ಗೋವಾ ಜೈಲ್‌ನಿಂದ ಎಸ್ಕೇಪ್‌ ಮಾಡಿಸಿದ್ದ ಪೇದೆಗೆ ಕೈಕೊಟ್ಟ ಕುಖ್ಯಾತ ರೌಡಿ!

KannadaprabhaNewsNetwork | Published : Dec 15, 2024 2:04 AM

ಸಾರಾಂಶ

ಸುಲೇಮಾನ್‌ ಸಿದ್ದಿಕಿ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತ ಅಂತಾರಾಜ್ಯ ಅಪರಾಧಿಯಾಗಿದ್ದು ಇವನಿಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಪೇದೆ ಅಮಿತ್‌ ನಾಯಕ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆ, ಕೊಲೆಯತ್ನ, ಜೀವ ಬೆದರಿಕೆ, ಹಲ್ಲೆ, ವಂಚನೆ, ಭೂ ಮಾಫಿಯಾದಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಸುಲೇಮಾನ್‌ ಸಿದ್ದಿಕಿಯ ಮೇಲೆ ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ.

ಹುಬ್ಬಳ್ಳಿ:

ಅಂತಾರಾಜ್ಯ ಕುಖ್ಯಾತ ರೌಡಿಯೋರ್ವನನ್ನು ಗೋವಾ ಜೈಲಿನಿಂದ ಎಸ್ಕೇಪ್‌ ಮಾಡಿಸಿ ಆತನ ಜೊತೆಯೇ ಹುಬ್ಬಳ್ಳಿಗೆ ಬಂದಿದ್ದ ಗೋವಾ ಸಶಸ್ತ್ರ ಮೀಸಲು ಪಡೆಯ ಪೇದೆಗೆ ಅದೇ ರೌಡಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

ಸುಲೇಮಾನ್‌ ಸಿದ್ದಿಕಿ ಅಂತರಾಜ್ಯ ಕುಖ್ಯಾತ ರೌಡಿ. ಈತನಿಗೆ ಗೋವಾ ಜೈಲಿನಿಂತ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಗೋವಾ ಮೀಸಲು ಪಡೆಯ ಪೊಲೀಸ್‌ ಪೇದೆ ಅಮಿತ್‌ ನಾಯಕ.

ಹುಬ್ಬಳ್ಳಿಯ ವರೆಗೆ ಇಬ್ಬರೂ ಜೊತೆಯಲ್ಲೇ ಬಂದಿದ್ದರು. ರೌಡಿ ಸುಲೇಮಾನ್‌ ಸಿದ್ಧೀಕಿ ಇಲ್ಲಿ ಪರಾರಿಯಾಗುತ್ತಿದ್ದಂತೆ ಕಂಗಾಲಾದ ಪೇದೆ ಅಮಿತ್‌ ನಾಯಕ ಹಳೆ ಹುಬ್ಬಳ್ಳಿ ಠಾಣೆಗೆ ಶರಣಾಗಿದ್ದಾನೆ. ಇಲ್ಲಿನ ಪೊಲೀಸರು ಶನಿವಾರ ಬೆಳಗ್ಗೆ ಗೋವಾ ಪೊಲೀಸರಿಗೆ ಪೇದೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಗೋವಾ ಜೈಲಿನಿಂದ ಎಸ್ಕೇಪ್‌:

ಕೊಲೆ, ಕೊಲೆಯತ್ನ, ಜೀವ ಬೆದರಿಕೆ, ಹಲ್ಲೆ, ವಂಚನೆ, ಭೂ ಮಾಫಿಯಾದಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಸುಲೇಮಾನ್‌ ಸಿದ್ದಿಕಿಯ ಮೇಲೆ ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ. ಹಾಗಾಗಿ ಇವನನ್ನು ಗೋವಾ ಜೈಲಿನಲ್ಲಿ ಪ್ರತ್ಯೇಕ ಬ್ಯಾರೆಕ್‌ನಲ್ಲಿ ಇಡಲಾಗಿತ್ತು. ಇವನ ಭದ್ರತೆಗಾಗಿ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅಮಿತ್‌ ನಾಯಕನನ್ನು ನಿಯೋಜಿಸಲಾಗಿತ್ತು.

ಹಣದ ಆಸೆಗಾಗಿ ಶುಕ್ರವಾರ ರಾತ್ರಿ ಸುಲೇಮಾನ್‌ನನ್ನು ಜೈಲಿನಿಂದ ಎಸ್ಕೇಪ್‌ ಮಾಡಿಸಿದ್ದ ಅಮಿತ್‌, ಅವನೊಂದಿಗೆ ಹುಬ್ಬಳ್ಳಿಗೆ ಬಂದಿದ್ದರು. ಇಲ್ಲಿಗೆ ಬರುತ್ತಿದ್ದಂತೆ ಪೇದೆಗೆ ರೌಡಿ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ದಾರಿಕಾಣದಾದ ಪೇದೆ ಕೊನೆಗೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಶರಣಾಗಿ ಆಗಿರುವ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ನಂತರ ಹಳೇ ಹುಬ್ಬಳ್ಳಿ ಪೊಲೀಸರು ಗೋವಾ ಪೊಲೀಸರಿಗೆ ಮಾಹಿತಿ ನೀಡಿ ಪೇದೆಯನ್ನು ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ರುವುದಾಗಿ ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರ ತಿಳಿಸಿದರು.

ಹಣದ ಆಮಿಷ ನೀಡಿದ್ದ:

ಆರೋಪಿ ಸುಲೇಮಾನ್‌ ಸಿದ್ದಿಕಿ ತಾನು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದರೆ ₹1 ಕೋಟಿ ಹಣ ನೀಡುವುದಾಗಿ ಪೇದೆ ಅಮಿತ್‌ನಿಗೆ ಆಮಿಷ ಒಡ್ಡಿದ್ದ ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ. ಹಣದ ಆಸೆಗೆ ಬಿದ್ದ ಪೇದೆಯು ಆರೋಪಿಯನ್ನು ಜೈಲಿನಿಂದ ತಪ್ಪಿಸಿಕೊ‍ಳ್ಳಲು ಸಹಾಯ ಮಾಡಿದ್ದಲ್ಲದೇ ಅವನೊಂದಿಗೆ ತಾನೂ ಹುಬ್ಬಳ್ಳಿಗೆ ಬಂದಿದ್ದಾನೆ. ಹುಬ್ಬಳ್ಳಿಯಲ್ಲಿ ಹಣ ನೀಡುವುದಾಗಿ ಹೇಳಿದ್ದನಂತೆ.

ಶುಕ್ರವಾರ ತಡರಾತ್ರಿ ಹುಬ್ಬಳ್ಳಿಗೆ ಬರುತ್ತಿದ್ದಂತೆ ಸುಲೇಮಾನ ಪೇದೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದರಿಂದಾಗಿ ಪೇದೆಯು ಬೇರೆ ದಾರಿಯಿಲ್ಲದೇ ಹಳೇ ಹುಬ್ಬಳ್ಳಿಯ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this article