ದಾಂಡೇಲಿ: ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಇನ್ನಷ್ಟು ತಿಳಿವಳಿಕೆ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬಂದಿದೆ. ಮಹತ್ವಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸಿ ಜನತೆಯ ಉದ್ದಾರಕ್ಕೆ ಶ್ರಮಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ನಗರಸಭೆ ಸಭಾಂಗಣದಲ್ಲಿ ಬುಧವಾರರಂದು ಸಂಸದ ವಿಶ್ವೇಶ್ವರ ಕಾಗೇರಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
೨೦೧೮-೧೯ನೇ ಸಾಲಿನಲ್ಲಿ ಮಂಜೂರಾಗಿ ನಿರ್ಮಾಣವಾಗಬೇಕಿದ್ದ ೧೧೦೦ ಮನೆಗಳಲ್ಲಿ ೧೦೮ ಮನೆಗಳು ಮಾತ್ರ ಫಲಾನುಭವಿಗಳಿಗೆ ವಿತರಣೆಯಾಗಿರುವುದು ಖೇದಕರ ಸಂಗತಿಯಾಗಿದೆ. ಇನ್ನುಳಿದ ೯೯೨ ಮನೆಗಳ ಪೂರ್ಣಗೊಳ್ಳದಿರುವುದು. ₹೭೦ ಸಾವಿರ ತುಂಬಿದ ಫಲಾನುಭವಿಗಳ ಗತಿ ಏನಾಗಬೇಕು. ₹೫೪ ಕೋಟಿ ಯೋಜನೆಯು ಸಂಪೂರ್ಣವಾಗಿ ಫಲಾನುಭವಿಗಳಿಗೆ ಮನೆಗಳು ಲಭ್ಯವಾಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಕಾಗೇರಿ ನುಡಿದರು.ಸ್ವಚ್ಛ ಭಾರತ ಮಿಶನ್ ಯೋಜನೆಯಲ್ಲಿ ನಗರದಲ್ಲಿ ಕೈಕೊಂಡ ಶೌಚಾಲಯ, ಕಸ ಸಂಗ್ರಹ, ನಿರ್ವಹಣೆ ಕುರಿತು ಕೈಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಾಜಪೇಯಿ, ಅಂಬೇಡ್ಕರ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಜಿಪಿಎಸ್ ಸಮಸ್ಯೆ ಬಗೆಹರಿಸುವಂತೆ, ಫಲಾನುಭವಿಗಳಿಗೆ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಹೆಸ್ಕಾಂ ಅಧಿಕಾರಿ ದೀಪಕ ನಾಯ್ಕ, ಸೂರ್ಯಘರ್ ಸೋಲಾರ್ ಯೋಜನೆಯ ೬ ಫಲಾನುಭವಿಗಳು ಪಡೆಯುತ್ತಿದ್ದಾರೆ ಎಂದಾಗ ಸಂಸದರು, ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿಸಲು ಅಗತ್ಯ ಕ್ರಮ ಕೈಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆ ಅಧ್ಯಕ್ಷ ಅಶ್ಪಾಕ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ಬಿಜೆಪಿ ಮಂಡಳ ಅಧ್ಯಕ್ಷ ಬುದವಂತಗೌಡ ಪಾಟೀಲ, ತಾಪಂ ಇಒ ಟಿ.ಎಸ್ ಹಾದಿಮನಿ, ಕಾರವಾರ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಹೆಸ್ಕಾಂನ ಸಹಾಯಕ ಅಭಿಯಂತರ ದೀಪಕ ಸೇರಿದಂತೆ ನಗರಸಭೆ ಸಿಬ್ಬಂದಿ, ನಗರಸಭೆ ಸದಸ್ಯರು ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಇದ್ದರು.ನಗರಸಭೆಗೆ ಪೇಪರ್ ಮಿಲ್ ಅನ್ಯಾಯ:
ನಗರಸಭೆ ಸದಸ್ಯ ದಶರಥ ಬಂಡಿವಡ್ಡರ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಮನಕ್ಕೆ ತಂದು ಕಳೆದ ಮೂರು ವರ್ಷಗಳಿಂದ ವೆಸ್ಟ್‌ಕೊಸ್ಟ್ ಪೇಪರ್ ಮಿಲ್ ೬೩ ಎಕರೆ ಲೀಸ್ ಜಾಗಕ್ಕೆ ಸಂಬಂಧಿಸಿದಂತೆ ಹಾಗೂ ಸರ್ವೇ ಸಮಸ್ಯೆಯಿಂದಾಗಿ ನಗರಸಭೆಗೆ ಬರಬೇಕಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ. ಸರ್ವೇ ನೆಪ ಒಡ್ಡಿ ಠರಾವು ತಿದ್ದುಪಡಿ ಮಾಡಿ ತೆರಿಗೆ ತುಂಬುವಲ್ಲಿ ವೆಸ್ಟ್‌ಕೊಸ್ಟ್ ಪೇಪರ್ ಮಿಲ್ ನಗರಸಭೆಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಸಿಎಸ್‌ಆರ್ ಯೋಜನೆಯಲ್ಲಿ ದಾಂಡೇಲಿ ತುಂಬ ಅಂಗನವಾಡಿ ನಿರ್ಮಿಸುವ ಪೇಪರ್ ಮಿಲ್ ತಮ್ಮದೇ ಸ್ವಂತ ಅಂಗನವಾಡಿ ಕಟ್ಟಡ ನಿರ್ಮಿಸಿಲ್ಲ. ಒಲ್ಡ್ ಸ್ಟಾಫ್ ಕ್ವಾರ್ಟ್ರಸ್ ಸೇರಿದಂತೆ ವಾಸಿಸುವ ಜನರಿಗೆ ಸರಿಯಾದ ಶೌಚಾಲಯವಿಲ್ಲ. 50 ಮಂದಿಗೆ ಕೇವಲ ನಾಲ್ಕು ಶೌಚಾಲಯ ಇವೆ. ಹಿಂದೂ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವಾಗ ಭಾಗವತ ಧ್ವಜ ಕಟ್ಟಲು ಬಿಡದಿರುವುದು... ಈ ವಿಷಯಗಳನ್ನು ಸಂಸದರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಪೇಪರ್ ಮಿಲ್‌ನವರಿರುವುದು ಕರ್ನಾಟಕದಲ್ಲಿ. ಯಾರದೋ ದೊಡ್ಡವರ ಬೆಂಬಲವಿದೆ ಎಂದು ಕೈಗಾರಿಕಾ ನಿಯಮಗಳನ್ನು ಉಲ್ಲಂಘಿಸುವುದು, ಸ್ಕೂಲ್- ಕಾಲೇಜು ಮೈದಾನ ಆಸ್ಪತ್ರೆ ಒದಗಿಸಬೇಕಾಗಿದೆ. ಸೂಕ್ತ ನಿರ್ವಹಣೆ ಮಾಡುವಂತೆ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ವಿವೇಕ ಬನ್ನೆ ಅವರಿಗೆ ಸೂಕ್ತ ನಿರ್ದೇಶನ ನೀಡಿ ಪತ್ರ ಬರೆಯುವಂತೆ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಸುನೀಲ ಹೆಗಡೆ ಉಪಸ್ಥಿತರಿದ್ದರು.