ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ ಹೋಗುತ್ತಿದ್ದಾಗ ಮಸೀದಿ ಒಳಗಿನಿಂದ ಕಲ್ಲು ತೂರಿದ ಘಟನೆ ನಡೆದಿದೆ. ಇದರಿಂದ ಹಲವಾರು ಜನರಿಗೆ ಗಾಯಗಳಾಗಿದ್ದರೂ ಸರ್ಕಾರ ಇನ್ನೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಬಿಜೆಪಿ ಮುಖಂಡ ಎ.ಬಿ.ಹನುಮಂತಪ್ಪ ಆರೋಪಿಸಿದ್ದಾರೆ.
- ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಮುಖಂಡ ಎ.ಬಿ.ಹನುಮಂತಪ್ಪ ಹೇಳಿಕೆ
- - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ ಹೋಗುತ್ತಿದ್ದಾಗ ಮಸೀದಿ ಒಳಗಿನಿಂದ ಕಲ್ಲು ತೂರಿದ ಘಟನೆ ನಡೆದಿದೆ. ಇದರಿಂದ ಹಲವಾರು ಜನರಿಗೆ ಗಾಯಗಳಾಗಿದ್ದರೂ ಸರ್ಕಾರ ಇನ್ನೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಬಿಜೆಪಿ ಮುಖಂಡ ಎ.ಬಿ.ಹನುಮಂತಪ್ಪ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶನಿವಾರ ಹಲವಾರು ಬಿಜೆಪಿ ಮುಖಂಡರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗ ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಅಗಮಿಸಿ ತಹಸೀಲ್ದಾರ್‌ಗೆ ಮನವಿ ಅರ್ಪಣೆ ವೇಳೆ ಅವರು ಮಾತನಾಡಿದರು.
ಹಿಂದೂಗಳು ಗಣೇಶ, ಛತ್ರಪತಿ ಶಿವಾಜಿ ಅಥವಾ ಇನ್ಯಾವುದೇ ಮರೆವಣಿಗೆ ನಡೆದರೆ ಹಿಂದೂ ವಿರೋಧಿಗಳು ಕಲ್ಲು ತೂರಾಟ ನಡೆಸುತ್ತಾರೆ. ಆದರೆ ಮುಸ್ಲಿಂರು ಯಾವುದೇ ಮೆರವಣಿಗೆ ನಡೆಸಿದ್ದರೂ ಹಿಂದೂಗಳು ಬಹಳ ಸೌಹಾರ್ದದಿಂದ ನಡೆದುಕೊಳ್ಳುತ್ತಾರೆ ಎಂದರು.
ಎಂ.ಆರ್.ಮಹೇಶ್ ಮಾತನಾಡಿ, ಬೆಳಗಾವಿಯಲ್ಲಿ ಕೆಲ ಕಿಡಿಗೇಡಿಗಳು ಅಪ್ರತಿಮ ವೀರಾ ಸೇನಾನಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಖಂಡನಿಯ. ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಹಿಂದೂ ವಿರೋಧಿ ನೀತಿ ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಭಗ್ನ ಸೇರಿದಂತೆ ಹಲವಾರು ಅಪಮಾನಗಳನ್ನು ಹಿಂದೂ ಧರ್ಮ ಎದುರಿಸಬೇಕಾಗಿದೆ ಎಂದರು.
ಮರಾಠ ಸಮಾಜದ ಮುಖಂಡ ನೆಲಹೊನ್ನೆ ದೇವರಾಜ್, ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಮಾತನಾಡಿದರು. ಯಕ್ಕನಹಳ್ಳಿ ಜಗದೀಶ್, ಚನ್ನಪ್ಪ, ಅಜೆಯ, ಸಿದ್ದೇಶ್ ಹಾಗೂ ಇತರರು ಇದ್ದರು. ಈ ವೇಳೆ ಆರೋಪಿಗಳ ವಿರುದ್ಧ ಕ್ರಮ ಜರುಗಿ ಸಬೇಕೆಂದು ಗ್ರೇಡ್-2 ತಹಸೀಲ್ದಾರ್ ಸುರೇಶ್ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
- - - -21ಎಚ್.ಎಲ್.ಐ1:
ಛತ್ರಪತಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೋರಾಟ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೋಪಗೊಳಿಸಿದ ಘಟನೆ ಘಟನೆಗಳನ್ನು ಖಂಡಿಸಿ ಹಾಗೂ ಆರೋಪಿಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಪ್ರತಿಭಟನೆ ನಡೆಸಿನಂತರ ಗ್ರೇಡ್-2 ತಹಸೀಲ್ದಾರ್ ಸುರೇಶ್‌ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.