ರೋಣ: ಎನ್‌ಪಿಎಸ್ ರದ್ದುಗೊಳಿಸಿ 7ನೇ ವೇತನ ಆಯೋಗ ಶೀಘ್ರ ಜಾರಿಗೊಳಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ರೋಣ ತಾಲೂಕು ಘಟಕ ವತಿಯಿಂದ ಬುಧವಾರ ಶಾಸಕ ಜಿ.ಎಸ್. ಪಾಟೀಲಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಜಗದೀಶ ಮಡಿವಾಳರ ಮಾತನಾಡಿ, ಸರ್ಕಾರವು ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು, ಸರ್ಕಾರ ಈಗಾಗಲೇ ನೀಡಿರುವ ಶೇ.17 ಮದ್ಯಂತರ ಪರಿಹಾರ ಭತ್ಯೆಯೂ ಸೇರಿದಂತೆ ಶೇ.40 ರಷ್ಟು ಫಿಟ್ ಮೆಂಟ್ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ 2022 ಜು.1 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ಕೂಡಲೇ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸರ್ಕಾರ ನೌಕರರ ಬೇಡಿಕೆ ಕುರಿತು ಮತ್ತು ನೌಕರರು ಎದುರಿಸುತ್ತಿರುವ ಸಮಸ್ಯೆ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಗಮನಕ್ಕೆ ತರುತ್ತೇನೆ. ನೌಕರರ ಹಿತ ರಕ್ಷಣೆಯಲ್ಲಿ ಸರ್ಕಾರ ಸದಾ ಸಿದ್ದವಿದೆ. ಈ ನಿಟ್ಟಿನಲ್ಲಿ ನಾನು ಸಹ ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಸರ್ಕಾರಿ ನೌಕರರಿಗೆ ಏನೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘದ ತಾಲೂಕಾಧ್ಯಕ್ಷ ವೈ.ಡಿ. ಗಾಣಿಗೇರ, ಬಿ.ಎಸ್. ಮಾನೇದ, ಎಸ್.ಜಿ. ದಾನಪ್ಪಗೌಡ್ರ, ಎ.ಡಿ. ನದಾಪ, ರಾಜ್ಯ ಪರಿಷತ್ ಸದಸ್ಯ ರಾಮರಡ್ಡಿ ರಡ್ಡೇರ, ರಂಗಪ್ಪ ಮಾದರ, ಸಿ.ಕೆ. ಕೇಸರಿ, ಬಿ.ಎನ್. ಖ್ಯಾತನಗೌಡ್ರ, ಎಂ.ವೈ. ಜಕ್ಕರಸಾನಿ, ವೀರುಪಮ್ಮ ಹಿರೇಮಠ, ಮಹೇಶ ಕುರಿ, ಸಿ.ಕೆ. ಸೂಡಿ, ಎಸ್.ಬಿ. ಕಿತ್ತಲಿ, ಸಿ.ಎಲ್. ಪಾಟೀಲ, ಪ್ರಕಾಶ ಕರ್ಕಿಕಟ್ಟಿ, ರೇಣುಕಾ ಮಡಿವಾಳರ, ಎಸ್.ಎಸ್. ಬಿರನೂರ, ಆರ್.ಎಂ. ಠಾಣೇದ, ಸಿ.ಎಸ್. ಜೋಗರಡ್ಡಿ, ವಿ.ಆರ್. ಸಂಗಳದ, ಎಸ್.ಕೆ. ಬಂಡಿ, ಎಂ.ಜಿ. ತೋಣಿಶ್ಯಾಳ, ಝಡ್.ಡಿ. ದಳವಾಯಿ ಮುಂತಾದವರು ಪಾಲ್ಗೊಂಡಿದ್ದರು.