ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಪಾನ್ ಸುಝುಕಿ ಸಂಸ್ಥೆ ಸಿಇಒ ತೋಷಿಯಿರೋ ಅವರ ನೇತೃತ್ವದ ನಿಯೋಗದಲ್ಲಿ 30 ಮಂದಿ ಜಪಾನ್ ತಂಡ ಆಗಮಿಸಿ ಆರೋಗ್ಯ ವ್ಯವಸ್ಥೆಯನ್ನು ಪರಿಶೀಲಿಸಿತು. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ನಂತರ ಗ್ರಾಮದ ಇಲ್ಲಿನ ಆರೋಗ್ಯ ಇಲಾಖೆಯಿಂದ ಆಸ್ಪತ್ರೆಯಲ್ಲಿ ನಡೆದಿರುವ ಕಾರ್ಯಕ್ರಮಗಳು, ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ಪಡೆದರು. ಗ್ರಾಮ ಜಪಾನ್ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಈ ಭೇಟಿಗೆ ಕಾರಣವಾಗಿದೆ. ಸಾವರ್ಜನಿಕವಾಗಿ ನೀಡುವ ವಿವಿಧ ಲಸಿಕ ವ್ಯವಸ್ಥೆಯಲ್ಲೂ ಹೈಟೆಕ್ ಟಬ್ ನೀಡಿರುವುದು, ಮಣಿಪಾಲ್ ಸಂಸ್ಥೆಯಿಂದ ಮೊಬೈಲ್ ವ್ಯಾಕ್ಷಿಲೇಕ್ಷನ್ ಯೂನಿಟ್, ಬರೋಬರಿ 78 ಗಂಟೆಗಳ ಚಾರ್ಜ್ ಜೊತೆಗೆ ಸೋಲಾರ್ ಮೂಲಕ ಮರು ಚಾರ್ಜ್ ಮಾಡುವ ಸೌಲಭ್ಯವನ್ನು ಹೊಂದಿದೆ.ಕೆ.ಶೆಟ್ಟಹಳ್ಳಿ ಒಂದು ಗ್ರಾಮ ಒಂದು ಆರೋಗ್ಯ ಕೇಂದ್ರ ಇದು ಜಪಾನ್ ದೇಶವನ್ನು ಗಮನ ಸೆಳೆಯಲು ಕಾರಣ ಎನ್ನಲಾಗಿದೆ. ನಂತರ ಸರ್ಕಾರಿ ಫ್ರೌಢ ಶಾಲೆಗೆ ಭೇಟಿ ನೀಡಿ ಎಚ್‌ಪಿವಿ ಲಸಿಕ ಅಭಿಯಾನದ ಜಾಗೃತಿಯಲ್ಲಿ ಭಾಗಿಯಾದರು.
ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ದೇಶ ಕಂಡ ಅಪ್ರತಿಮ ಕ್ರೀಡಾಪಟು ಹಾಗೂ ಹಾಕಿ ಕ್ಷೇತ್ರದ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಸ್ಮರಣಾರ್ಥ ಕೇಂದ್ರ ಸರ್ಕಾರದ ಆಶಯದಂತೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಕ್ರೀಡೆ ಮಹತ್ವವನ್ನು ಜನಸಾಮಾನ್ಯರಿಗೆ, ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ತಿಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸದೃಢತೆಯೂ ಹೆಚ್ಚುತ್ತದೆ. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ತಂಡದ ಮನೋಭಾವ ಬೆಳೆಸುವುದರ ಜೊತೆಗೆ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ತರಬೇತಿದಾರ ಸೋಮಶೇಖರ್, ಡಿಡಿಪಿಐ ಕಚೇರಿ ದೈಹಿಕ ಶಿಕ್ಷಣ ಪರೀಕ್ಷಕ ಹೂವಯ್ಯ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾ ಪ್ರೇಮಿಗಳು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.