ಬೆಳಗಾವಿ ಅಧಿವೇಶನದಲ್ಲಿ ಸುಪ್ರೀಂಕೋರ್ಟಿನ ತೀರ್ಪುನ್ನು ಗೌರವಿಸಿ ಕಾಲಹರಣ ಮಾಡದೆ ನ್ಯಾ. ಎ.ಜೆ. ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಶನಿವಾರ ಮಾದಿಗ, ಛಲವಾದಿ ಉಪಜಾತಿ ಸಂಘಟನೆಗಳ ಮುಖಂಡರು ಪಟ್ಟಣದ ಶಾಸಕ ಬಸವರಾಜ ರಾಯರಡ್ಡಿಯವರ ಕಚೇರಿ ಮುಂದೆ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಾದಿಗ ಸಮಾಜ ಜಿಲ್ಲಾಧ್ಯಕ್ಷ ವಸಂತ ಭಾವಿಮನಿ, ಮುಖಂಡರಾದ ಮುತ್ತಣ್ಣ ಬಾರಿನಾರ, ಹನಮಂತ ಮುತ್ತಾಳ ಮಾತನಾಡಿ, ಸುಮಾರು ೩೦ ವರ್ಷಗಳಿಂದಲೂ ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಆದರೂ ಇದುವರೆಗೊ ಒಳಮೀಸಲಾತಿ ಜಾರಿಯಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಯವರು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾದಿಗ, ಛಲವಾದಿ ಜನಾಂಗ ಸೇರಿದಂತೆ ಉಪಜಾತಿಗಳಿಗೆ ಅನುಕೂಲವಾಗುವ ಒಳಮೀಸಲಾತಿ ಜಾರಿಗೊಳಿಸುವಂತೆ ಮನವೊಲಿಸಬೇಕೆಂದು ಮನವಿ ಮಾಡಿದರು.
ಛಲವಾದಿ ಮಹಾಸಭಾ ಅಧ್ಯಕ್ಷ ಅಂದಪ್ಪ ಹಾಳಕೇರಿ, ಮುಖಂಡರಾದ ಬಸವರಾಜ ಬೂದಗುಂಪಾ, ಯಲ್ಲಪ್ಪ ಹಂದ್ರಾಳ, ರುದ್ರಪ್ಪ ನಡುವಲಮನಿ, ಛತ್ರ‍್ರಪ್ಪ ಛಲವಾದಿ, ಶಿವು ಬಣಕಾರ ಹಾಗೂ ಎಚ್.ಎಚ್. ಕುರಿ ಮಾತನಾಡಿದರು.
ಇದಕ್ಕೂ ಪೂರ್ವ ಪ್ರತಿಭಟನಾಕಾರರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ನಾನಾ ಘೋಷಣೆಗಳ ಕೂಗುತ್ತಾ ತಮಟೆ ಬಾರಿಸುವ ಮೂಲಕ ಶಾಸಕರ ಕಚೇರಿಗೆ ತೆರಳಿ ಅವರ ಆಪ್ತ ಸಹಾಯಕ ರಮೇಶ ಕೊಣ್ಣೂರಗೆ ಮನವಿ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.