ಹಿರೇಕೆರೂರು: ಹಿಂದೂಗಳ ಶ್ರದ್ಧಾ, ಭಕ್ತಿ ಕೇಂದ್ರ ಸ್ಥಾನ ಎನ್ನಿಸಿಕೊಂಡ ಧರ್ಮಸ್ಥಳದ ಬಗ್ಗೆ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಅನಗತ್ಯವಾಗಿ ಕ್ಷೇತ್ರದ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಹುನ್ನಾರ ಸಹಿಸುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಶನಿವಾರ ತಾಲೂಕು ಬಿಜೆಪಿ ಮಂಡಲದಿಂದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ. ಅರ್ಥಿಕವಾಗಿ ಈ ಸರ್ಕಾರ ದಿವಾಳಿಯಾಗಿದೆ. ಧರ್ಮಸ್ಥಳ ಕ್ಷೇತ್ರ ಹಲವು ವರ್ಷಗಳಿಂದ ಜನಪರ ಸೇವೆಯ ಮುಖಾಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಆದರೂ ಕೆಲವರು ಆರೋಪ ಮಾಡುತ್ತಿದ್ದಾರೆ.
ಕ್ಷೇತ್ರದ ಕುರಿತು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ. ಧರ್ಮ ಎಂದರೆ ಧರ್ಮಸ್ಥಳ, ಧರ್ಮಸ್ಥಳದಲ್ಲಿ ಅನಾಮಿಕ ಮಾತನ್ನು ನಂಬಿ ಸುಮಾರು ಸ್ಥಳಗಳಲ್ಲಿ ಅಗೆದರೂ ಯಾವುದೇ ರೀತಿಯ ಕುರುಹುಗಳು ಸಿಕ್ಕಿರುವುದಿಲ್ಲ. ಒಬ್ಬ ಅನಾಮಿಕನ ಮಾತನ್ನು ಕೇಳಿ ಕರ್ನಾಟಕ ಸರ್ಕಾರದವರು ಹಿಂದೂ ಮುಂದೆ ನೋಡದೆ ಎಸ್‌ಐಟಿಯನ್ನು ರಚನೆ ಮಾಡಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಆತ ಹೇಳಿದ ಕಡೆ, ಗುಡ್ಡದಲ್ಲಿ ಸುಮಾರು ಕಡೆ ಅಗೆದರು ಯಾವ ಬುರುಡೆಗಳು ಸಿಗಲಿಲ್ಲ. ಆತನನ್ನು ಬಂಧಿಸಿ ವಿಚಾರಣೆಯನ್ನು ಮಾಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅದ್ಯಕ್ಷೆ ಸಂಜೀವಯ್ಯ ಕಬ್ಬಿಣಕಂತಿಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಮುಖಂಡರಾದ ಎನ್.ಎಂ. ಈಟೇರ, ಆರ್.ಎನ್. ಗಂಗೋಳ, ಶಿವಕುಮಾರ ತಿಪ್ಪಶೆಟ್ಟಿ, ಆನಂದಪ್ಪ ಹಾದಿಮನಿ, ಜಗದೀಶ ದೊಡ್ಡಗೌಡರ, ಹನುಮಂತಪ್ಪ ಗಾಜೇರ್, ಗೀತಾ ದಂಡಿಗಿಹಳ್ಳಿ, ಬಸಮ್ಮ ಅಬಲೂರು, ಮಂಜುಳಾ ರವಿಶಂಕರ, ಬಾಳಿಕಾಯಿ, ಲತಾ ಬಣಕಾರ, ಮಹೇಶ ಭರಮಗೌಡ್ರ, ಹರೀಶ ಕಲಾಲ್, ಹನುಮಂತಪ್ಪ ಕುರಬರ್, ಕುಮಾರ ಮರಿಗೌಡ್ರ, ಬಿ.ಆರ್. ಪುಟ್ಟಣ್ಣನವರ, ಗಂಗಾಧರ ಬೋಗೇರ, ಕುಸುಮ ಬಣಕಾರ, ಮಾಲತೇಶ್ ಮಾದರ, ಬಸವರಾಜ ಚಿಂದಿ, ಮನೋಹರ ಒಡ್ಡಿನಕಟ್ಟಿ, ಹೊನ್ನಪ್ಪ ಸಾಲಿ, ಮಂಜು ಹೊಸಗೌಡ್ರ, ನಿಂಗಾಚಾರಿ ಮಾಯಾಚಾರಿ, ರುದರೇಶ ಬೇತ್ತೂರು, ಅಶೋಕ ಮತ್ತಿಹಳ್ಳಿ, ಬಸವನಗೌಡ ದೊಡ್ಡಗೌಡ್ರ, ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.