ಆಸಕ್ತಿ ಇರದ ಹೊರತು ಸಾಹಿತ್ಯ ಅರಗಿಸಿಕೊಳ್ಳಲಾಗದು

KannadaprabhaNewsNetwork |  
Published : Jul 20, 2026, 04:15 AM IST
46 | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅಮ್ಮ ರಾಮಚಂದ್ರ, ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು.

ಫೋಟೋ - 19ಎಂವೈಎಸ್‌ 46

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯದಲ್ಲಿ ಕುತೂಹಲ ಆಸಕ್ತಿ ಇರದ ಹೊರೆತು ಸಾಹಿತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ವಿದ್ವಾಂಸ ಪ್ರೊ.ಟಿ.ವಿ. ವೆಂಕಟಚಲಶಾಸ್ತ್ರಿ ಹೇಳಿದರು.

ನಗರದ ಸರಸ್ವತಿಪುರಂ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇದಿಕೆ ವತಿಯಿಂದ ಉಪನ್ಯಾಸಕರಿಗಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಹಳಗನ್ನಡ ಸಾಹಿತ್ಯ ಓದು- ವ್ಯಾಖ್ಯಾನ- ವಿಶ್ಲೇಷಣೆ ಕುರಿತು ಉಪನ್ಯಾಸ ನೀಡಿದರು.

ಕಾರ್ಯಗಾರವನ್ನು ಡಿಡಿಪಿಯು ಎಂ.ಪಿ. ನಾಗಮ್ಮ ಉದ್ಘಾಟಿಸಿದರು.

ಎರಡನೇ ಅಧಿವೇಶನ ನಡೆಸಿಕೊಟ್ಟ ವಿದ್ವಾಂಸರು, ನಿವೃತ್ತ ಪ್ರಾಂಶುಪಾಲ ಟಿ.ಎಸ್. ಗೋಪಾಲ್ ಅವರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅರಿಯದ ಹೊರತು ಸಾಹಿತ್ಯ ಅರಿಯಲು ಸಾಧ್ಯವಿಲ್ಲ ಎಂದರು.

ವೇದಿಕೆ ಅಧ್ಯಕ್ಷ ಪಿ. ಕೆಂಪಯ್ಯ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್, ಪ್ರಾಂಶುಪಾಲೆ ಪದ್ಮಾ ರವಿ ಇದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅಮ್ಮ ರಾಮಚಂದ್ರ, ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘಕ್ಕೆ ಆಯ್ಕೆಯಾದ ಮಾಜಿ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ. ಮಹೇಶ, ಖಜಾಂಚಿ ಡಾ. ಬೇವಿನಹಳ್ಳಿ ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಡಾ. ಸಂತೋಷ್ ಚೊಕ್ಕಡಿ, ಬಾಲಸುಬ್ರಮಣ್ಯಂ, ಇಂದ್ರಾಣಿ, ಉದಯಶಂಕರ್, ಚಂದ್ರಶೇಖರ್ ಹಾಗೂ ಖಜಾಂಚಿ ಎಸ್. ಕಿರಣ್ ಕುಮಾರ್ ಇದ್ದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಚಿಕ್ಕಮಳಲಿ ಆರ್. ಮಹದೇವ ಸ್ವಾಗತಿಸಿದರೆ, ಕ್ಯಾತಮಾರನಹಳ್ಳಿ ಎಂ. ಮಹೇಶ ಪ್ರಾಸ್ತಾವಿಕ ನುಡಿಗಳನಾಡಿದರು. ಪೂರ್ಣಿಮಾ ನಿರೂಪಿಸಿದರು. ಅತಿಥಿಗಳನ್ನು ಕೃ.ಪಾ. ಮಂಜುನಾಥ್ ಮತ್ತು ಮುರಳಿ ಪರಿಚಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಮಂಗಲದಲ್ಲಿ ಚನ್ನಮ್ಮನವರಿಗೆ ಕಣ್ಣೀರ ವಿದಾಯ
ಶಂಕರಾಚಾರ್ಯರ ಕುರಿತ ಅವಹೇಳನಕಾರಿ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹ