ಲೋಕಸಭಾ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾಕಾಂಗ್ರೆಸ್ಸಿನವರ ಕುತಂತ್ರದಿಂದ ಬಿಜೆಪಿಗೆ ಸೋಲಾಗಿದೆ. ಆದರೆ ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗಬೇಕೆನ್ನುವ ಈ ದೇಶದ ಜನತೆಯ ಸಂಕಲ್ಪ ಈಡೇರಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ತಾಲೂಕಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಲೋಕಸಭಾ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನ ಬದಲಾಯಿಸುತ್ತದೆ ಎನ್ನುವ ಕಾಂಗ್ರೆಸ್ಸಿನವರ ಅಪಪ್ರಚಾರದಿಂದ ಬಿಜೆಪಿಯ ಸಾಕಷ್ಟು ಅಭ್ಯರ್ಥಿಗಳು ಸೋಲು ಅನುಭವಿಸಬೇಕಾಯಿತು. ಆದರೆ ನರೇಂದ್ರ ಮೋದಿಯವರನ್ನು ಈ ದೇಶದ ಜನತೆ 3ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅದನ್ನು ತಪ್ಪಿಸಲು ಕಾಂಗ್ರೆಸ್ಸಿಗರಿಗೆ ಆಗಲಿಲ್ಲ ಎಂದು ಹೇಳಿದರು.
ಲೋಕಸಭಾ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿನಕುಮಾರ ಗುಳಗಣ್ಣನವರ್ ಮಾತನಾಡಿದರು.ಈ ಸಂದರ್ಭ ವಿಪ ಸದಸ್ಯ ಹೇಮಲತಾ ಪಾಟೀಲ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಭೂತೆ ಹಾಗೂ ಅರವಿಂದಗೌಡ ಪಾಟೀಲ, ಮಾರುತಿ ಗಾವರಾಳ, ಶಿವಶಂಕರರಾವ್ ದೇಸಾಯಿ, ಸುರೇಶಗೌಡ ಶಿವನಗೌಡ್ರ, ಅಮರೇಶ ಹುಬ್ಬಳ್ಳಿ, ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಅಶೋಕ ಅರಕೇರಿ, ಶಕುಂತಲಾದೇವಿ ಮಾಲಿಪಾಟೀಲ, ಸಂತೋಷಿಯಾ ಜೋಷಿ, ಶಿವಲೀಲಾ ದಳವಾಯಿ, ಸೋಮನಗೌಡ ಪಾಟೀಲ, ಫಕೀರಪ್ಪ ತಳವಾರ, ಅಯ್ಯನಗೌಡ ಕೆಂಚಮ್ಮನವರ್, ಸಿದ್ರಾಮೇಶ ಬೇಲೇರಿ, ಕಲ್ಲೇಶ ಕರಮುಡಿ, ಮತ್ತಿತರರು ಇದ್ದರು.