ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಅವರು ತೀವ್ರನಿಘಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನಾಗೇಶ್ ಆಸ್ಪತ್ರೆ ಹಲವಾರು ನೂತನ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಂಡಿರುವುದು ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ತುಂಬಾ ಉಪಯುಕ್ತವಾಗಲಿದೆ ಎಂದರು. ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ನೂತನ ಮ್ಯಾಡ್ಯುಲಾರ್ ಆಪರೇಷನ್ ಥಿಯೇಟರ್ ಅನ್ನು ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡರು ಉದ್ಘಾಟಿಸಿ ಶುಭಾಶಯಗಳನ್ನು ಕೋರಿದರು. ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಕೆ ನಾಗೇಶ್ ಮಾತನಾಡಿ, ಕಳೆದ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾಗೇಶ್ ಆಸ್ಪತ್ರೆಯನ್ನು ನವೀಕೃತಗೊಳಿಸಿ ಮೇಲ್ದರ್ಜೆಗೇರಿಸಿದ್ದು ನೂತನ ಜೀವ ರಕ್ಷಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯವಿರುವ ಮ್ಯಾಡ್ಯುಲಾರ್ ಆಪರೇಷನ್ ಥಿಯೇಟರ್ ಅನ್ನು ನಿರ್ಮಿಸಲಾಗಿದ್ದು ರೋಗಿಗಳ ಚಿಕಿತ್ಸೆಗೆ ಒಂದು ಹೊಸ ಆಯಾಮ ನೀಡಲಾಗಿದೆ ಎಂದು ಹೇಳಿದರು. ಸುಸಜ್ಜಿತ ಹೈಟೆಕ್ ಲ್ಯಾಬೋರೇಟರಿ, ಅತ್ಯಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಿಜಿಟಲ್ ಎಕ್ಸರೇ, ತುರ್ತು ಚಿಕಿತ್ಸಾ ಘಟಕ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಕತ್ತರಿಘಟ್ಟದ ಚಂದ್ರಶೇಖರ್ ಗುರೂಜಿ, ಡಿವೈಎಸ್ಪಿ ಕುಮಾರ್, ತಹಸೀಲ್ದಾರ್ ಶಂಕರಪ್ಪ, ಮುಖಂಡರಾದ ಶಂಕರ್, ಅಣತಿ ಆನಂದ್, ಹಡೇನಹಳ್ಳಿ ಲೋಕೇಶ್, ಸಿ ಎನ್ ಅಶೋಕ್, ರಾಜಕುಮಾರ್, ಆನಂದ್ ಕಾಳೇನಹಳ್ಳಿ, ಚಂದ್ರು ಕಾಳೇನಹಳ್ಳಿ, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಮೇಟಿಕೆರೆ ಹಿರಿಯಣ್ಣ, ಪಾಲ್ಗೊಂಡು ಶುಭಹಾರೈಸಿದರು.ಡಾ. ಹನೀಫ್, ಡಾ. ವಿಶ್ವೇಶ್ವರಯ್ಯ, ಡಾ. ಸಿ ಆರ್ ರಮೇಶ್ ಮತ್ತು ಅನೇಕ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಡಾ. ಭಾರತಿ ನಾಗೇಶ್, ಕೇಶವಮೂರ್ತಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.