ಕನ್ನಡಪ್ರಭ ವಾರ್ತೆ ಸಾವಳಗಿ ತುಂಗಳ-ಸಾವಳಗಿ ಏತ ನೀರಾವರಿ ಯೋಜನೆಗೆ ಮತ್ತು ಕರಿ ಮಸೂತಿ ಏತ ನೀರಾವರಿ ಯೋಜನೆಗೆ ಸಮಾನವಾಗಿ ನೀರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಸಾವಳಗಿ ಗ್ರಾಮದಲ್ಲಿ ರೈತರು ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಾವಳಗಿ
ತುಂಗಳ-ಸಾವಳಗಿ ಏತ ನೀರಾವರಿ ಯೋಜನೆಗೆ ಮತ್ತು ಕರಿ ಮಸೂತಿ ಏತ ನೀರಾವರಿ ಯೋಜನೆಗೆ ಸಮಾನವಾಗಿ ನೀರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಸಾವಳಗಿ ಗ್ರಾಮದಲ್ಲಿ ರೈತರು ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.ಸಾವಳಗಿ-ತುಂಗಳ ಏತ ನೀರಾವರಿ ಯೋಜನೆಗೆ ಸುಮಾರು 9000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು. ಕೆಲ ವರ್ಷಗಳಿಂದ ನೀರಾವರಿಯಿಂದ ವಂಚಿತವಾಗುತ್ತಿದೆ. ಈ ತೊಂದರೆಯನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ಬೇಸತ್ತ ರೈತರು ಅಧಿಕಾರಿಗಳ ನಡೆ ಖಂಡಿಸಿ ಪ್ರತಿಭಟನೆ ನಡೆಸಿ ಕಿಡಿಕಾರಿದರು. ಕರಿಮಸೂತಿ ಮತ್ತು ಸಾವಳಗಿ-ತುಂಗಳ ಏತ ನೀರಾವರಿ ನೀರನ್ನು ಹಲ್ಯಾಳದಿಂದ ಬರುವ ನೀರನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಹಲ್ಯಾಳ ಜಾಕವೆಲ್‌ನಲ್ಲಿ 6 ಪಂಪ್‌ಗಳು ಚಾಲ್ತಿಯಿದ್ದಲ್ಲಿ, ಕರಿ ಮಸೂತಿಗೆ 5 ಪಂಪ್‌ಗಳ ನೀರು ಪಡೆದು ಸಾವಳಗಿ-ತುಂಗಳ ಏತ ನೀರಾವರಿಗೆ 150 ಕ್ಯೂಸೆಕ್ಸ್ ನೀರು ಬಿಡಬೇಕು. ಆಕಸ್ಮಾತ್ ಹಲ್ಯಾಳ ಜಾಕವೆಲ್‌ನಲ್ಲಿ ಪಂಪ್‌ಗಳು ಶುರುವಾದ ಪಕ್ಷದಲ್ಲಿ ಕರಿಮಸೂತಿಯ 1 ಪಂಪ್‌ನ್ನು ಬಂದ್ ಮಾಡಿ ಸಾವಳಗಿ-ತುಂಗಳ ಏತ ನೀರಾವರಿಗೆ ನೀರನ್ನು ಒದಗಿಸಬೇಕು. ಅಧಿಕಾರಿಗಳು ನೀರನ್ನು ಸಮಾನವಾಗಿ ಹಂಚಿಕೆ ಮಾಡಿದರೆ ನೀರಾವರಿ ಯೋಜನೆಯಲ್ಲಿ ಬೇದ, ಭಾವ, ರೈತರ ಗಲಾಟೆ, ಮುಷ್ಕರಗಳು ಉದ್ಭವಿಸುದಿಲ್ಲ. ಒಂದು ವೇಳೆ ಅಧಿಕಾರಿಗಳಿಂದ ತಾರತಮ್ಯ ಉಂಟಾದಲ್ಲಿ ರೈತರೆಲ್ಲರು ಸೇರಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡುವ ದಾರಿ ಹಿಡಯಬೇಕಾಗುತ್ತದೆ ಎಂದು ಎಚ್ಚರಿಸಿದರು.-------
ಕೋಟ್‌ಮಳೆ ಪ್ರಮಾಣ ಕಡಿಮೆ ಇದೆ. 1.50 ಲಕ್ಷ ಕ್ಯೂಸೆಕ್ಸ್ ನೀರು ಬಂತು. ಬಂದ ಕುಸಿಯಲ್ಲೇ ಹಿಪ್ಪರಗಿ ನೀರಾವರಿ ಯೋಜನೆಯ ಹಲ್ಯಾಳ, ಐನಾಪೂರ ಪಂಪ್‌ಗಳಲ್ಲಿ ಸ್ಟಾಕ ಮಾಡಿದ್ದೇವು. ಇದು 4ನೇ ಹಂತದ ಯೋಜನೆ ಸಾವಳಗಿ-ತುಂಗಳ ಏತನೀರಾವರಿ ಯೋಜನೆಗೆ ಸಮರ್ಪಕವಾಗಿ ನೀರು ಬರಲಿಲ್ಲ. ಮಳೆ ಕೈಕೊಟ್ಟಿದ್ದರಿಂದ ಒಳ ಹರಿವು ಸಹ 15 ಸಾವಿರ ಕ್ಯೂಸೆಕ್ಸ್‌ಗೆ ಬಂದು ನಿಂತಿದೆ. 40 ಕಿ.ಮೀ. ಕ್ಷೇತ್ರವೂ ಬಹಳ ವಿಸ್ತಾರವಿದೆ. ಓಪನ್ ಕೆನಾಲ್ ಇರುವುದರಿಂದ ನೀರು ತಲುಪುವುದು ತುಂಬಾ ಕಷ್ಟವಾಗುತ್ತದೆ. ಮನವಿಯನ್ನು ಮೇಲಾಧಿಕಾರಿಗಳಿಗೆ ಕಳಿಸುತ್ತೇನೆ.ವಿಠ್ಠಲ ನಾಯಕ, ಎಇಇ ಹಿಪ್ಪರಗಿ ಜಲಾಶಯ.-------
ಕೋಟ್‌ವಿಜಯಪುರ ಭಾಗದ 23 ಕೆರೆಗಳಿಗೆ ನೀರು ಇಲ್ಲವೆಂದು ಎಂ.ಬಿ.ಪಾಟೀಲ, ಜನ-ಜಾನುವಾರುಗಳಿಗೆ ನೀರು ಇಲ್ಲವೆಂದು ಇತ್ತ ಲಕ್ಷ್ಮಣ ಸವದಿ ಇಬ್ಬರು ಪ್ರಭಾವ ಬಳಸಿ ನೀರು ತಗೋತಾರೆ. ನಾವೇನು ಪಾಪಾ ಮಾಡಿದ್ದೇವೆ. ನೀರಿಗಾಗಿ ಪ್ರತಿಭಟನೆ ಮಾಡುವಂತ ಪರಿಸ್ಥಿತಿ ಬಂದಿದೆ. ನಮಗೂ ನೀರು ಕೊಡಿ ನಾವೂ ರೈತರೇ.ಶ್ರೀಮಂತ, ಸಾವಳಗಿ ರೈತಪೋಟೊ ವಿವರ: ತುಂಗಳ-ಸಾವಳಗಿ ಏತ ನೀರಾವರಿ ಯೋಜನೆಗೆ ಮತ್ತು ಕರಿ ಮಸೂತಿ ಏತ ನೀರಾವರಿ ಯೋಜನೆಗೆ ಸಮಾನವಾಗಿ ನೀರು ಹಂಚಿಕೆ ಮಾಡಬೇಕು ಎಂದು ಪ್ರತಿಭಟಣೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.