ಸವದತ್ತಿ ಧಾರವಾಡ ಜಿಲ್ಲೆ ಸೇರ್ಪಡೆಗೆ ಒತ್ತಾಯ

KannadaprabhaNewsNetwork |  
Published : Dec 08, 2025, 03:00 AM IST
ಸವದತ್ತಿಯ ಕಲ್ಮಠದಲ್ಲಿ ಸವದತ್ತಿ ತಾಲೂಕನ್ನು ಧಾರವಾಡ ಜಿಲ್ಲೆಗೆ ಸೇರ್ಪಡೆಗೊಳಿಸಬೇಕೆಂಬ ಹೋರಾಟದ ಕುರಿತು ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಡಾ.ಅಭಿನಂದನ ಕಬ್ಬಿಣ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ: ಸವದತ್ತಿ ತಾಲೂಕನ್ನು ಧಾರವಾಡ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಒತ್ತಾಯದ ಹೋರಾಟಕ್ಕೆ ಸಾಕಷ್ಟು ಜನರ ಸಹಮತ ವ್ಯಕ್ತವಾಗಿದ್ದು, ಡಿ.೧೧ರಂದು ಬೆಳಗ್ಗೆ ೧೦ಗಂಟೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಸವದತ್ತಿ ತಾಲೂಕು ಧಾರವಾಡ ಜಿಲ್ಲೆ ಸೇರ್ಪಡೆ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಅಭಿನಂದನ ಕಬ್ಬಿಣ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ:

ಸವದತ್ತಿ ತಾಲೂಕನ್ನು ಧಾರವಾಡ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಒತ್ತಾಯದ ಹೋರಾಟಕ್ಕೆ ಸಾಕಷ್ಟು ಜನರ ಸಹಮತ ವ್ಯಕ್ತವಾಗಿದ್ದು, ಡಿ.೧೧ರಂದು ಬೆಳಗ್ಗೆ ೧೦ಗಂಟೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಸವದತ್ತಿ ತಾಲೂಕು ಧಾರವಾಡ ಜಿಲ್ಲೆ ಸೇರ್ಪಡೆ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಅಭಿನಂದನ ಕಬ್ಬಿಣ ಹೇಳಿದರು.

ಪಟ್ಟಣದ ಕಲ್ಮಠದಲ್ಲಿ ರವಿವಾರ ನಡೆದ ಹೋರಾಟ ಸಮಿತಿಯ ಎರಡನೇ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಪಕ್ಷಾತೀತ ಮತ್ತು ಜ್ಯಾತ್ಯಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸವದತ್ತಿ ತಾಲೂಕಿನ ಜನತೆಗೆ ತಾಲೂಕಿನ ವಿಷಯದಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗುರುವಾರ ಮುಂಜಾನೆ ೧೦ಕ್ಕೆ ಎಪಿಎಮ್‌ಸಿಯಿಂದ ಪ್ರತಿಭಟನೆ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.ಸ್ಥಳೀಯ ಮುಖಂಡ ಜಗದೀಶ ಹಂಪಣ್ಣವರ ಮಾತನಾಡಿ, ಸವದತ್ತಿ ಪಟ್ಟಣ ಬೆಳಗಾವಿ ಜಿಲ್ಲಾ ಕೇಂದ್ರದಿಂದ ಸಾಕಷ್ಟು ದೂರವಿದೆ. ಈ ಭಾಗದ ಜನರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಸಾಕಷ್ಟು ತೊಂದರೆಗಳಾಗುತ್ತಿವೆ. ಅಲ್ಲದೆ,ಸವದತ್ತಿಯು ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಧಾರ್ಮಿಕ ಕೇಂದ್ರವಾಗಿರುವದರಿಂದ ದೇಶದ ಅನೇಕ ಭಾಗಗಳಿಂದ ಕೋಟ್ಯಂತರ ಜನ ಆಗಮಿಸುತ್ತಾರೆ. ಸವದತ್ತಿಯನ್ನೇ ಜಿಲ್ಲೆಯನ್ನಾಗಿ ಮಾಡಿದಲ್ಲಿ ಈ ಭಾಗದ ಧಾರ್ಮಿಕ ಕ್ಷೇತ್ರಕ್ಕೆ ಇನ್ನಷ್ಟು ಮಹತ್ವ ಬರುವದರ ಜೊತೆಗೆ ಅಭಿವೃದ್ದಿಗೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲವಾದಲ್ಲಿ ಸವದತ್ತಿಗೆ ಸಮೀಪದ ಧಾರವಾಡ ಜಿಲ್ಲೆಗೆ ಈ ತಾಲೂಕನ್ನು ಸೇರ್ಪಡೆಗೊಳಿಸಿದಲ್ಲಿ ಅನುಕೂಲವಾಗಿದೆ ಎಂದು ತಿಳಿಸಿದರು.ಈ ವೇಳೆ ವಿಜಯ ಬೆಳವಡಿ, ಮಲ್ಲಿಕಾರ್ಜುನ ಬೀಳಗಿ, ವಕೀಲರಾದ ಸಿ.ಬಿ.ದೊಡಗೌಡರ, ಮಲ್ಲಣ್ಣ ವಟ್ನಾಳ, ಜಿ.ವೈ.ಕರಮಲ್ಲಪ್ಪನವರ, ನಾಗರಾಜ ಸೋಗಿ, ಅಡಿವೆಪ್ಪ ಬೀಳಗಿ, ಸುನೀಲ ಸುಳ್ಳದ, ದೊಡಗೌಡ ಕೊದಾನಪುರಗೌಡ್ರ, ಕುಮಾರಸ್ವಾಮಿ ತಲ್ಲೂರಮಠ, ಅಲ್ಲಮಪ್ರಭು ಪ್ರಭುನವರ, ಮಹಾದೇವ ಕಿಚಡಿ, ಉಮೇಶ ಭೂಮನ್ನವರ, ಡಾ.ಎ.ಕೆ.ಕಬ್ಬೂರ, ನಾಗರಾಜ ಬೋನಗೇರಿ, ನಿಂಗಪ್ಪ ಮೀಶಿ, ರವಿ ಸಬರದ, ಗಿರೀಶ ಬೀಳಗಿ, ಶೇಖರ ಮೊರಬದ, ಚಂದ್ರಶೇಖರ ಅಮ್ಮಿನಭಾವಿ, ಎಮ್.ಎಮ್.ಕಲಾದಗಿ, ಮಕ್ತುಮ ಇಮಾಮ ನಾಯ್ಕರ, ಎಮ್.ಎಮ್.ಕಲಾದಗಿ, ರಾಮರಡಿಮಠ ಇತರರು ಉಪಸ್ಥಿತರಿದ್ದರು.

ಸಿ.ವಿ.ಸಂಬಯ್ಯನಮಠ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌