ಮುಂಡರಗಿ: ತಾಲೂಕಿನಲ್ಲಿ ಬರ ಇರುವ ಹಿನ್ನೆಲೆ ರೈತರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಎಲ್ಲ ಬ್ಯಾಂಕ್‌ಗಳ ರೈತರ ಬೆಳೆಸಾಲ ಮನ್ನಾ ಮಾಡಬೇಕು. ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ಎಫ್‌ಐಡಿ ರದ್ದು ಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಶೀಘ್ರವೇ ಗೋಶಾಲೆ ಆರಂಭಿಸಬೇಕು. ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಿಂದ ಕೆರೆಗಳನ್ನು ತುಂಬಿಸಬೇಕು. ಪಟ್ಟಣದಲ್ಲಿರುವ ಇಕ್ವಲ್ ಪ್ರೆ.ಲಿ. ವಿದ್ಯುತ್ ಸ್ಥಾವರ ಘಟಕವನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಈ ಎಲ್ಲ ಬೇಡಿಕೆ ಈಡೇರಿಸದಿದ್ದರೆ ಒಂದು ವಾರದ ನಂತರ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹಿನ್ನೀರಿನಿಂದ ಕಾಲುವೆಗಳಿಗೆ ನೀರು ಹರಿಸಬೇಕು. ಕಬ್ಬಿನ ಎಫ್‌ಆರ್‌ಪಿ ದರ ಪುನಃ ಪರಿಶೀಲನೆ ಮಾಡಬೇಕು. ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ರವಿ ಕೊಳಲು, ಈರಣ್ಣ ಹಡಪದ, ಈರಣ್ಣ ಕವಲೂರ, ರಾಘವೇಂದ್ರ ಕುರಿ, ಅಶ್ವಿನಿ ಗೌಡರ, ಮಾಬುಸಾಬ ಬಳ್ಳಾರಿ, ರಂಜಿತ್ ಮಧ್ಯಪಾಟಿ, ಹುಚ್ಚಪ್ಪ ಹಂದ್ರಾಳ, ಸುಮಂಗಳಾ ನೋಟಗಾರ, ರತ್ನಾ ಬಡಿಗೇರ, ಚಂದ್ರಪ್ಪ ಬಳ್ಳಾರಿ, ದೇವೇಂದ್ರಗೌಡ ಪಾಟೀಲ, ಮಂಜಪ್ಪ ಹುಯಿಲಗೋಳ, ಹನುಮಂತ ಚೂರಿ, ಉಮೇಶ ಬಳ್ಳಾರಿ, ಈರಪ್ಪ ಮಡಿವಾಳರ, ಹನುಮಪ್ಪ ಶೀರನಹಳ್ಳಿ, ದ್ಯಾಮಪ್ಪ ವಾಲಿಕಾರ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಗೆ ಬ್ಯಾಗ್, ಕಲಿಕಾ ಸಾಮಗ್ರಿ ವಿತರಣೆ
ಗದಗ: ದ್ವಾರಕಾಮಾಯಿ ಫೌಂಡೇಶನ್ ಹಾಗೂ ಹೈದರಾಬಾದ್‌ನ ಅಮೃತಾ ಟೂಲ್ಸ್ ಆ್ಯಂಡ್ ಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್ ಜಂಟಿ ಸಹಯೋಗದಲ್ಲಿ ಕೊಟುಮಚಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 157 ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್, ನೋಟ್‌ಬುಕ್, ಪೆನ್ ಹಾಗೂ ಪೆನ್ಸಿಲ್ ಕಿಟ್‌ಗಳನ್ನು ವಿತರಿಸಲಾಯಿತು.ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಾರಕಾಮಾಯಿ ಸಂಸ್ಥೆಯ ಆಡಳಿತಾಧಿಕಾರಿ ಖಾಜಾವಾಲಿ ಮುಲ್ಲಾ, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲೆಯ ಪ್ರಧಾನ ಗುರುಗಳು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಎನ್.ಎಸ್. ನೋಡೆವಾಲೆ, ಗಣೇಶ ಚವಡಿ, ಬಸವರಾಜ ಕಟಗಿ, ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ಸಹ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.