ಕನ್ನಡಪ್ರಭವಾರ್ತೆ ಸಿರವಾರ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರ ನೇತೃತ್ವದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಗ್ರಾಮೀಣ ಜನರಿಗೆ ಯೋಜನೆ ಅಗತ್ಯ ಮಾಹಿತಿ ನೀಡಬೇಕು, ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಉತ್ತೇಜನ ನೀಡುವ ಜೊತೆಗೆ ನಿಗದಿತ ಸಮಯದಲ್ಲಿ ಯೋಜನೆಗಳ ಫಲಾನುಭವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಅಧಿಕಾರಿಗಳು ತಮ್ಮ ವ್ಯಾಪ್ತಿ ಕಾರ್ಯಗಳನ್ನು ಯಾವುದೇ ಗೊಂದಲ ಸೃಷ್ಠಿಯಾಗದಂತೆ ಎಚ್ಚರಿಕೆಯಿಂದ ಕೆಲಸಮಾಡಬೇಕು, ಯಾರಾದರೂ ಕೆಲಸದಲ್ಲಿ ನಿರುತ್ಸಾಹ ತೋರಿದರೆ ಅಗತ್ಯ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.ತಹಸೀಲ್ದಾರ್ ರವಿ.ಎಸ್. ಅಂಗಡಿ, ಬಿಇಒ ಚಂದ್ರಶೇಖರ ದೊಡ್ಮನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ತಾಲೂಕು ಪಂಚಾಯತಿ ಇಒ ಶರ್ಫ್ಯುನ್ನಿಸಾ ಬೇಗಂ, ಮುಖಂಡರಾದ ಕಿರಿಲಿಂಗಪ್ಪ ಮಲ್ಲಟ, ಬ್ರಿಜೇಶ ಪಾಟೀಲ, ರಮೇಶ ದರ್ಶನಕರ್ ಸೇರಿ ಕಂದಾಯ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.