ಪೌರ ಸೇವಾ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

KannadaprabhaNewsNetwork |  
Published : Dec 05, 2025, 01:15 AM IST
4 ರೋಣ 1. ವಿವಿದ ಬೇಡಿಕೆಗಳಿಗೆ ಆಗ್ರಹಿಸಿ ಪೌರ ಸೇವಾ ನೌಕರರ ಸಂಘ ವತಿಯಿಂದ ತಹಶಿಲ್ದಾರ ನಾಗರಾಜ.ಕೆ ಅವರ ಮೂಲಕ ಮುಖ್ಯಮಂತ್ರಿಗಳಾಗಿದ್ದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಚಾಲಕರು, ಲೋಡರ್, ಕ್ಲೀನರ್, ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ನಿರತ ನೌಕರರಿಗೆ ನೇರ ಪಾವತಿಗೆ ಒಳಪಡಿಸಬೇಕು.

ರೋಣ: ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರುಹಾಜರಾಗಿ ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರ ನಡೆಸಲಾಗುವುದು ಎಂದು ರೋಣ ಪೌರಸೇವಾ ನೌಕರರ ಸಂಘ ವತಿಯಿಂದ ಗುರುವಾರ ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ವೇಳೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಫಕೀರಪ್ಪ ಯಡಿಯಾಪುರ ಮಾತನಾಡಿ, ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡಬೇಕು.

ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಚಾಲಕರು, ಲೋಡರ್, ಕ್ಲೀನರ್, ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ನಿರತ ನೌಕರರಿಗೆ ನೇರ ಪಾವತಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಶುಕ್ರವಾರದಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲಾಗುವುದು ಎಂದರು.ಈ ವೇಳೆ ರೋಣ ಪುರಸಭೆ ಸಿಬ್ಬಂದಿಗಳಾದ ರಾಜು ಮಾಡಲಗೇರಿ, ಮಾರುತಿ ಚಲವಾದಿ, ಲಕ್ಷ್ಮಣ ಹೊಸಮನಿ, ಪ್ರಕಾಶ ಯಡಿಯಪ್ಪನವರ, ಶೇಖಣ್ಣ ನವಲಗುಂದ, ಎನ್.ಎ. ಮುಲ್ಲಾ, ಮೇಘರಾಜ ತೆಗ್ಗಿನಮನಿ, ರವಿ ಜೋಗಣ್ಣವರ ಸೇರಿದಂತೆ ಮುಂತಾದವರಿದ್ದರು.ಇಂದು ಶಿರೋಳದಲ್ಲಿ ಶಿವಾನುಭವ ಕಾರ್ಯಕ್ರಮ

ನರಗುಂದ: ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಗವಿಮಠದಲ್ಲಿ ಡಿ. 5ರಂದು ಸಂಜೆ 6.30ಕ್ಕೆ 26ನೇ ಮಾಸಿಕ ಶಿವಾನುಭವ ಹಾಗೂ ಮೌನೇಶ್ವರ ಜಯಂತ್ಯುತ್ಸವ, ಕಾರ್ತಿಕ ಸಮಾರೋಪ ಸಮಾರಂಭ ಶ್ರೀಮಠದ ಆವರಣದಲ್ಲಿ ಜರುಗಲಿದೆ.

ಸಾನ್ನಿಧ್ಯವನ್ನು ಅಭಿನವ ಯಚ್ಚರ ಶ್ರೀಗಳು ವಹಿಸುವರು. ಮುಖ್ಯಅತಿಥಿಗಳಾಗಿ ಮೌನೇಶ ಆಚಾರ, ಪ್ರಲ್ಲಾದ ಅರ್ಕಸಾಲಿ, ಕೃಷ್ಣಗೌಡ ಪಾಟೀಲ, ಹನುಮಂತಗೌಡ ಗೌಡರ, ನಾಗರಾಜ ಕಮ್ಮಾರ, ಮಂಜುನಾಥ ಕುಲಕರ್ಣಿ, ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಮೈಲಾರಪ್ಪ ಹೂಗಾರ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಕುರ್ಚಿಗೆ ಪೈಪೋಟಿ, ರೈತರ ಸಮಸ್ಯೆ ಗೌಣ: ವಿಜಯೇಂದ್ರ
ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯ