ಧಾರವಾಡ:
ಜ್ಯುಬಿಲಿ ವೃತ್ತದಲ್ಲಿ ಸೇರಿದ ನೂರಾರು ರೈತರು ಮಾನವ ಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೆಲ ಹೊತ್ತು ರಸ್ತೆ ಬಂದ್ ಮಾಡಿದ ರೈತರು, ಬರ ಪರಿಹಾರವಾಗಿ ಪ್ರತಿ ರೈತ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿರುವ ₹ 2500 ತಿರಸ್ಕರಿಸುತ್ತೇವೆ. ರಾಜ್ಯ ಸರ್ಕಾರ ಪ್ರತಿ ರೈತರಿಗೆ ₹ 30 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ಕಬ್ಬು ಬೆಳೆಯನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಖರ್ಚಿನಲ್ಲಿ ಕಾರ್ಖಾನೆಯು ಪಾಲುದಾರವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪೂರ್ತಿ ವೆಚ್ಚವನ್ನು ರೈತರ ಮೇಲೆ ಹೇರಿದೆ. ಕಬ್ಬಿನ ಬೆಲೆ ಉತ್ತೀರ್ಣ ಹಾಗೂ ಎಫ್‌ಆರ್‌ಪಿ ಖರ್ಚನ್ನು ಪೂರ್ತಿಯಾಗಿ ಕಾರ್ಖಾನೆಯೇ ನೋಡಿಕೊಳ್ಳಬೇಕು. ಹಾಗೂ ಎಫ್‌ಆರ್‌ಪಿ ಹೆಚ್ಚು ಮಾಡಬೇಕು ಎಂದು ಆಗ್ರಹಿಸಲಾಯಿತು.ಇನ್ನು, ಏಳು ತಾಸು ಹಗಲಿನಲ್ಲಿ ಸಂಪೂರ್ಣವಾಗಿ ವಿದ್ಯುತ್ ಪೂರೈಸಬೇಕು. ರಾತ್ರಿ ವಿದ್ಯುತ್‌ನ್ನು ಸಿಂಗಲ್ ಲೈನ್ ಮತ್ತು ಹಗಲಿನಲ್ಲಿ 3 ಲೈನ್‌ನಲ್ಲಿ ನಿರಂತರವಾಗಿ ಕೊಡಬೇಕೆಂದು ಆಗ್ರಹಿಸಿದರು. ಹಾಗೆಯೇ, ರೈತರ ಜಮೀನು ಮತ್ತು ಜಾಗವನ್ನು ಸರ್ಕಾರ ಕಬಳಿಸುತ್ತಿದ್ದು, ರೈತರು ಮೋಸ ಹಾಗೂ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಕಾಯ್ದೆ ತಿದ್ದುಪಡಿ ಮಾಡಬೇಕು. ಜೊತೆಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಲಾಯಿತು.