ಕನ್ನಡಪ್ರಭ ವಾರ್ತೆ ಪಾಲಬಾವಿ
ರಾಯಬಾಗ ತಾಲೂಕು ಪಾಲಬಾವಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಗ್ರಾಮ ಪಂಚಾಯತಿ ನೀಡಿರುವ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿ ಗ್ರಾಮದ ಹುಲೆಪ್ಪ ತೇಗೂರ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಭರಮಪ್ಪ ನಿಂಗನೂರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು.ತಾಲೂಕು ಪಂಚಾಯತಿ ಹಾಗೂ ಪಾಲಬಾವಿ ಗ್ರಾಪಂಗೆ ದೂರು ನೀಡಿ 40 ದಿನಗಳಾದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಕೂಡಲೇ ಪರವಾನಗಿ ರದ್ದು ಮಾಡುವಂತೆ ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ತಾಪಂ ಇಒ ಅರುಣ ಮಾಚಕನೂರ, ಪಿಎಸ್ಐ ಮಾಳಪ್ಪ ಪೂಜೇರಿ, ಪಿಡಿಒ ಶ್ರೀಕಾಂತ ಪಾಟೀಲ, ಎಎಸ್ಐ ಸೂರ್ಯಕಾಂತ ಶಿಂಗೆ, ಗ್ರಾಪಂ ಕಾರ್ಯದರ್ಶಿ ರಮೇಶ ಪಾಟೀಲ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಈ ವೇಳೆ ಪರವಾನಗಿ ರದ್ದು ಮಾಡುವವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಆ.12 ಅಥವಾ 13ರಂದು ಗ್ರಾಪಂ ಸಾಮಾನ್ಯ ಸಭೆ ಕರೆದು ಪರವಾನಗಿ ವಿಷಯವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಾಪಂ ಇಒ ಭರವಸೆ ಬಳಿಕ ಪ್ರತಿಭಟನೆ ಕೈಬಿಡಲಾಯಿತು.ಧರಣಿಯಲ್ಲಿ ಪ್ರಭಾಕರ ಕುರಬೆಟ್ಟಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ರಾಘವೇಂದ್ರ ಶಿಂಪಿ, ಗ್ರಾಪಂ ಸದಸ್ಯ ಸಿರಿಯಾಳ ಮಾದರ, ಭರಮಪ್ಪ ಮಾನಶೆಟ್ಟಿ, ರೈತ ಮುಖಂಡ ಭರಮಪ್ಪ ಜೋಗಿ, ಪ್ರಕಾಶ ಪಾಟೀಲ, ಅಸ್ಲಾಂ ಬಿರಾದಾರ, ವಕೀಲ ಅಲ್ಲಮಪ್ರಭು ತೇಗೂರ, ಶ್ರೀಶೈಲ ನಿಂಗನೂರ, ಅಲ್ಲಪ್ಪ ನಿಂಗನವರ, ಯುವ ಧುರೀಣ ಸಂಗಮೇಶ ನಿಂಗನೂರ, ಗುರು ಮಾದರ, ಗಿರೆಪ್ಪ ಬಳಿಗಾರ, ಸಾಗರ ಕುರಬೆಟ್ಟಿ, ಭೀಮಪ್ಪ ಸಂಗಳಿ, ಬಾವುರಾಜ ತೇಗೂರ, ಸಚಿನ್ ಮರಡಿ, ಮುತ್ತಪ್ಪ ಮಾದರ, ಸಂಗಪ್ಪ ಮಾನಶೆಟ್ಟಿ, ರಮೇಶ ಮಾದರ, ರೆಹಮಾನ್ ಮಿರ್ಜಿ, ವಿವೇಕಾನಂದ ಮರಡಿ, ಶ್ರೀಶೈಲ ಮಲ್ಲನವರ, ರಾಮಪ್ಪ ಗೋಡಿ, ಗಂಗವ್ವ ಪಾಟೀಲ, ಚಂದ್ರವ್ವ ಉದಗಟ್ಟಿ, ಯಮನವ್ವ ಮಾದರ, ಕೃಷ್ಣಬಾಯಿ ಮಾದರ, ಮಲ್ಲವ್ವ ಮಾದರ, ಯಲ್ಲವ್ವ ಮಾದರ, ತಂಗ್ಯವ್ವ ಪಡಸಲಗಿ, ಕಾಶವ್ವ ಮಾದರ, ರೇಣುಕಾ ಮಾದರ ಇತರರು ಇದ್ದರು.---------------------------------
ಕೋಟ್ಪಾಲಬಾವಿ ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಲೈಸೆನ್ಸ್ ಕೊಟ್ಟಿದ್ದಾರೆ. ಬಾರ್ ಪ್ರಾರಂಭವಾದರೆ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿ ಲೈಸೆನ್ಸ್ ರದ್ದು ಮಾಡಲು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಆ.12 ಅಥವಾ 13 ರಂದು ಗ್ರಾಪಂ ಸಾಮಾನ್ಯ ಸಭೆ ಕರೆದು ಪರವಾನಗಿ ವಿಷಯವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
ಅರುಣ ಮಾಚಕನೂರ, ತಾಪಂ ಇಒ.--------------------------------------------
ಕೋಟ್ಪಾಲಬಾವಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು ಪರವಾನಗಿ ನೀಡಿದ ಗ್ರಾಮ ಪಂಚಾಯತಿ ಸದಸ್ಯರ ತೀರ್ಮಾನ ಖಂಡನೀಯ. ಪರವಾನಗಿ ನೀಡಿದ್ದನ್ನು ರದ್ದುಪಡಿಸುವವರೆಗೆ ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ.
- ಭರಮಪ್ಪ ನಿಂಗನೂರ, ಗ್ರಾಪಂ ಮಾಜಿ ಅಧ್ಯಕ್ಷಫೋಟೋ ಶೀರ್ಷಿಕೆ:-07ಪಾಲಬಾವಿ.01ಪಾಲಬಾವಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿ ಪಾಲಬಾವಿ ಗ್ರಾಪಂಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒಗೆ ಮನವಿ ಸಲ್ಲಿಸಿದರು.
--