ಮಾನವೀಯತೆ ಮರೆತು ಏನೇ ಸಾಧಿಸಿದರೂ ಅದು ಬರೀ ಶೂನ್ಯ

KannadaprabhaNewsNetwork |  
Published : Jul 24, 2026, 02:15 AM IST
45 | Kannada Prabha

ಸಾರಾಂಶ

, ಹಿಂದೆ ಇದ್ದ ಕಡಿಮೆ ಅಗತ್ಯಗಳಲ್ಲಿ ಅಪರಿಮಿತ ಸಾಧನೆ ಮಾಡಿದವರು ನಮ್ಮ ಹಿಂದಿನವರು,

ಕನ್ನಡಪ್ರಭ ವಾರ್ತೆ ಮೈಸೂರುಮಾನವೀಯತೆ ಮರೆತು ನಾವು ಏನೇ ಸಾಧನೆ ಮಾಡಿದರೂ ಬರೇ ಶೂನ್ಯ ಸಂಪಾದನೆ ಎಂದು ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್. ಆನಂದರಾಜು ಹೇಳಿದರು.ರೂಪಾನಗರದ ದೀಪಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಹಿಂದೆ ಇದ್ದ ಕಡಿಮೆ ಅಗತ್ಯಗಳಲ್ಲಿ ಅಪರಿಮಿತ ಸಾಧನೆ ಮಾಡಿದವರು ನಮ್ಮ ಹಿಂದಿನವರು, ಆದರೆ ಈಗ ಎಲ್ಲ ಸೌಲಭ್ಯಗಳಿದ್ದರೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೆ ವಂಚಿತರಾಗುತ್ತಿರುವ ಇಂದಿನ ನಮ್ಮ ಯುವ ಜನತೆ ಎತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಕಾರ್ಯದರ್ಶಿ ವಿ.ಎನ್. ಸುಂದರ್ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ದೊರಕುವ ಮಿತ ಸಂಪನ್ಮೂಲಗಳನ್ನು ಬಳಸಿ ಅಪರಿಮಿತ ಸಾಧನೆ ಮಾಡಬೇಕು, ಈಗ ಹೆಚ್ಚಿನ ಸಾಧನೆಯನ್ನು ಸಹ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳೇ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ತಾವು ಸಹ ಕಡಿಮೆ ಸವಲತ್ತು ಇರುವ ಪರಿಸರದಲ್ಲಿ ಬಡತನದಲ್ಲಿ ಓದಿದ ತಮ್ಮ ಶೈಕ್ಷಣಿಕ ದಿನಗಳನ್ನು ನೆನಪಿಸಿಕೊಂಡರು. ಜತೆಗೆ ಇದೇ ನಿಟ್ಟಿನಲ್ಲಿ ನಮ್ಮ ದೀಪ ಶಿಕ್ಷಣ ಮತ್ತು ಸೇವಾ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆರವಾಗುವ ದಿಶೆಯಲ್ಲಿ ಸಾಗುತ್ತಿದೆ ಎಂದು ಪ್ರಶಂಶಿಸಿ, ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಪ್ರಾಮಾಣಿಕ ಬೋಧಕ ವರ್ಗವಿದೆ ಎಂದು ಅವರ ಕಾರ್ಯಸಾಧನೆ ನೆನಪಿಸಿಕೊಂಡರು.ಪದಗ್ರಹಣ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯ ಬೋಧನೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರಣೀತ ಎರ್ಮಾಳ್ ಅವರು ನೆರವೇರಿಸಿದರು. ಪದಗ್ರಹಣ ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ, ಮುಖ್ಯೋಪಾಧ್ಯಾಯಿನಿ ಶಿಲ್ಪಾ ಜಗದೀಶ್, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್‌ ಹೆಸರಿನಲ್ಲಿ ನಡೆಯುತ್ತಿರುವುದು ಟೂಲ್‌ಕಿಟ್‌ ರಾಜಕಾರಣ: ಸಿ.ಟಿ.ರವಿ
ಕಾಫಿನಾಡಿನಲ್ಲಿ ಶೇ.6ರಷ್ಟು ಮಾತ್ರ ಬಿತ್ತನೆ: ಒಣಗುತ್ತಿದೆ ಬಿತ್ತಿದ ಬೆಳೆ