-ಯಾದಗಿರಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್‌ಗೆ ಮನವಿ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿವೇಕ ಸೂರ್ಯ ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣಗಳ ಮೂಲಕ ಜಗದ್ಗುರು ಶ್ರೀ ಶಂಕರಾಚಾರ್ಯರವರ ಬಗ್ಗೆ ನಿರಂತರವಾಗಿ ಸಾರ್ವಜನಿಕ ವೇದಿಕೆಗಳ ಮೂಲಕ ಅವಹೇಳನಕಾರಿ, ಪ್ರಚೋದನಕಾರಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದು, ಸಮಾಜದಲ್ಲಿ ಅಶಾಂತಿ ಹಾಗೂ ವೈಮನಸ್ಸು ಸೃಷ್ಟಿಸುವ ಪುಯತ್ನ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಂಘವು ಮನವಿ ಪತ್ರದ ಮೂಲಕ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.ವಿಪ್ರ ಸಮಾಜದ ಮುಖಂಡರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ "ನಾನು ಇದೇ ರೀತಿಯ ಹೇಳಿಕೆಗಳನ್ನು ಮುಂದುವರಿಸುತ್ತೇನೆ ತಾಕತ್ತಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ " ಎಂಬ ಸವಾಲಿನ ಹೇಳಿಕೆ ನೀಡಿ ಕಾನೂನಿನ ಬಗ್ಗೆ ಅಗೌರವ ತೋರಿರುವುದು ಹಾಗೂ ಸಾರ್ವಜನಿಕರನ್ನು ಮತ್ತಷ್ಟು ಪ್ರಚೋದಿಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ.
ಈ ಸಂಧರ್ಭದಲ್ಲಿ ಗಣಪತಿ ಮಹಾರಾಜ ಕುಡಲಗಿ. ಶಂಕರ್ ನಾರಾಯಣ, ಗುಂಡು ಭಟ್ಟ್ ಜೋಶಿ, ರವಿ ಲಾಡ್ಲಾಪೂರ್, ರಮೇಶ ಲಾಡ್ಲಾಪೂರ್, ಓಂಕಾರ್ ಜೋಶಿ, ಆರುಣ ಕುಮಾರ್ ಕುಲಕರ್ಣಿ, ಉಮೇಶ ಆರ್ ಕುಲಕರ್ಣಿ, ಪ್ರಭಂಜನ, ಉಮಾಶಂಕರ್ ದೀಕ್ಷೀತ್, ಮುಕುಂದರಾವ್, ಅಪ್ಪಾರಾವ್ ಕೆ, ದೀರೇಂದ್ರ ಕುಲಕರ್ಣಿ, , ಸುಬ್ಬಾ ರಾವ್, ಪವನ ಕುಲಕರ್ಣಿ, .ಕಿರಣ ಕುಮಾರ್ ಜೋಶಿ, ಗಿರಿಧರ್ ಜೋಶಿ,ಶಂಕರ್ ರಾವ್ ಕುಲಕರ್ಣಿ, ಶ್ರೀ ವಲ್ಲಭ ಭಟ್ಟ ಪ್ರವೀಣ ದೇಶಮುಖ, ಇನ್ನು ಹಲವರು ಉಪಸ್ಥಿತರಿದ್ದರು.