ವಿದ್ಯುತ್ ಗೋಪುರ ಸಂತ್ರಸ್ತ ರೈತರಿಗೆ ಪರಿಹಾರ ಹೆಚ್ಚಳಕ್ಕೆ ಆಗ್ರಹ

KannadaprabhaNewsNetwork |  
Published : Aug 09, 2026, 02:45 AM IST
ಪೋಟೊ ಕ್ಯಾಪ್ಸನ್: ಡಂಬಳ ಗ್ರಾಮದ ರೈತರ ಜಮೀನಿನಲ್ಲಿ ಸೂಕ್ತ ಪರಿಹಾರ ನೀಡದೆ ಬೃಹತ್ ವಿದ್ಯುತ್ ಗೋಪುರ ನಿರ್ಮಿಸಿರುವುದು.ಪೋಟೊ ಕ್ಯಾಪ್ಸನ್: ದಾವಣಗೇರಿ ಜಿಲ್ಲಾಧಿಕಾರಿಗಳು ಆದೇಶ ಹೋರಡಿಸಿರುವ ಆದೇಶ ಪ್ರತಿ. | Kannada Prabha

ಸಾರಾಂಶ

ಪ್ರತಿ ಚದರ ಮೀಟರ್‌ಗೆ ₹5000 ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50ರಂತೆ ಪರಿಹಾರ ನಿಗದಿಪಡಿಸಬೇಕು. ಬೆಳೆಹಾನಿ ಹಾಗೂ ಇತರೆ ನಷ್ಟಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನೂ ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಡಂಬಳ: ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಜಮೀನುಗಳಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಗೋಪುರಗಳಿಂದ ಬಾಧಿತರಾಗಿರುವ ರೈತರಿಗೆ ನ್ಯಾಯಯುತ ಹಾಗೂ ವೈಜ್ಞಾನಿಕ ಪರಿಹಾರ ನಿಗದಿಪಡಿಸುವಂತೆ ಡಂಬಳ ಗ್ರಾಮದ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಈ ಹಿಂದೆ ವಿದ್ಯುತ್ ಗೋಪುರ ನಿರ್ಮಾಣದಿಂದ ಬಾಧಿತವಾಗುವ ಜಮೀನಿಗೆ ಪ್ರತಿ ಚದರ ಮೀಟರ್‌ಗೆ ₹2,500 ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹20ರಂತೆ ಪರಿಹಾರ ನಿಗದಿಪಡಿಸಲಾಗಿದೆ. ಈ ಪರಿಹಾರ ಮೊತ್ತ ಅವೈಜ್ಞಾನಿಕವಾಗಿದ್ದು, ಶೇ. 80ರಷ್ಟು ನೀರಾವರಿ ಭೂಮಿಗಳಾಗಿದ್ದು, ಪ್ರಸ್ತುತ ಜಮೀನಿನಲ್ಲಿ ರೈತರಿಗೆ ಉಂಟಾಗುವ ನಷ್ಟವನ್ನು ಪರಿಗಣಿಸಿ ಪರಿಷ್ಕರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಪ್ರತಿ ಚದರ ಮೀಟರ್‌ಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರ ಗ್ರಾಮದ ರೈತರಿಗೆ ಗೋಪುರಗಳ ಅಡಿಪಾಯದ ಜಾಗಕ್ಕೆ ನಿಗದಿಪಡಿಸಿರುವ ದರ ಪ್ರತಿ ಚದರ ಮೀಟರ್‌ಗೆ ₹5000 ವಿದ್ಯುತ್ ಮಾರ್ಗದ ರಹದಾರಿ ಹಾದು ಹೋಗುವ ಜಮೀನಿಗೆ ತಂತಿಯ ದರ ಶೇ. 25ರಷ್ಟು ಅಲ್ಲಿನ ಜಿಲ್ಲಾಧಿಕಾರಿಗಳು ಪರಿಹಾರ ನೀಡಿದ್ದಾರೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಭಾಗದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯ ನಡೆದಿದೆ .ಸೂಕ್ತ ಪರಿಹಾರವನ್ನು ಗದಗ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಘೋಷಣೆ ಮಾಡಬೇಕು.

ಪ್ರತಿ ಚದರ ಮೀಟರ್‌ಗೆ ₹5000 ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50ರಂತೆ ಪರಿಹಾರ ನಿಗದಿಪಡಿಸಬೇಕು. ಬೆಳೆಹಾನಿ ಹಾಗೂ ಇತರೆ ನಷ್ಟಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನೂ ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಹಲವು ಸಮಸ್ಯೆಗಳು:

ವಿದ್ಯುತ್ ಗೋಪುರಗಳು ಜಮೀನಿನಲ್ಲಿ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಲಿದೆ. ಮರ- ಗಿಡಗಳನ್ನು ಬೆಳೆಸುವುದು, ಕೊಳವೆಬಾವಿ ಕೊರೆಸುವುದು, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ಜಾನುವಾರುಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ವಿದ್ಯುತ್ ಗೋಪುರ ಮತ್ತು ಪ್ರಸರಣ ಮಾರ್ಗ ಇರುವುದರಿಂದ ಭವಿಷ್ಯದಲ್ಲಿ ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿಯೂ ಸಮಸ್ಯೆಯಾಗುವ ಆತಂಕವಿದೆ ಎಂದು ರೈತರು ತಿಳಿಸಿದರು.

ದಾವಣಗೆರೆ ಜಿಲ್ಲಾಧಿಕಾರಿಗಳು ರೈತರಿಗೆ ಪ್ರತಿ ಚದರ ಮೀಟರ್‌ಗೆ ₹5000 ನಿಗದಿಪಡಿಸಿ ಪರಿಹಾರ ನೀಡಿದ್ದಾರೆ ಆದರೆ ಡಂಬಳ ಭಾಗದಲ್ಲಿ ವಿದ್ಯುತ್ ಗೋಪುರಗಳಿಗೆ ಕಡಿಮೆ ಹಣ ನಿಗದಿಪಡಿಸಿದ್ದು, ಜಿಲ್ಲಾಧಿಕಾರಿಗಳು ಮರು ಪರಿಶೀಲನೆ ಮಾಡಿ ಪ್ರತಿ ಚದರ ಮೀಟರ್‌ಗೆ ₹5000 ಮತ್ತು ತಂತಿ ಹಾಕುವುದಕ್ಕೆ ₹50 ನಿಗದಿ ಪಡಿಸಿ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ: ರಾಘವೇಶ್ವರ ಶ್ರೀ
ಅನಾಹುತ ಸಂಭವಿಸಿದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್: ಸುನಿಲ್ ಕುಮಾರ್