ಇಂಡಿಯಾ ಕೂಟಕ್ಕೆ ಸೋಲು ಖಚಿತ: ಶ್ರೀರಾಮುಲು

KannadaprabhaNewsNetwork |  
Published : Mar 29, 2024, 12:49 AM ISTUpdated : Mar 29, 2024, 03:45 PM IST
 ಶ್ರೀರಾಮುಲು | Kannada Prabha

ಸಾರಾಂಶ

ರಾಜ್ಯದ ಪಜಾ, ಪಪಂದ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಗ್ಯಾರಂಟಿ ನೀಡುವ ಭರದಲ್ಲಿ ಎಲ್ಲ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿ ಮಾಡಿದ್ದಾರೆ.

ಹೂವಿನಹಡಗಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವವೇ ತಿರುಗಿ ನೋಡುವಂತೆ ಆಡಳಿತ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಜನ ಮೋದಿ ಕಡೆಗೆ ಇದ್ದರೆ, ಅತ್ತ ಇಂಡಿಯಾ ಕೂಟ ಬಿಜೆಪಿ ಸೋಲಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಕೊನೆ ಗಳಿಗೆಯಲ್ಲಿ ಇಂಡಿಯಾ ಕೂಟವೇ ಸೋಲಲಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

ತಾಲೂಕಿನ ಹಿರೇಮಲ್ಲನಕೆರೆ, ಕೊಂಬಳಿ, ಸೋವೇನಹಳ್ಳಿ ಸೇರಿದಂತೆ ವಿವಿಧ ಕಡೆಗಳಲಲ್ಲಿ ಕೈಗೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ 38 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲವು ಸಾಧಿಸಲಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರೂ ಸೇರಿದಂತೆ ಯಾರಿಗೂ ಸಮಧಾನವಿಲ್ಲ, ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. 

ವಿಧಾನ ಸೌಧ ಎಲ್ಲ ಮಹಡಿಯಲ್ಲಿಯೂ ಭ್ರಷ್ಟಾಚಾರವೇ ತುಂಬಿಕೊಂಡಿದೆ ಎಂದು ಆರೋಪಿಸಿದರು.ರಾಜ್ಯದ ಪಜಾ, ಪಪಂದ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಗ್ಯಾರಂಟಿ ನೀಡುವ ಭರದಲ್ಲಿ ಎಲ್ಲ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿ ಮಾಡಿದ್ದಾರೆ. 

ಒಂದು ಬಾಗಿಲಿನಿಂದ ಕಿತ್ತುಕೊಂಡು ಇನ್ನೊಂದು ಬಾಗಿಲಿನಿಂದ ಕೊಡುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನ ಬಣ್ಣದ ಮಾತುಗಳಿಗೆ ಮರಳಾಗದೇ ಇಡೀ ವಿಶ್ವದಲ್ಲೇ ಭಾರತ 1ನೇ ಸ್ಥಾನದಲ್ಲಿ ಬರಲು ಬಿಜೆಪಿ ಮತ ಹಾಕಬೇಕೆಂದು ಮನವಿ ಮಾಡಿದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಶಾಸಕ ನೀಡಬೇಕಿದ್ದ 2 ಕೋಟಿ ಅನುದಾನ ನೀಡಲು ಅವರಿಗೆ ಆಗುತ್ತಿಲ್ಲ, ಪಜಾ, ಪಪಂ ಸಮುದಾಯಗಳ ₹34 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. 

ರೈತರಿಗೆ ₹2 ಸಾವಿರ ಬರ ಪರಿಹಾರ ನೀಡಿ ರೈತರಿಗೆ ಅವಮಾನ ಮಾಡಿದ್ದಾರೆ. ಇಡೀ 35 ವರ್ಷಗಳಲ್ಲಿ ಇಂತಹ ಭಂಡ ಸರ್ಕಾರವನ್ನು ನಾವು ನೋಡಿಲ್ಲ ಎಂದು ದೂರಿದರು.

ಸಾವಿರ ಸುಳ್ಳುಗಳನ್ನು ಹೇಳಿ ಸರ್ಕಾರ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ, ಈ ಬಾರಿ ಜನ ತಕ್ಕ ಪಾಠ ಕಳಿಸುತ್ತಾರೆ. 

ಮುಂದಿನ ದಿನಗಳ ಒಳ್ಳೆಯ ದಿನಗಳು ಬರಲಿದ್ದು, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಮತ ಹಾಕಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಮುಖಂಡ ಓದೋ ಗಂಗಪ್ಪ, ಜೆಡಿಎಸ್‌ ಮುಖಂಡ ಪುತ್ರೇಶ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಎಸ್‌.ಸಂಜೀವರೆಡ್ಡಿ, ಮಂಡಲ ಬಿಜೆಪಿ ಅಧ್ಯಕ್ಷ ಹಣ್ಣಿ ಶಶಿಧರ, ಸುಭಾಷ ಕರೆಂಗಿ, ತೋಟಾನಾಯ್ಕ, ಹಂಪಸಾಗರ ಕೋಟೆಪ್ಪ, ಎಂ.ಪರಮೇಶಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ