ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಐಎಂ ಪಕ್ಷದ ತಾಲೂಕು ಸಮಿತಿ ವತಿಯಿಂದ ಸಂಘಟಿಸಿದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಿಯನ್ನು ಅಧಿಕಾರಕ್ಕೆ ತಂದಂತೆ. ಜಾತಿ ಮತ್ತು ಲಿಂಗ ತಾರತಮ್ಯವನ್ನು ಮೈಗೂಡಿಸಿಕೊಂಡಿರುವ ಬಿಜೆಪಿಯನ್ನು ತಿರಸ್ಕರಿಸೋಣ. ದುಡಿಯುವ ವರ್ಗವನ್ನು ಬಿಜೆಪಿ ಸಂಕಷ್ಟಕ್ಕೀಡು ಮಾಡಿದ್ದು, ಜನಹಿತವನ್ನು ಕಿತ್ತುಕೊಂಡಿದೆ. ಬಿಜೆಪಿಯನ್ನು ಸೋಲಿಸುವುದೆ ಸಿಪಿಐಎಂ ಪಕ್ಷದ ಗುರಿಯಾಗಿದೆ ಎಂದರು.ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಆರ್.ಎಸ್. ಬಸವರಾಜ ಮಾತನಾಡಿ, ದೇಶದಲ್ಲಿ ಮೋದಿಯವರಿಂದ ಒಳ್ಳೆಯ ದಿನಗಳನ್ನು ನಿರೀಕ್ಷಿಸಕೂಡದು. ತೈಲ ಬೆಲೆ ಏರಿಕೆ, ಜಾತಿ ಜಾತಿ ಜಗಳ, ಕೋಮುಗಲಭೆಗಳು ಹೆಚ್ಚು ನಡೆದಿರುವುದು ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ. ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿರುವ ಮೋದಿಯನ್ನು ಸಂಪೂರ್ಣ ನಿರ್ಲಕ್ಷಿಸುವ ಅಗತ್ಯವಿದೆ. ಮಹಿಳಾ ವಿರೋಧಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದರು.
ಸಿಪಿಐಎಂನ ಮಾಳಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಎಸ್. ಜಗನ್ನಾಥ, ಬಿ. ಮೈಲಮ್ಮ. ಹುಲುಗಪ್ಪ, ಕೆ. ಗಾಳೆಪ್ಪ ಇತರರಿದ್ದರು.