ಪರಿಹಾರ ವಿಳಂಬ: ಕೆಐಎಡಿಬಿ ಕಚೇರಿ ಪೀಠೋಪಕರಣ ಜಪ್ತಿ

KannadaprabhaNewsNetwork |  
Published : Oct 29, 2026, 01:30 AM IST
ಎಕಲಮಟ್ಟಿ ಏತ ನೀರಾವರಿ ಯೋಜನೆಯನ್ನು ಪೂರ್ಣ ಗೊಳಿಸುವಂತೆ ಆಗ್ರಹಿಸಿ ಜಮಖಂಡಿ ತಾಲುಕು ಚಿಕ್ಕಲಕಿ ಕ್ರಾಸ್‌ ಬಳಿ ರೈತರು ರಸ್ತೆ ತಡೆದು ಪ್ರತಿಭಟಿಸಿದರು | Kannada Prabha

ಸಾರಾಂಶ

ಭೂ ಸ್ವಾಧೀನಪಡಿಸಿಕೊಂಡಿದ್ದರೂ 25 ವರ್ಷಗಳಿಂದ ಸಂತ್ರಸ್ತ ಐವರು ರೈತರಿಗೆ ಪರಿಹಾರ ನೀಡದ ಹಿನ್ನೆಲೆ ಕೆಐಎಡಿಬಿ ಕಚೇರಿ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಜಪ್ತಿ ಮಾಡಿದ ಘಟನೆ ನಗರದ ಕೆಐಎಡಿಬಿ ಕಚೇರಿಯಲ್ಲಿ ನಡೆದಿದೆ.

- 52 ಎಕರೆ ಹಣಕ್ಕಾಗಿ 25 ವರ್ಷದಿಂದ ಹಿರೇಕೆರೂರು ತಾ. ಚಟ್ನಹಳ್ಳಿ ಐವರು ರೈತರ ಹೋರಾಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೂ ಸ್ವಾಧೀನಪಡಿಸಿಕೊಂಡಿದ್ದರೂ 25 ವರ್ಷಗಳಿಂದ ಸಂತ್ರಸ್ತ ಐವರು ರೈತರಿಗೆ ಪರಿಹಾರ ನೀಡದ ಹಿನ್ನೆಲೆ ಕೆಐಎಡಿಬಿ ಕಚೇರಿ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಜಪ್ತಿ ಮಾಡಿದ ಘಟನೆ ನಗರದ ಕೆಐಎಡಿಬಿ ಕಚೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾ. ಚಟ್ನಹಳ್ಳಿ ಗ್ರಾಮದ ಬಳಿ 150 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಚಟ್ನಹಳ್ಳಿ ಗ್ರಾಮದ ಐವರು ರೈತರಿಗೆ ಸೇರಿದ 52 ಎಕರೆ ಭೂಮಿಗೆ ಪರಿಹಾರವನ್ನೇ ಕೆಐಎಡಿಬಿ ನೀಡಿರಲಿಲ್ಲ. ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಕೆಐಎಡಿಬಿಯಿಂದ ಪರಿಹಾರ ಕೋರಿ 25 ವರ್ಷಗಳಿಂದಲೂ ಐದೂ ಜನ ರೈತರು ಕಾನೂನು ಹೋರಾಟ ನಡೆಸಿದ್ದರು. ಸಂತ್ರಸ್ತ ರೈತರು ನ್ಯಾಯ ಮತ್ತು ಪರಿಹಾರಕ್ಕಾಗಿ ಹಿರೇಕೆರೂರು ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿರುದ್ಧ ಕೆಐಎಡಿಬಿ ಸಹ ಧಾರವಾಡದ ಹೈಕೋರ್ಟ್ ಪೀಠದ ಮೊರೆ ಹೋಗಿತ್ತು.

ಕೆಐಎಡಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಧಾರವಾಡ ಹೈಕೋರ್ಟ್ ಪೀಠವು 2020ರಲ್ಲೇ 90 ದಿನಗಳ ಒಳಗಾಗಿ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಪ್ರತಿ ಎಕರೆಗೆ ₹2.5 ಲಕ್ಷ ನಿಗದಿಪಡಿಸಿ, ಬಡ್ಡಿ ಸಮೇತ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಸುಮಾರು ₹2.5 ಕೋಟಿಗಳಷ್ಟು ಪರಿಹಾರವನ್ನು ರೈತರಿಗೆ ನೀಡುವಂತೆ ಪೀಠವು ಕೆಐಎಡಿಬಿಗೆ ಆದೇಶಿಸಿತ್ತು.

ಹೈಕೋರ್ಟ್ ಪೀಠ ಆದೇಶಿಸಿದರೂ ಕೆಐಎಡಿಬಿ ಪರಿಹಾರ ನೀಡದ ಹಿನ್ನೆಲೆ ಸಂತ್ರಸ್ತ ರೈತರು ಕಾನೂನು ಹೋರಾಟ ಮುಂದುವರಿಸಿದ್ದರು. ದಾವಣಗೆರೆಯಲ್ಲಿರುವ ಕೆಐಎಡಿಬಿ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿ, ಪರಿಹಾರ ನೀಡುವಂತೆ ಆದೇಶ ಹೊರಬಂದ ಹಿನ್ನೆಲೆ ಹಿರೇಕೆರೂರು ಹಿರಿಯ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.

ಇಲ್ಲಿನ ಕೆಐಎಡಿಬಿ ಕಚೇರಿಯ ಪೀಠೋಪಕರಣಗಳು, ಕಬ್ಬಿಣದ ಬೀರುಗಳು, 30 ಪ್ಲಾಸ್ಟಿಕ್ ಕುರ್ಚಿಗಳು, 5 ಕಬ್ಬಿಣದ ಕುಷನ್‌ ಕುರ್ಚಿಗಳು, 1 ವ್ಹೀಲ್ ಚೇರ್‌, 1 ಜೆರಾಕ್ಸ್ ಯಂತ್ರ, 2 ಪ್ರಿಂಟರ್, 3 ಕಂಪ್ಯೂಟರ್ ಸಿಸ್ಟಂಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಪೀಠೋಪಕರಣಗ ವ್ಯಾಲ್ಯುವೇಷನ್ ಮಾಡಿ, ಉಳಿದ ಪರಿಹಾರದ ಹಣಕ್ಕಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಚಟ್ನಹಳ್ಳಿ ಗ್ರಾಮದ ಸಂತ್ರಸ್ತ ರೈತರ ಪರ ವಕೀಲ ರವಿ ಬಂಡಿ ಬಾಗೂರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

- - -

(ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್
ಕಸ ವಿಲೇ ವಿಚಾರಕ್ಕೆ ಹಲ್ಲೆ: ಕೇಸ್‌ ರದ್ದತಿಗೆ ಹೈಕೋರ್ಟ್ ನಿರಾಕರಣೆ