ರೈಲು ಕೋಚಿಂಗ್‌ ನಿರ್ವಹಣೆ, ದುರಸ್ತಿ ಕಾರ್ಯಾಗಾರ ಸ್ಥಾಪಿಸಲು ಆಗ್ರಹ

KannadaprabhaNewsNetwork |  
Published : Feb 10, 2024, 01:46 AM IST
ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ ಅವರಿಗೆ ಶುಕ್ರವಾರ ಹೊಸಪೇಟೆ ರೈಲ್ವೆ ನಿಲ್ದಾಣದದಲ್ಲಿ ಮಹೇಶ್ವರ ಸ್ವಾಮಿಜಿ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಕೊಟ್ಟೂರು- ದಾವಣಗೆರೆ ಮಾರ್ಗವಾಗಿ ಹೊಸಪೇಟೆ- ತುಮಕೂರು ನಡುವೆ ದಿನವಹಿ ಪ್ಯಾಸೆಂಜರ್ ರೈಲನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಯಿತು.

ಹೊಸಪೇಟೆ: ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ ಅವರಿಗೆ ಶುಕ್ರವಾರ ನಗರದ ರೈಲ್ವೆ ನಿಲ್ದಾಣದದಲ್ಲಿ ಹಗರಿಬೊಮ್ಮನಹಳ್ಳಿ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು.

ವಿಜಯನಗರ ಜಿಲ್ಲೆಯಲ್ಲಿ ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿರುವ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಹನಗಳು ಮತ್ತು ಸಾರ್ವಜನಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಂಡರ್ ಪಾಸ್ ಎಲ್‌ಸಿ ಗೇಟ್ ನಂ. ೩೭ಕ್ಕೆ ಮೇಲ್ಸೇತುವೆ ಮತ್ತು ಎಲ್‌ಸಿ ಗೇಟ್ ನಂ. ೩೮ಕ್ಕೆ ರೈಲ್ವೇ ಕೆಳಸೇತುವೆ(ಅಂಡರ್ ಪಾಸ್) ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಹಗರಿಬೊಮ್ಮನಹಳ್ಳಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್ ಫಾರಂ ನಿರ್ಮಾಣ, ಮೂಲ ಸೌಕರ್ಯಗಳು ಹಾಗೂ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ- ಹೊಸಪೇಟೆ ಪ್ರದೇಶವು ರಾಜ್ಯದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆಯಾಗುವ ಕೈಗಾರಿಕಾ ಪ್ರದೇಶವಾಗಿದೆ. ಈ ಮಾರ್ಗದಲ್ಲಿ ಅಧಿಕ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾರಿಗನೂರಿನಲ್ಲಿ ಪ್ರಯಾಣಿಕರ ಗಾಡಿಗಳ ಕೋಚಿಂಗ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಾಗಾರವನ್ನು ಸ್ಥಾಪಿಸಬೇಕು.

ಕೊಟ್ಟೂರು- ದಾವಣಗೆರೆ ಮಾರ್ಗವಾಗಿ ಹೊಸಪೇಟೆ- ತುಮಕೂರು ನಡುವೆ ದಿನವಹಿ ಪ್ಯಾಸೆಂಜರ್ ರೈಲನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಹುಬ್ಬಳ್ಳಿ- ಗುಂತಕಲ್ ನಡುವೆ(ಗಾಡಿ ಸಂಖ್ಯೆ ೦೭೩೩೭/೦೭೩೩೮) ರೈಲು ಸಂಚಾರವಿತ್ತು. ಆದರೆ ಕಳೆದ ಆರು ತಿಂಗಳಿಂದ ಯಾವುದೇ ಕಾರಣವಿಲ್ಲದೆ ಈ ರೈಲನ್ನು ತೋರಣಗಲ್ಲು ವರೆಗೆ ಮಾತ್ರ ಸಂಚರಿಸುತ್ತಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆ, ಶಾಲಾ, ಕಾಲೇಜು, ವ್ಯಾಪಾರ- ವಹಿವಾಟು ನಡೆಸಲು ಬಳ್ಳಾರಿ ಕಡೆಗೆ ಹೋಗಲು ತೊಂದರೆಯಾಗುತ್ತದೆ. ಈ ರೈಲನ್ನು ಕೂಡಲೇ ಬಳ್ಳಾರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಅರವಿಂದ ಜಾಲಿ, ಪಿ.ಆರ್. ತಿಪ್ಪೇಸ್ವಾಮಿ, ಡಿ. ಪ್ರಭಾಕರ್, ಶಿವಕುಮಾರ್‌ ಸಾಂಚಿ, ಸತೀಶ್‌ ಪಾಟೀಲ್, ಉಮಾ ಶಂಕರ್, ಎಚ್.ಎಂ. ಮಂಜುನಾಥ, ಜೆ. ವರುಣ್, ಪಲ್ಲೇದ್ ಸಿದ್ದೇಶ್, ಎಲ್. ರಮೇಶ್, ಬಿ. ಲೋಕೇಶ್, ಬಿ. ವಿಶ್ವನಾಥ, ಬಿ. ಮಂಜುನಾಥ ಮತ್ತಿತರರಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!