ಪೇಜಾವರ ಶ್ರೀ ಚಾತುರ್ಮಾಸ ವ್ರತ - ಶ್ರೀನಿವಾಸ ಕಲ್ಯಾಣೋತ್ಸವ

KannadaprabhaNewsNetwork |  
Published : Sep 21, 2026, 02:45 AM IST
20ಪೇಜಾವರ | Kannada Prabha

ಸಾರಾಂಶ

ನವದೆಹಲಿಯ ವಸಂತಕುಂಜ್‌ನ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39 ನೇ ಚಾತುರ್ಮಾಸ್ಯ ವ್ರತದಂಗವಾಗಿ ದೆಹಲಿಯ ತಿರುಮಲ ತಿರುಮತಿ ದೇವಸ್ಥಾನ ಟಿಟಿಡಿಯ ಸಂಯೋಜನೆಯಲ್ಲಿ ಲೋಕಕ್ಷೇಮಾರ್ಥ ವೈಭವದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿತ್ತು.

ಉಡುಪಿ: ನವದೆಹಲಿಯ ವಸಂತಕುಂಜ್‌ನ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39 ನೇ ಚಾತುರ್ಮಾಸ್ಯ ವ್ರತದಂಗವಾಗಿ ದೆಹಲಿಯ ತಿರುಮಲ ತಿರುಮತಿ ದೇವಸ್ಥಾನ ಟಿಟಿಡಿಯ ಸಂಯೋಜನೆಯಲ್ಲಿ ಲೋಕಕ್ಷೇಮಾರ್ಥ ವೈಭವದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿತ್ತು.

ಸಾವಿರಾರು ಮಂದಿ ಭಕ್ತರು ಈ ಅಪೂರ್ವ ಕಾರ್ಯಕ್ರಮವನ್ನು ಕಂಡು ಹೃನ್ಮನಗಳಲ್ಲಿ ತುಂಬಿಕೊಂಡು ಧನ್ಯರಾದರು.‌ ಡಾ ವಿಠೋಬಾಚಾರ್ಯ ದಂಪತಿ ಸಂಕಲ್ಪ ವಿಧಿ ನೆರೆವೇರಿಸಿ ಕಲ್ಯಾಣೋತ್ಸವದ ಯಜಮಾನಿಕೆಯನ್ನು ವಹಿಸಿದರು. ಸಭಾಂಗಣದ ತುಂಬ ನೆರೆದಿದ್ದ ದೊಡ್ಡ ಸಂಖ್ಯೆಯ ಭಕ್ತರು ಎರಡು ಗಂಟೆಗಳ ಕಾಲ ನಡೆದ ಅಪರೂಪದ ಈ ಉತ್ಸವವನ್ನು ತದೇಕಚಿತ್ತದಿಂದ ಆಸ್ವಾದಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ, ಇಂದ್ರಪ್ರಸ್ಥದಲ್ಲಿ ನಡೆದ ಈ ಕಾಂಚನಬ್ರಹ್ಮನ ಕಲ್ಯಾಣೋತ್ಸವದಿಂದ ದೇಶಕ್ಕೆ ಸನಾನತ ಧರ್ಮಕ್ಕೆ ಎದುರಾಗಬಹುದಾದ ಸಕಲ ಆಪತ್ತು ವಿಪತ್ತುಗಳೆಲ್ಲ ದೂರವಾಗಿ ಎಲ್ಲೆಡೆ ಸುಖ ಸಮೃದ್ಧಿ ಶಾಂತಿ ನೆಮ್ಮದಿಗಳು ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಭವ್ಯವಾಗಿ ಈ ಕಾರ್ಯಕ್ರಮನವನ್ನು ನೆರವೇರಿಸಿಕೊಟ್ಟ ಟಿಟಿಡಿಯ ಅಧಿಕಾರಿಗಳನ್ನು ಸ್ವಾಮೀಜಿ ಅವರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಿಂದ ಪರಾರಿಯಾಗಿದ್ದ ಹಂತಕ 12 ವರ್ಷ ಬಳಿಕ ಅರೆಸ್ಟ್‌
ಕನಸು ಅರ್ಥೈಸಿಕೊಂಡು ಮುನ್ನಡೆದರೆ ಬದುಕು ಗೆದ್ದಂತೆ