ಗದಗ: ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಸತತ ಮಳೆ ಸುರಿದು ಅತಿವೃಷ್ಟಿಯಾಗಿದ್ದು, ಬೆಳೆ ಮತ್ತು ಮನೆ ಹಾಳಾಗಿವೆ. ಜನ, ಜಾನುವಾರುಗಳ ದೈನಂದಿನ ಬದುಕು ದುಸ್ತರವಾಗಿದೆ. ಮುಂಗಾರು ಪ್ರಾರಂಭದಲ್ಲಿ ಹದವಾದ ಮಳೆ ಆಗಿದ್ದರಿಂದ ಈ ವರ್ಷ ಅಂದಾಜಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆಯಾಗಿದ್ದು, ಸದ್ಯ ಬೆಳೆಗಳು ನಾಶವಾಗಿದ್ದು, ರೈತರಿಗೆ ಅತಿವೃಷ್ಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ನಿಯೋಗ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವು ಹಳ್ಳಿಗಳ ವ್ಯಾಪ್ತಿಯಲ್ಲಿ ಮಲಪ್ರಭಾ ನದಿ, ಬೆಣ್ಣೆಹಳ್ಳ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಜಗನ್ನಾಥಸಾ ಭಾಂಡಗೆ, ಎಂ.ಎಂ. ಹಿರೆಮಠ, ಬಿ.ಎಸ್. ಚಿಂಚಲಿ, ನಾಗರಾಜ ಕುಲಕರ್ಣಿ, ಭೀಮಸಿಂಗ ರಾಠೋಡ, ಅಶೋಕ ಸಂಕಣ್ಣವರ, ಸಿದ್ದು ಪಲ್ಲೇದ, ಶಿವು ಹಿರೇಮನಿಪಾಟೀಲ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ,ನಿರ್ಮಲಾ ಕೊಳ್ಳಿ, ಉಷಾ ದಾಸರ, ವಿಜಯಲಕ್ಷ್ಮೀ ಮಾನ್ವಿ, ಪ್ರಕಾಶ ಅಂಗಡಿ, ಮುತ್ತಣ್ಣ ಮುಶಿಗೇರಿ, ಚನ್ನಮ್ಮ ಹುಳಕಣ್ಣವರ, ಲಕ್ಷ್ಮೀ ಕಾಕಿ, ವಿದ್ಯಾವತಿ ಗಡಗಿ, ಮಹೇಶ ದಾಸರ, ಅಮರನಾಥ ಗಡಗಿ, ರಾಚಯ್ಯ ಹೊಸಮಠ, ಶಂಕರ ಕಾಕಿ, ನವೀನ ಕೊಟೆಕಲ್, ಶೇಖಣ್ಣ ಕನ್ಯಾಳ, ಕುಮಾರ ಮಾರನಬಸರಿ, ಮಹಾದೇವಪ್ಪ ಚಿಂಚಲಿ, ಸುಭಾಸ ಸುಂಕದ ಹಾಗೂ ಹಲವರು ಇದ್ದರು.