ಕನ್ನಡಪ್ರಭ ವಾರ್ತೆ ಸಿಂದಗಿ
ಗುಬ್ಬೇವಾಡ ಮತ್ತು ಬನ್ನೇಟ್ಟಿ ಪಿಎ ಗ್ರಾಮದ ರೈತರಿಗೆ ಸತತವಾಗಿ ಎರಡು ತಿಂಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ರೈತರು ಕಂಗಾಲಾಗಿ ಜಾನುವಾರುಗಳಿಗೆ ನೀರು ಕೊಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮಪರ್ಕವಾಗಿ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಗುಬ್ಬೇವಾಡ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರೈತ ಧರ್ಮಣ್ಣ ಗಬಸಾವಳಗಿ, ಈಗಾಗಲೇ ಎಇಇ ಅವರ ಗಮನಕ್ಕೆ ತಂದಿದ್ದರೂ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಶಿವಾನಂದ ಕೊಂಡಗೂಳಿ ಮಾತನಾಡಿ, ಈಗಾಗಲೇ ಕೊಳವೆಬಾವಿ ತೆರೆದ ಬಾವಿಗಳಲ್ಲಿ ನೀರಿಲ್ಲದೇ ಸಮಸ್ಯೆಗಳು ಸೃಷ್ಠಿಯಾಗಿದೆ. ಅದರಲ್ಲಿ ಹೆಸ್ಕಾಂ ವತಿಯಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು. ಒಂದು ವೇಳೆ ಈ ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೆಸ್ಕಾಂ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಗುಬ್ಬೇವಾಡ ಗ್ರಾಪಂ ವ್ಯಾಪ್ತಿಯಲ್ಲಿ ಕಡಿಮೆ ಇರುವ ವೋಲ್ಟೆಜ್ ಅನ್ನು ಹೆಚ್ಚಿಗೆ ಮಾಡಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.ಈ ವೇಳೆ ಸಿದ್ದು ಗಬಸಾವಳಗಿ, ಗೌರಿಶಂಕರ ಹುಬ್ಬಳ್ಳಿ, ಸಿದ್ದಲಿಂಗಪ್ಪ ಗಬಸಾವಳಗಿ, ಪಟೇಲ ಚಟ್ಟರಕಿ, ಗಂಗಾಧರ ಗಬಸಾವಳಗಿ, ಭೀಮಣ್ಣ ಜಾಯವಾಡಗಿ, ಮುತ್ತಣಗೌಡ ಪಾಟೀಲ, ಸಂತೋಷ ಗಬಸಾವಳಗಿ, ಶ್ರೀಶೈಲ ಕರಬಂಟನಾಳ, ಶಿವಾನಂದ ಲಾಳಸಂಗಿ, ಶರಣಪ್ಪ ನಾಯ್ಕೋಡಿ, ಹಣಮಂತ್ರಾಯ ಗಬಸಾವಳಗಿ, ಶರಣಬಸು ಜಾಯವಾಡಗಿ ಸೇರಿದಂತೆ ಅನೇಕರಿದ್ದರು.
--ಕೋಟ್
ತಕ್ಷಣದಲ್ಲಿ ಎರಡು ಗ್ರಾಮದ ರೈತರ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಮತ್ತು ರೈತರಿಂದ ಹಣ ವಸೂಲಿ ಮಾಡುವವರನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇನೆ.-ಚಂದ್ರಕಾಂತ ನಾಯಕ ಹೆಸ್ಕಾಂ ಎಇಇ