ದೆಹಲಿ ಬಾಂಬ್ ದಾಳಿ ಪ್ರಕರಣ ಆರೋಪಿಗಳ ಮೇಲೆ ಕಠಿಣ ಶಿಕ್ಷೆ ನೀಡಿ

KannadaprabhaNewsNetwork |  
Published : Nov 15, 2025, 02:30 AM IST
  14ಕೆಎನ್‌ಕೆ೨-1ದೆಹಲಿ ಬಾಂಬ್ ದಾಳಿ ಹಿಂದೆ ಇರುವ ಭಯೋತ್ಪಾದಕ ಸಂಘಟನೆಗಳ ಹಾಗೂ ಆರೋಪಿಗಳ ಮೇಲೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಹಿಜಾವೇ ಕನಕಗಿರಿಯ ತಹಶೀಲ್ ಕಚೇರಿಯಲ್ಲಿ ಮನವಿ ಸಲ್ಲಿಸಿತು.   | Kannada Prabha

ಸಾರಾಂಶ

ದೆಹಲಿ ಬಾಂಬ್ ದಾಳಿಯಲ್ಲಿ ೧೨ಕ್ಕೂ ಹೆಚ್ಚು ಸಾವುಗಳಾಗಿದ್ದು, ೩೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ

ಕನಕಗಿರಿ: ದೆಹಲಿಯಲ್ಲಿ ಈಚೆಗೆ ನಡೆದ ಕಾರ್ ಬಾಂಬ್ ಸ್ಫೋಟದ ಹಿಂದಿನ ಭಯೋತ್ಪಾದಕ ಸಂಘಟನೆಗಳು ಹಾಗೂ ಕೃತ್ಯದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯಿಂದ ತಹಸೀಲ್ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಜಾಗರಣ ವೇದಿಕೆಯ ಮುಖಂಡ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ದೆಹಲಿ ಬಾಂಬ್ ದಾಳಿಯಲ್ಲಿ ೧೨ಕ್ಕೂ ಹೆಚ್ಚು ಸಾವುಗಳಾಗಿದ್ದು, ೩೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಸ್ಲಾಮಿಕ್ ಮತಾಂದತೆಯ ಮನಸ್ಥಿತಿಯುಳ್ಳ ದುಷ್ಟರು ದಾಳಿಗೆ ಮುಂದಾಗಿದ್ದಾರೆ.

ಸಂಸತ್ ಭವನ, ಮುಂಬೈ ದಾಳಿ, ಉರಿ, ಪುಲ್ವಾಮಾ ಮತ್ತು ಮತ್ತು ಧರ್ಮದ ಗುರುತನ್ನು ಖಾತ್ರಿಪಡಿಸಿಕೊಂಡು ಪಹಲ್‌ಗಾಮ್‌ನಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲಿನ ದಾಳಿಯ ಪ್ರಕರಣಗಳು ಮಾಸುವೇ ಮುನ್ನವೇ ದೆಹಲಿಯ ಜನದಟ್ಟನೆ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಲಾಗಿದೆ. ಕಾಶ್ಮೀರದ ಗೋಡೆ ಬರಹದ ಜಾಡು ಹಿಡಿದ ಕೇಂದ್ರ ತನಿಖಾ ದಳ ಮತ್ತು ರಾಷ್ಟ್ರೀಯ ಭದ್ರತಾ ಏಜೆನ್ಸಿಗಳಿಗೆ ಡಾಕ್ಟರ್‌ನ ಜಿಹಾದಿ ಮನಸ್ಸುಗಳು ಬೆಳಕಿಗೆ ಬಂದಿದೆ. ಬಂಧಿತ ಇಸ್ಲಾಮಿಕ್ ಮತಾಂದ ಡಾಕ್ಟರ್ ಮುಖವಾಡದ ಉಗ್ರರು ಹರಿಯಾಣದ ಅಲ್ ಫಲಾಹ ಮುಸಲ್ಮಾನರ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಉಗ್ರರು ಅಲ್ಲಿನ ಮುಸಲ್ಮಾನ್ ವಿದ್ಯಾರ್ಥಿಗಳಿಗೆ ಯಾವ ರೀತಿಯ ಬೋಧನೆ ಮಾಡುತ್ತಿದ್ದರು ಎನ್ನುವುದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಗಂಭೀರ ವಿಚಾರವಾಗಿದೆ. ಈ ಘಟನೆಯಲ್ಲಿ ಶಾಹೀನ ಎಂಬ ಮಹಿಳೆಯ ಬಂಧನವಾಗಿದೆ. ಈಕೆ ವಿಶ್ವ ಸಂಸ್ಥೆ ನಿರ್ಬಂಧಿತ ಪಾಕ್‌ನ ಜೈಶ ಏ ಮಹಮ್ಮದ್ ಸಂಘಟನೆಯ ಆಣತಿಯಂತೆ ಭಾರತದಲ್ಲಿ ಮಹಿಳಾ ಉಗ್ರರ ನೆಟ್ವರ್ಕ್ ಸಂಘಟಿಸುವ ಮುಖ್ಯಸ್ಥಳೂ ಎಂಬುದು ಬಹಿರಂಗವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈ ರೀತಿಯಾದರೆ ಹಳ್ಳಿ ಜನರೂ ಆತಂಕದಲ್ಲಿ ಜೀವಿಸುವಂತಾಗುವ ಮುನ್ನ ಕೇಂದ್ರ ಸರ್ಕಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಿಳಿಸಿದರು.

ಸಂಘಟನೆಯ ಕಾರ್ಯಕರ್ತರಾದ ಪೃಥ್ವಿ ಮ್ಯಾಗೇರಿ, ಹನುಮೇಶ ಗಂಗಾಮತ, ಗೋಪಾಲರೆಡ್ಡಿ ಮಹಲಿನಮನಿ, ಪ್ರಕಾಶ ಕುಂಬಾರ, ಮುತ್ತು ಹೂಗಾರ, ಬಸವರಾಜ ಬಳಿಗೇರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ