ದಿಲ್ಲಿ ಅಸೆಂಬ್ಲೀಲಿ ಬಹುಮತ । ಜಿಲ್ಲಾ ಬಿಜೆಪಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ
ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಬಿಜೆಪಿಯದು ಕೇವಲ ಘೋಷಣೆ, ಭರವಸೆಗಳನ್ನು ನೀಡುವ ಆಡಳಿತವಲ್ಲ. ಅಭಿವೃದ್ಧಿಯತ್ತ ಜನರನ್ನು, ದೇಶವನ್ನು ಕೊಂಡೊಯ್ಯುತ್ತದೆ ಎನ್ನವುದಕ್ಕೆ ಈ ಚುನಾವಣೆಯಲ್ಲಿ ಸಿಕ್ಕಿರುವ ಗೆಲುವೇ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿದರು.
ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತ ಜಿಲ್ಲಾ ಬಿಜೆಪಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಶನಿವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ ನಂತರ ಅವರು ಮಾತನಾಡಿದರು.ಕಳೆದ 27 ವರ್ಷಗಳ ಬಳಿಕೆ ದೆಹಲಿಯಲ್ಲಿ ಬಿಜೆಪಿ ಗೆದ್ದಿದೆ. ಹತ್ತು ವರ್ಷಗಳಿಂದ ಅಧಿಕಾರ ನಡೆಸಿದ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಕೈಯಲ್ಲಿ ಪೊರಕೆ ಹಿಡಿದು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿ ಕೊನೆಗೆ ಜೈಲಿಗೆ ಹೋಗಿ ಬಂದರು ಎಂದರು.