ಶಿಗ್ಗಾಂವಿ: ತಾಲೂಕಿನ ಬನ್ನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಲ್ಮೇಶ್ವರ ಹಾಗೂ ಬಸವಣ್ಣ ದೇವರ ದೇವಸ್ಥಾನದ ಲೋಕಾರ್ಪಣೆ ಮತ್ತು ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಹಬ್ಬ-ಹರಿದಿನಗಳು, ವಿಶೇಷ ಪೂಜೆಗಳು ಹಾಗೂ ಧಾರ್ಮಿಕ ಉತ್ಸವಗಳ ಮೂಲಕ ಜನರನ್ನು ಒಂದೆಡೆ ಸೇರಿಸುವ ದೇವಾಲಯಗಳು ಸಮಾಜದಲ್ಲಿ ಸೌಹಾರ್ದತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಮ್ಮ ಆಚರಣೆ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನೂ ದೇವಾಲಯಗಳು ನಿರ್ವಹಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂಕಾಪುರದ ಅರಳೆಲೆಮಠದ ಷ.ಬ್ರ. ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.ಶಿವಾನಂದಯ್ಯ ಹಿರೇಮಠ, ಗ್ರಾಮದ ಹಿರಿಯರಾದ ಸುನಿಲ್ ಸಿದ್ದಣ್ಣವರ, ಬಸವರಾಜ ಲಂಗೋಟಿ, ದೇವಪ್ಪ ಬಡಿಗೇರ, ವೀರನಗೌಡ ಹೊನ್ನಾಗೌಡ್ರ, ಟಿ.ವಿ. ಪಾಟೀಲ್, ಕುಬೇರಗೌಡ್ರ ಪೋಲೀಸಗೌಡ್ರ, ತಮ್ಮನಗೌಡ್ರ ಪೋಲೀಸಗೌಡ್ರ, ಸಣ್ಣಪ್ಪ ಲಂಗೋಟಿ, ನಿಸ್ಸಿಮಪ್ಪ ಗಣಿಗೇರ, ರೇವಣಶಿದ್ದಯ್ಯ ಹಿರೇಮಠ, ದೇವರಾಜಗೌಡ ಹೊನ್ನಾಗೌಡ್ರ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರು ಪಾಲ್ಗೊಂಡಿದ್ದರು.