ಗದಗ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ ಕಿಶೋರ ಮೇಲೆ ದೇಶದ್ರೋಹಿ ಪ್ರಕರಣದಡಿ ಗಡೀಪಾರು ಮಾಡಲು ಆಗ್ರಹಿಸಿ ಮುಸ್ಲಿಂ ಸಮಾಜದ ವೇದಿಕೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಇಮ್ತಿಯಾಜ ಆರ್. ಮಾನ್ವಿ ಮಾತನಾಡಿದರು. ಬಾಬಾಜಾನ ಬಳಗಾನೂರ, ಅಷ್ಫಾಕಅಲಿ ಹೊಸಳ್ಳಿ, ಅನ್ವರ ಶಿರಹಟ್ಟಿ, ಉಮರ ಫಾರುಖ್ ಹುಬ್ಬಳ್ಳಿ, ಮುಜಮ್ಮಿಲ್ ಬಳ್ಳಾರಿ, ರಫೀಕ ಜಮಾಲಖಾನವರ, ಮುನ್ನಾ ಶೇಖ, ಮುಜಫರ್ ಮುಲ್ಲಾ, ಸಾಧಿಕ ನರೇಗಲ್ಲ, ಮೆಹಬೂಬ ಮುಲ್ಲಾ, ರಜಾಕ ಸೂಡಿ, ರಿಯಾಜ ಪಾಮಡಿ, ಮಹ್ಮದಶಫಿ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಮೌಲಾಸಾಬ ಗಚ್ಚಿ, ಗೌಸಸಾಬ ಅಕ್ಕಿ, ಸಲೀಂ ಹರಿಹರ, ಖಾಜೇಸಾಬ ಬಳ್ಳಾರಿ ಹಾಗೂ ಮುಂತಾದವರು ಇದ್ದರು.ದಲಿತಪರ ಸಂಘಟನೆಗಳಿಂದ ರಾಷ್ಟ್ರಪತಿಗೆ ಮನವಿ
ಗದಗ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮುಖಂಡರಾದ ವೆಂಕಟೇಶಯ್ಯ, ಪ್ರಕಾಶ ಕೇಲೂರ, ರಮೇಶ ಬಾಳಮ್ಮನವರ, ಸತೀಶ ಹುಲಿ, ವಿಜಯ ಚಲವಾದಿ, ಅಶೋಕ ತಾಳದವರ, ಮಂಜು ಚಲವಾದಿ, ಯಮನೂರ ಹೊಸಳ್ಳಿ, ಬಸವರಾಜ ಗಾಡಗೋಳಿ, ವಾಸು ಹುಣಸಿಮರದ, ಬಸಪ್ಪ ಸಣ್ಣಕ್ಕಿ, ಮಹಾಂತೇಶ ಬಾಳಮ್ಮನವರ, ಅನಿಲ ದೊಡ್ಡಮನಿ ಮುಂತಾದವರು ಇದ್ದರು.