ಹೊಸಕೋಟೆ: ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಪಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯ ಗ್ರಾಪಂ ಸದಸ್ಯರು ಮುಂದಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಮಾತನಾಡಿ, ಬಮುಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಹೈಮಾಸ್ಟ್ ದೀಪವನ್ನು ಅಳವಡಿಸಿ ಉದ್ಘಾಟಿಸಲಾಗಿದೆ. ಬಮುಲ್ ಕ್ಷೀರ ಕ್ಷೇತ್ರದ ಕ್ರಾಂತಿ ಜೊತೆಗೆ ಬಮುಲ್ ಸೇವಾ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ನಿರಂತವಾಗಿ ಮಾಡುತ್ತಿದೆ. ಡಿಕೆ.ಸುರೇಶ್ ಬಮುಲ್ ಅಧ್ಯಕ್ಷರಾದ ಬಳಿಕ ಬಮುಲ್ ಕಾರ್ಯ ಚಟುವಟಿಕೆಗಳು ಅಮೂಲಾಗ್ರ ಬದಲಾವಣೆ ಕಾಣುತ್ತಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ, ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಮಂಜುನಾಥ್, ಉಪಾಧ್ಯಕ್ಷೆ ಪಾರ್ವತಮ್ಮ ಮುನಿಶಾಮಣ್ಣ, ಗ್ರಾಪಂ ಸದಸ್ಯರಾದ ರಾಧಾಕೃಷ್ಣ, ಮುನಿನಂಜೇಗೌಡ, ಭೈರೇಗೌಡ, ಲಕ್ಷ್ಮಣ್, ಎಂಪಿಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪಿಳ್ಳೇಗೌಡ, ಹಸಿಗಾಳ ಜಗದೀಶ್, ಮುಖಂಡರಾದ ಬಿಜಿ.ನಾರಾಯಣಗೌಡ, ಸೋಮಶೇಖರ್, ಲಾರಿ ಕೃಷ್ಣಪ್ಪ ಹಾಜರಿದ್ದರು.ಫೋಟೋ: 31 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಲಕ್ಕೊಂಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.