ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಕುಸನೂರ ರಸ್ತೆ ಆವರಣದಲ್ಲಿ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಶಿವಕುಮಾರ್ ಬಗಲೂರ, 2024ರ ಮಾ.8ರಂದು ಐಬಿಎ ಮತ್ತು ಯುಎಫ್‌ಬಿಯು ನಡುವೆ 12ನೆಯ ದ್ವಿಪಕ್ಷಿಯ ವೇತನ ಒಪ್ಪಂದದಂತೆ ವಾರಕ್ಕೆ 5 ದಿನದ ಬ್ಯಾಂಕಿಂಗ್ ಒಡಂಬಡಿಕೆಗೆ ಸಹಿ ಹಾಕಿದ್ದು ಕೇಂದ್ರ ಸರ್ಕಾರಕ್ಕೆ ಜಾರಿಗೊಳಿಸಲು ಶಿಫಾರಸ್ಸು ಮಾಡಿತ್ತು. ಆದರೆ ಒಂದುವರೆ ವರ್ಷ ಕಳೆದರೂ ಕೇಂದ್ರ ಸರ್ಕಾರ ಜಾರಿಗೆ ತರುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ದೂರಿದರು.
ಎಸ್ಸಿ- ಎಸ್ಟಿ ವೆಲ್‌ಫೇರ್ ಅಸಸಿಯೇಷನ್ ಪ್ರ ಕಾರ್ಯದರ್ಶಿ ರಾಹುಲ್ ಹರವಾಳ, ಖಜಾಂಚಿ ಕಿರಣ ಭಾವಿಮನಿ, ರಾಕೇಶ್, ಭೀಮಪ್ಪ, ಅಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷ ಸಿದ್ದಣ್ಣ, ದತ್ತಾತ್ರೇಯ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಶಿವಾನಂದ, ಅಭಿಷೇಕ, ಅರುಣಕುಮಾರ, ಕಿರಣ ರೆಶ್ಮಿ, ಜ್ಯೋತಿ ವಾಲಿಶೆಟ್ಟಿ,ಹೇಮಾ ಸಕ್ರಿ, ಅಧಿಕಾರಿಗಳ ಜಿಲ್ಲಾ ಅಧ್ಯಕ್ಷ ಸಚಿನ್ ತೆಗ್ಗಿನ, ಕಾರ್ಯದರ್ಶಿ ಶ್ರೀನಿವಾಸ ನೌಕರರ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ್ ರೆಡ್ಡಿ, ಹನುಮಾನ್ ಸಿಂಗ್ ಜಿಲ್ಲಾಧ್ಯಕ್ಷ ಆನಂದ, ಶಿವಲಿಂಗ, ನಿವೃತ್ತ ನೌಕರರಾದ ಎಸ್ ಎಸ್ ಕುಲಕರ್ಣಿ, ರಾಜೇಂದ್ರ ಮದಕುಂಟಿ, ರಾಜಶೇಖರ ಬಬಲಾದಕರ್ ಇದ್ದರು.