ದೆಹಲಿ ಸ್ಫೋಟ: ಕೊಡಗಿನಲ್ಲಿ ಅಲರ್ಟ್

KannadaprabhaNewsNetwork |  
Published : Nov 12, 2025, 03:00 AM IST
ಸ್ಪೋಟ ಹಿ | Kannada Prabha

ಸಾರಾಂಶ

ದೆಹಲಿಯಲ್ಲಿ ನಡೆದ ಭೀಕರ ಬಾಂಬ್‌ ಸ್ಪೋಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೆಹಲಿಯಲ್ಲಿ ನಡೆದ ಭೀಕರ ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ಕೊಡಗಿನ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಲಾಗುತ್ತಿದೆ.ಮಡಿಕೇರಿಯ ಸರ್ಕಾರಿ ಬಸ್ಸು ನಿಲ್ದಾಣ, ಕೊಡಗಿನ ಪ್ರವಾಸಿ ತಾಣ ರಾಜಾಸೀಟು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪರಿಶೀಲನೆ ಮಾಡಲಾಗಿದೆ.ಬಾಂಬ್ ನಿಷ್ಕ್ರಿಯ ದಳ ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಲಾಗಿದೆ. ಮಡಿಕೇರಿ ಬಸ್ಸು ನಿಲ್ದಾಣದಲ್ಲಿದ್ದ ಅಸ್ಸಾಂ ಕಾರ್ಮಿಕರನ್ನು ಪರಿಶೀಲನೆ ಮಾಡಲಾಗಿದೆ. ಎಲ್ಲೆಡೆ ಬಾಂಬ್ ಸ್ಕ್ವಾಡ್ ನಿಂದ ಎಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ವಹಿಸಲಾಗಿದೆ.

--------------------------------------------------------------------

ಇಂದು ವಿದ್ಯುತ್ ಸರಬರಾಜು ವ್ಯತ್ಯಯ

ಮಡಿಕೇರಿ: 66/11 ಕೆ.ವಿ ಪೊನ್ನಂಪೇಟೆ ಮತ್ತು ಶ್ರೀಮಂಗಲ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಏಪ್1-ನಲ್ಲೂರು, ಎಫ್2-ಬಾಳೆಲೆ, ಎಫ್4-ತಿತಿಮತಿ, ಎಫ್5-ಪಾಲಿಬೆಟ್ಟ, ಎಫ್6-ಬೇಗೂರು, ಎಫ್7-ಗೋಣಿಕೊಪ್ಪ, ಎಫ್ 8-ಪೊನ್ನಂಪೇಟೆ, ಎಫ್ 9-ಹಾತೂರು, ಎಫ್ 10-ಹೈಸೊಡ್ಲೂರು, ಎಫ್1-ಬಿರುನಾಣಿ, ಎಫ್2-ಕುಟ್ಟ, ಎಫ್3-ಶ್ರೀಮಂಗಲ, ಎಫ್ 4-ಕಾನೂರು, ಎಫ್ 5-ಕೆ.ಬಾಡಗ, ಎಫ್ 6-ಬೀರುಗ, ಎಫ್7-ಟಿ.ಶೆಟ್ಟೆಗೇರಿ ಫೀಡರ್‌ನಲ್ಲಿ ನವೆಂಬರ್, 12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಸುಳುಗೋಡು, ಕೊಣನ ಕಟ್ಟೆ, ಬಾಳೆಲೆ, ದೇವನೂರು, ಕಿರುಗೂರು, ನಿಟ್ಟೂರು, ಜಾಗಲೆ, ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅರುವತ್ತೋಕ್ಲು, ಕಾನೂರು, ದೇವರಪುರ, ಕಾಯಿಮನೆ, ಪೂಜೆಕಲ್ಲು, ಕುಟ್ಟ, ಶ್ರೀಮಂಗಲ, ನಾಲ್ಕೇರಿ, ಕೆ.ಬಾಡಗ, ಇರ್ಪು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ