ಕಾಮಗಾರಿಗೆ ವಿಳಂಬ ಚಾಲನೆ, ಶಾಸಕರ ಮಧ್ಯೆ ಚಕಮಕಿ

KannadaprabhaNewsNetwork |  
Published : Sep 09, 2026, 01:30 AM IST
ಚಿತ್ರ 8ಬಿಡಿಆರ್‌4ಹುಮನಾಬಾದ್‌ ಪಟ್ಟಣದ ಬಸವೇಶ್ವರ ವೃತ್ತದ ಸಮಿಪ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯ 6.76 ಕೋಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿ ಪೂಜೆ ಸಂದರ್ಭ ಶಾಸಕರ ಮಾತಿನ ಚಕಮಕಿ. | Kannada Prabha

ಸಾರಾಂಶ

ಕಾರ್ಯಕ್ರಮದ ವಿಳಂಬ ಹಾಗೂ ಕಾಮಗಾರಿಯ ನಿಗದಿತ ಸಮಯ ಕುರಿತಂತೆ ಹುಮನಾಬಾದ್‌ ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕಾರ್ಯಕ್ರಮದ ವಿಳಂಬ ಹಾಗೂ ಕಾಮಗಾರಿಯ ನಿಗದಿತ ಸಮಯ ಕುರಿತಂತೆ ಹುಮನಾಬಾದ್‌ ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದ ಸಮಿಪ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯ ₹6.76 ಕೋಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತಿನ ಚಕಮಕಿ ನಡೆಯಿತು. ಸಾರ್ವಜನಿಕರು ಹಾಗೂ ಕಾರ್ಯಕ್ರಮ ಆಯೋಜಕರು ಹಲವು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಉಂಟಾಗದಂತೆ ಶಾಸಕ ಸಿದ್ದು ಪಾಟೀಲ್‌ ಅವರು ತಮ್ಮ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಿಗೆ ನಿಗದಿತ ಸಮಯಕ್ಕೆ ಆಗಮಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರ ಶೇಖರ ಪಾಟೀಲ್‌ ಪ್ರಶ್ನಿಸಿದರು.ಡಾ.ಸಿದ್ದಲಿಂಗಪ್ಪ ಪಾಟೀಲ್ ಇದಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದ ಶಾಸಕರು ಕಾರ್ಯಕ್ರಮದ ಅಧ್ಯಕ್ಷರಾಗಿರುತ್ತಾರೆ. ಕೆಲ ಕಾರಣಾಂತರಗಳಿಂದ ವಿಳಂಬವಾಗಿದೆ. ಅದಕ್ಕೆ ಕಾಯಬೇಕು. ಕ್ಷೇತ್ರದಲ್ಲಿ ಅನುದಾನ ತರುವ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ತಮಗೆ ಸಹಿಸಲು ಆಗುತ್ತಿಲ್ಲ. ಕೇವಲ ಜಗಳ ಬೇಕು. ಅಭಿವೃದ್ಧಿ ಬೇಡವಾಗಿದೆ ಎಂದು ವಾಗ್ವಾದ ನಡೆಯಿತು.ಬಳಿಕ ಮಾಧ್ಯಮದವರೊಂದಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಮಾತನಾಡಿ, ಹುಮನಾಬಾದ್‌ ಪುರಸಭೆ ಸಾಮಾನ್ಯ ಸಭೆಯಲ್ಲಿ ಹೇಳಿದಂತೆ ಪಟ್ಟಣದ ಪ್ರಮುಖ ರಸ್ತೆಗಳು ಹಾಳಾಗಿವೆ. ಅದಕ್ಕೆ 4.5 ಕೋಟಿ ರು, ಬಡಾವಣೆಗಳ ಸಿಸಿ ರಸ್ತೆಗೆ ₹2 ಕೋಟಿ, 25 ಹೈಮಾಸ್ಟ್‌ಗಳು, ಎಸ್‌ಟಿ ಸಮುದಾಯ ಭವನಕ್ಕೆ ₹1 ಕೋಟಿ, ವಾಲ್ಮಿಕಿ ಸಮುದಾಯ ಭವನಕ್ಕೆ ₹1 ಕೋಟಿ, ರೆಡ್ಡಿ ಸಮುದಾಯಕ್ಕೆ ₹40 ಲಕ್ಷ, ಶಿವನಗರದಲ್ಲಿ ₹30 ಲಕ್ಷ, ಬಾಲಾಜಿ ಮಂದಿರ ಜೀರ್ಣೋದ್ದಾರಕ್ಕೆ ನನ್ನ ಅನುದಾನದಿಂದ ₹30 ಲಕ್ಷ, ಸರ್ಕಾರದಿಂದ ₹5 ಲಕ್ಷ, ಉಪ್ಪಾರ ಸಮುದಾಯಕ್ಕೆ ₹10 ಲಕ್ಷ, ಹೆಳವಾ ಸಮಾಜಕ್ಕೆ ₹10 ಲಕ್ಷ, ಜೇರಪೇಟ ಬಡಾವಣೆಯಲ್ಲಿರುವ ದೇವಸ್ಥಾನ ಜೀಣೋದ್ಧಾರಕ್ಕೆ ಹಾಗೂ ಭಾವಸಾರ ಕ್ಷತ್ರೀಯ ಹಾಗೂ ಮಡಿವಾಳ ಸಮಾಜ ಸೇರಿದಂತೆ ಪಟ್ಟಣದಲ್ಲಿ ಸುಮಾರು ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.ಕಾಂಗ್ರೆಸ್‌ ಪಕ್ಷದ ಪುರಸಭೆ ಸದಸ್ಯರಿಗೂ ತಮ್ಮ ವಾರ್ಡ್‌ಗಳಲ್ಲಿ ಅವಶ್ಯಕವಿರುವ ಕೆಲಸದ ಮಾಹಿತಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ಕುರಿತು ಯಾರೊಬ್ಬರೂ ಮಾಹಿತಿ ನೀಡಿಲ್ಲ. ನಮಗೆ ಕಾಮಗಾರಿಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದರು.ಡಾ.ಚಂದ್ರಶೇಖರ ಪಾಟೀಲ್‌ ಮಾತನಾಡಿ, ಕಾಮಗಾರಿ ಏಪ್ರಿಲ್‌ ತಿಂಗಳಲ್ಲಿಯೇ ಪ್ರಾರಂಭ ಮಾಡಿ ಅ.3ಕ್ಕೆ ಮುಗಿಯಬೇಕಿತ್ತು. ಟೆಂಡರ್‌ ಒಪ್ಪಂದ ಆಗಿ 6 ತಿಂಗಳು ಆದರೂ ಕೆಲಸ ಆರಂಭಿಸಿಲ್ಲ ಈಗ ಪೂಜೆಗೆ ಬಂದಿದ್ದಾರೆ. ಸರ್ಕಾರದಿಂದ ನಿಗದಿಯಾದ ಸಮಯ ಹಾಗೂ ಹಣ ವ್ಯರ್ಥ ಮಾಡಲು ಕಾರಣವೇನು, ಕ್ಷೇತ್ರದಲ್ಲಿ ಸುಮಾರು 150 ಕೋಟಿ ರು.ಗಳ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರ ಮಾಡುತ್ತಿದ್ದಾನೆ, ಈತನ ಹೆಸರಿನ ಮೇಲೆ ಶಾಸಕರ ಸಹೋದರರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಡಾಂಬರ್‌ ಬೆಲೆ ಏರಿಕೆಯಾಗಿದೆ ಎಂದು ಕಾಮಗಾರಿ ನಿಲ್ಲಿಸುವದು ವಿಳಂಬ ಮಾಡುವದು ಸರಿಯಲ್ಲ. ನಮ್ಮ ಸರ್ಕಾರದಿಂದ ಬಂದ ಅನುದಾನವನ್ನು ಸರಿಯಾಗಿ ಬಳಸಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಿ ಅದನ್ನು ಬಿಟ್ಟು ಜನರಿಗೆ ದಾರಿ ತಪ್ಪಿಸಿ ಲೂಟಿ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭೂಮಿ ಪೂಜೆ :

ಛತ್ರಪತಿ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ವೀರಭದ್ರೇಶ್ವರ ದೇವಸ್ಥಾನದ ವರೆಗೆ, ಡಾ.ಅಂಬೇಡ್ಕರ್ ವೃತ್ತದಿಂದ ಬಾಲಾಜಿ ಮಂದಿರ ಬಸವೇಶ್ವರ ವೃತ್ತದ ವರೆಗೆ ರಸ್ತೆಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಜನರಿಗೆ ನಿತ್ಯ ಸಂಚರಿಸಲು ರಸ್ತೆಗಳ ಸುಧಾರಣೆ ಅವಶ್ಯಕವಿದ್ದು, ₹4.5 ಕೋಟಿ ಹಾಗೂ ಪುರಸಭೆಯ 16 ವಾರ್ಡಗಳಲ್ಲಿ ₹2.25 ಕೋಟಿಯ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದವು ಆಳವಾದ ಒಂದು ವಿಶೇಷ ಸಂಸ್ಕೃತಿ
ಹಾಸನ ಮತ್ತು ಬೇಲೂರು ಚತುಷ್ಪಥ ಕಾಮಗಾರಿಗೆ ಅನುದಾನ ಮಂಜೂರು