ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ ಪ್ರತಿಯೊಬ್ಬ ನೌಕರರು ತಮ್ಮ ಸಮಯವನ್ನು ಸಮಾಜದ ಸೇವೆ ಮೀಸಲಿಡಬೇಕು. ಸಮಾಜದಲ್ಲಿನ ಯುವಕರಿಗೆ ಮಾರ್ಗದರ್ಶನ ಮಾಡುತ್ತ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಬೇಕೆಂದು ಕೋಟೆಕಲ್ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹೊಳೆಹುಚ್ಚೇಶ್ವರ ಶ್ರೀಗಳು ಹೇಳಿದರು.ಕೋಟೆಕಲ್ ಗ್ರಾಮದ ಹೊಳೆಹುಚ್ಚೇಶ್ವರ ಸಂಸ್ಥಾನಮಠದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಯಾದ ವೈ.ಜಿ. ತಳವಾರ ಅವರ ಗೌರವ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರ ವೃತ್ತಿಯಾಗಿದ್ದು, ಒಂದು ಸುಸಂಸ್ಕೃತ ಸಮಾಜ ನಿರ್ಮಾನವಾಗಬೇಕೆಂದರೆ ಶಿಕ್ಷಕನ ಪಾತ್ರ ಸಾಕಷ್ಟಿದೆ. ಅಂತಹ ವೃತ್ತಿ ಮಾಡಿ, ಸೇವೆಯಿಂದ ನಿವೃತ್ತ ತಳವಾರ ಅವರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಕ ವೃತ್ತಿಯ ಜೊತೆಗೆ ನಮ್ಮ ಶ್ರೀಮಠದ ಕಾರ್ಯಗಳಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಅವರ ಜೀವನ ಸುಂದರವಾಗಿರಲಿ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ತಳವಾರ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ್ದಾರೆ. ಅವರ ಸೇವೆ ಸ್ಮರಣೀಯವಾಗಿದ್ದು, ಸಮಾಜಕ್ಕೆ ಇನ್ನಷ್ಟು ಅವರ ಮಾರ್ಗದರ್ಶನ ದೊರೆಯಲಿ ಎಂದು ಹೇಳಿದರು.ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡ್ರ, ಬಾಲಕೀಯರ ಪ್ರೌಢಶಾಲೆ ಉಪಪ್ರಾಚಾರ್ಯ ಎಂ.ಪಿ.ಮಾಗಿ, ಗುರುಸಿದ್ದೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿದರು. ಗುರುಬಸವ ದೇವರು, ಬಸಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಇವೈ.ಜಿ.ತಳವಾರ ಅವರಿಗೆ ಅನೇಕ ಶಿಷ್ಯ ಬಳಗ, ಬಾಲಕಿಯರ ಪ್ರೌಢಶಾಲೆ ಶಿಕ್ಷಕರು, ವಿವಿಧ ಶಾಲೆಗಳ ಶಿಕ್ಷಕರು ಸನ್ಮಾನಿಸಿ, ಗೌರವಿಸಿದರು. ತಳವಾರ ಗುರುಗಳ ಕುಟುಂಬದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಸಸಿಗಳನ್ನು ವಿತರಿಸಿ, ಮರಗಳನ್ನು ಬೆಳೆಸುವಂತೆ ಜಾಗೃತಿ ಮೂಡಿಸಿದರು.ಬಾಗಲಕೋಟೆ ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಗೂಡುರ, ಶಶಿಧರ ದೇಸಾಯಿ, ಫಕಿರಪ್ಪ ತಳವಾರ, ಪಿ.ವಿ. ಜಾಧವ, ಮಲ್ಲಪ್ಪ ತಳವಾರ, ಯಲಗುರದಪ್ಪ ತೊಗಲಂಗಿ, ಉಮಾದೇವಿ ತಳವಾರ, ಕರಿಯಪ್ಪ ಸೀತಿಮನಿ, ಹುಚ್ಚಪ್ಪ ತಳವಾರ, ಮಹದೇವಪ್ಪ ಕೋಟಿ, ಯಮನಪ್ಪ ವಾಲಿಕಾರ, ಹುಚ್ಚಪ್ಪ ಕಡಪಟ್ಟಿ, ಗೋಪಾಲ ತಳವಾರ, ಮಾಗುಂಡಪ್ಪ ಕಮತರ, ಚಂದ್ರು ಕಲ್ಯಾಣಿ, ಸಂಗಮೇಶ ತಳವಾರ, ವಿನೋದ ಗಾಜಿ, ನಾಗರಾಜ ತಳವಾರ, ಹುಚ್ಚೇಶ ಅಮರಣ್ಣವರ, ರಂಗನಾಥ ತಳವಾರ, ಸಿ.ಎಂ.ಕುರುಬರ ಇತರರು ಇದ್ದರು.