ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ರೋಟರಿ ಎಂ.ಎಸ್.ಇ.ಸಿ.ಟಿ ಮತ್ತು ಕಮಲಾ ರಂಜಿತ್ ಎಜುಕೇಷನ್ ಸೊಸೈಟಿಯ ದಿ ಆಕ್ಮಿ ಶಾಲೆಯ 24ನೇ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಸಂದರ್ಭದಲ್ಲಿ ಗೆಲುವು ಸೋಲುಗಳು ಸಾಮಾನ್ಯವಾಗಿರುತ್ತವೆ. ಆದರೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಸ್ವಯಂ ಪ್ರೇರಣೆಗೆ ಹೆಚ್ಚಿನ ಮಹತ್ವ ನೀಡಬೇಕು. ನಾವು ಎಷ್ಟು ಸ್ವಯಂ ಪ್ರೇರಣೆಗೆ ಮಹತ್ವ ನೀಡುತ್ತೇವೆಯೋ ಅಷ್ಟು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಕಲಿಕೆ ನಿರಂತರವಾಗಿಬೇಕು ಹಾಗೂ ದೇಶದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುತ್ತಾ ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ರಟನ್ ಟಾಟಾ ಅವರನ್ನು ಬದುಕಿನ ಪ್ರೇರಣಾ ಶಕ್ತಿಯಾಗಿ ಸ್ವೀಕರಿಸಬಹುದು ಎಂದು ಅವರು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಿಗೆ ಹಿತವಲ್ಲದ ಆಹಾರದ ಬಳಕೆ ಕಡಿಮೆ ಮಾಡಿ ಹಿತ ಆಹಾರವನ್ನು ಸೇವಿಸಿ ಆರೋಗ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕೆಂದು ಹೇಳಿದರು.
ಕಮಲಾ ರಂಜಿತ್ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಆರ್. ಅರುಣ್ ಸಿಂಗ್, ಸಮಿತಿ ಸದಸ್ಯರಾದ ಆರ್. ಸುಭಾಷಿಣಿ ಹಾಗೂ ಪ್ರವೀಣ್ ಸಿಂಗ್ ಹಾಗೂ ಆಕ್ಮಿ ಶಾಲೆಯ ಪ್ರಾಂಶುಪಾಲೆ ಎಸ್. ಶ್ವೇತ ಚೌಹಾಣ್, ಮುಖ್ಯ ಶಿಕ್ಷಕಿ ಶ್ರೀದೇವಿ ಇದ್ದರು.
ನಂತರದಲ್ಲಿ ಗಣೇಶನ ಸ್ತುತಿಯೊಂದಿಗೆ ಮಕ್ಕಳು ಪ್ರಸ್ತುತಪಡಿಸಿದ ರಾಮಾಯಣ ನೃತ್ಯರೂಪಕ, ಅರ್ಜುನ ಆನೆ ಸ್ಮರಣಾತ್ಮಕ ನೃತ್ಯ, ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರಿಗೆ ಗೌರವ ಸಲ್ಲಿಸುವ ನೃತ್ಯ ರೂಪಕಗಳು ಹಾಗೂ ಇನ್ನಿತರ ಪುಟಾಣಿ ಮಕ್ಕಳ ನೃತ್ಯರೂಪಕದೊಂದಿಗೆ 14 ವರ್ಣರಂಜಿತ ಸಾಂಸ್ಕೃತಿಕ ಕಲಾತ್ಮಕ ಕಾರ್ಯಕ್ರಮಗಳು ವಾರ್ಷಿಕೋತ್ಸವಕ್ಕೆ ಮೆರಗು ನೀಡಿದವು.