣೆಯ ಪ್ರಮಾಣದ ಗಣನೀಯವಾಗಿ ಕುಸಿದಿದ್ದು, ಕೆಲವು ತುರ್ತು ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತದ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನು ಅರಿತು ಪ್ರಾಣವನ್ನು ಉಳಿಸುವ ಈ ಕಾಯಕದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸುವುದರ ಜೊತೆಗೆ ಮತ್ತೊಬ್ಬರನ್ನು ಈ ಮಹತ್ತರ ಕಾರ್ಯದತ್ತ ಪ್ರೇರಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆAದು ಕರೆಯಿತ್ತರು. ಸಂಘ ಸಂಸ್ಥೆಗಳು, ಸ್ವಸಹಾಯ ಸಂಘ, ಶ್ರೀಶಕ್ತಿ ಸಂಘಗಳು ಇದರತ್ತ ಗಮನ ಹರಿಸಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಸಲ್ಲಿಸಬೇಕಾಗಿದೆ ಎಂದರು.
110 ಯೂನಿಟ್ ರಕ್ತ ಸಂಗ್ರಹ
ಶಿಬಿರದಲ್ಲಿ ೧೧೦ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಈ ಸಂದರ್ಭದಲ್ಲಿ .ಶ್ರೀಕಾಂತ್, ಜಗದೀಶ್, ಪರಮೇಶ್, ಸುಹಾಸ್, ಭಾರ್ಗವ್, ಮಧು ಮತ್ತಿತರರು ಉಪಸ್ಥಿತರಿದ್ದರು.