ಶಿಗ್ಗಾಂವಿ: ತಾಲೂಕಿನ ಬಂಕಾಪುರಕ್ಕೆ ಈ ಹಿಂದೆ ಇದ್ದ ತಾಲೂಕು ಸ್ಥಾನಮಾನವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಬಂಕಾಪುರ ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸದಸ್ಯರು ಕಪ್ಪು ಬಟ್ಟೆ ಪ್ರದರ್ಶಿಸಿದರು. ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸಂಚಾಲಕ ಅಬ್ದುಲ್ ರಜಾಕ ತಹಶೀಲ್ದಾರ ಮಾತನಾಡಿ, ನಾವು ಜಾತ್ಯತೀತ ಪಕ್ಷಾತೀತವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಜನಪ್ರತಿನಿಧಿಗಳಾಗಲಿ ಈ ಕ್ಷೇತ್ರವನ್ನು ಆಳಿದ ಶಾಸಕ, ಸಚಿವ, ಮುಖ್ಯಮಂತ್ರಿ, ಸಂಸದರಾಗಲಿ ನಮ್ಮ ಬೇಡಿಕೆ ಬಗ್ಗೆ ಗಮನ ಹರಿಸದೇ ಇರುವುದರಿಂದ ಸಮಸ್ತ ಪಟ್ಟಣದ ಜನಾಭಿಪ್ರಾಯ ಸಂಗ್ರಹಿಸಿ ಬರುವ ಉಪಚುನಾವಣೆ ಮತದಾನವನ್ನು ಕಪ್ಪು ಬಟ್ಟೆ ಕಟ್ಟಿಕೊಂಡು ಬಹಿಷ್ಕರಿಸಲು ತಿರ್ಮಾನಿಸಲಾಗಿದೆ ಎಂದರು.
ನಿಂಗನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಮಲ್ಲಿಕಾರ್ಜುನ ನರೇಗಲ್, ದೇವರಾಜ ಅರಳಿಕಟ್ಟಿ, ನಾಗರಾಜ ಮೇಳ್ಳಳ್ಳಿ, ಶರಣಬಸವ ಬಿ.ಕೆ., ರವಿ ಕುರಗೋಡಿ, ಕೃಷ್ಣಾ ಆಲದಕಟ್ಟಿ, ಮಂಜುನಾಥ ವಳಗೇರಿ, ನೀಲಪ್ಪ ಕುರಿ, ಮಹದೇವಪ್ಪ ಸುಂಕದ, ಗಂಗಾಧರ ಪೂಜಾರ, ಅಶೋಕ ನರೇಗಲ್, ಆನಂದ ವಳಗೇರಿ, ಸತೀಶ ವಳಗೇರಿ, ನನ್ನೆಸಾಬ ದೇವಗಿರಿ, ನಾಗಪ್ಪ ಬಳಿಗಾರ ಸೇರಿದಂತೆ ಇತರರು ಇದ್ದರು.