ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆ, ನಂಬಿಕೆ ಹಾಗೂ ಪುರಾತನ ಸಂಸ್ಕೃತಿಯ ಆಚರಣೆ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರಗಳನ್ನು ರೂಡಿಕೊಳ್ಳುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ಪ್ರಸ್ತುತ ಯುವ ಪೀಳಿಗೆಗಳು ಸಂಸ್ಕಾರ ಕಲಿತುಕೊಳ್ಳುವ ಮೂಲಕ ಮುಂದಿನ ಬೆಳವಣಿಗೆಗೆ ಸಹಕಾರ ನೀಡಬೇಕು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಗಳ ಅಭಿವೃದ್ಧಿ, ಕುಟುಂಬ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ, ಸಮಾಜದಲ್ಲಿನ ಅಸಹಾಯಕರಿಗೆ ಆಶ್ರಯವಾಗುವ ಜೊತೆಗೆ ಅವರ ಸೇವೆಗೆ ನಿರಂತರ ಶ್ರಮ ವಹಿಸುತ್ತದೆ ಎಂದರು.
ದೇವಾಲಯದ ಪ್ರದಾನ ಅರ್ಚಕ ಸೂರ್ಯನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಿ-ವಿಧಾನಗಳ ಮೂಲಕ ನೆರವೇರಿಸಿ. ಧಾರ್ಮಿಕ ಪ್ರವಚ ನೀಡಿದರು.ಈ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎನ್.ದಯಾನಂದ್, ಸದಸ್ಯೆ ಭಾಗ್ಯಮ್ಮ, ಶಿವಣ್ಣ ಚಂದಗಾಲು, ನಳಿನ, ಶೀಲಾ ನಂಜುಂಡಯ್ಯ, ವಿಶಾಲಾಕ್ಷಿ, ಯೋಜನಾಧಿಕಾರಿ ಗಣಪತಿ ಭಟ್ಟ, ಸುಜಾತಾ, ಪವನ್, ಸಂಗೀತಾ ಉಪಸ್ತಿತರಿದ್ದರು. ನೂರಕ್ಕೂ ಹೆಚ್ಚು ಸಂಘದ ಸದಸ್ಯರು ಸಾಮೂಹಿಕ ದೇವಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ಸಿಗರ ಅರೆಬೆತ್ತಲೆ ಮೆರವಣಿಗೆ ಖಂಡಿಸಿ ಪ್ರತಿಭಟನೆ
ದೆಹಲಿಯಲ್ಲಿ ನಡೆಯುತ್ತಿರುವ ಎ.ಐ. ಶೃಂಗ ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅರೆಬೆತ್ತಲೆ ಪ್ರತಿಭಟನೆ ನಡೆಸಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಳವಳ್ಳಿ-ಮದ್ದೂರು ಮಾರ್ಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಎ.ಐ ಶೃಂಗ ಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ದೇಶದ ಮಾನ ಹರಾಜು ಮಾಡಿದೆ. ಪಕ್ಷದ ವರಿಷ್ಠ ರಾಹುಲ್‌ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದು ಮತ್ತು ಇಂತಹ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಹಾಗಲಹಳ್ಳಿ ರಘು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಯುವಮೋರ್ಚಾ ತಾಲೂಕು ಉಪಾಧ್ಯಕ್ಷ ಎಸ್.ಕೆ.ಅಭಿಷೇಕ್‌ಗೌಡ, ಪದಾಧಿಕಾರಿಗಳಾದ ಎಂ.ಸಿ.ಸಿದ್ಧು, ಮಧುಕುಮಾರ್, ಲಿಂಗಪ್ಪ, ಸಂತೋಷ್ ನೇತೃತ್ವ ವಹಿಸಿದ್ದರು.