ಕಾಡುಕೊತ್ತನಹಳ್ಳಿಯಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ

KannadaprabhaNewsNetwork |  
Published : May 02, 2025, 12:10 AM IST
1ಕೆಎಂಎನ್ ಡಿ24 | Kannada Prabha

ಸಾರಾಂಶ

ಶ್ರೀವೀರಭದ್ರಸ್ವಾಮಿ ಹಾಗೂ ಭೈರವೇಶ್ವರಸ್ವಾಮಿಗೆ ಪುಣ್ಯಾಹಃವಾಚನ ಹಾಗೂ ಗಂಗಾಕ್ಷೀರ ಜಲ ಹಾಗೂ ಗಣಪತಿ ಹೋಮ, ರಕ್ಷಾಬಂಧನ ಸೇರಿದಂತೆ ವಿವಿಧ ಹೋಮಗಳು, ಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಶ್ರೀಭೈರವೇಶ್ವರ (ಬೋರೇದೇವರು) ಪ್ರತಿಷ್ಟಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀವೀರಭದ್ರಸ್ವಾಮಿ ಹಾಗೂ ಭೈರವೇಶ್ವರಸ್ವಾಮಿಗೆ ಪುಣ್ಯಾಹಃವಾಚನ ಹಾಗೂ ಗಂಗಾಕ್ಷೀರ ಜಲ ಹಾಗೂ ಗಣಪತಿ ಹೋಮ, ರಕ್ಷಾಬಂಧನ ಸೇರಿದಂತೆ ವಿವಿಧ ಹೋಮಗಳು, ಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು.

ಬೆಳಗ್ಗೆ 5.30ರಿಂದ 6.20ರೊಳಗೆ ದೇವರ ಪ್ರತಿಷ್ಟಾಪನಾ ನಂತರ ಪ್ರಾಣ ಪ್ರತಿಷ್ಟಾಪನಾ ಮತ್ತು ಪೂರ್ಣಾಹುತಿ ಹೋಮದೊಡನೆ ವಿಮಾನ ಗೋಪುರ ಕಳಸ ಸ್ಥಾಪನೆಯೂ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಧ್ವಜಾರೋಹಣ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕನಕಪುರ ದೇಗುಲಮಠದ ಡಾ.ಮುಮ್ಮಡಿ ನಿರ್ವಾಣಮಹಾಸ್ವಾಮೀಜಿ, ಹುಲ್ಲಹಳ್ಳಿ ಶ್ರೀಶಾಂತಮಲ್ಲಿಕಾರ್ಜುನ ಕ್ಷೇತ್ರ ವಿರಕ್ತಮಠದ ಶ್ರೀಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀ, ಶಾಸಕರಾದ ಕೆ.ಎಂ.ಉದಯ್, ಮಧು ಜಿ.ಮಾದೇಗೌಡ, ಮಾಜಿ ಎಂಎಲ್‌ಸಿ ಡಿ.ಎಸ್.ವೀರಯ್ಯ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ಜಿಲ್ಲಾ ಸಮಾಜ ಸೇವಕರಾದ ನಂಜುಂಡಪ್ಪ, ಸಿ.ರಾಮು, ಪ್ರೇಮ ಯುವರಾಜು,

ಪೊಲೀಸ್ ಇನ್ಸ್‌ ಪೆಕ್ಟರ್ ಆನಂದ್ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಭಾಗವಹಿಸಿದ್ದ ಎಲ್ಲಾ ಅತಿಥಿಗಳಿಗೆ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಶಾಸಕರಿಂದ ಚಾಲನೆ

ಕೆ.ಆರ್.ಪೇಟೆ:

ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸುವ ಮೂಲಕ ರೈತರು ತಮ್ಮ ಜಾನುವಾರಗಳ ರಕ್ಷಣೆ ಜೊತೆಗೆ ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.

ತಾಲೂಕಿನ ಚಟ್ಟೇನಹಳ್ಳಿಯಲ್ಲಿ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಲುಬಾಯಿ ಜ್ವರ ದನ, ಎಮ್ಮೆ, ಕುರಿ, ಮೇಕೆಗಳಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗ. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ನಿಯಂತ್ರಿಸದಿದ್ದರೆ, ಜಾನುವಾರುಗಳ ಪ್ರಾಣಕ್ಕೆ ತೊಂದರೆಯಾಗಲಿದೆ ಎಂದರು.

ರೈತರು ನಷ್ಟ ತಪ್ಪಿಸಿಕೊಳ್ಳಲು ಕಾಲುಬಾಯಿ ರೋಗ ನಿಯಂತ್ರಣ ಹಾಗೂ ರೋಗ ನಿರ್ಮೂಲನೆ ಮಾಡುವುದು ಬಹಳ ಮುಖ್ಯ. ಹಾಗಾಗಿ ರೈತರು ಲಸಿಕೆ ಹಾಕಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು.

ಈ ವೇಳೆ ಡೇರಿ ಅಧ್ಯಕ್ಷ ಸಣ್ಣಹನುಮೇಗೌಡ, ಗ್ರಾಪಂ ಮಾಜಿ ಸದಸ್ಯ ನಾಗರಾಜು, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ದೇವರಾಜು, ಪಶು ವೈದ್ಯಾಧಿಕಾರ ಡಾ.ಕೆ.ಪಿ.ರವಿಕುಮಾರ್, ಜಾನುವಾರು ಅಭಿವೃದ್ಧಿ ಅಧಿಕಾರಿ ಬಿ.ಕೆ.ಅಪ್ಪಾಜಿ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ