ಎಸ್‌ಸಿಪಿ, ಎಸ್‌ಪಿ ಹಣ ಬೇರೆ ಯೋಜನೆ ಗಳಿಗೆ ಬಳಸಬಾರದು. ಬಳಸಿರುವ ಹಣ ವಾಪಸ್ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು
ದಲಿತ ಸಮುದಾಯಕ್ಕೆ ರಾಜ್ಯ ಬಜೆಟ್‌ನಲ್ಲಿ ಅನ್ಯಾಯಗವಾಗದೇ ಶೇ.4.1ರಷ್ಟು ಜನಸಂಖ್ಯಾನುಸಾರವಾಗಿ ತಕ್ಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಪಿ.ಟಿ.ಚಂದ್ರಶೇಖರ್ ಮಾತನಾಡಿ, ಎಸ್‌ಸಿ, ಎಸ್ಟಿ ಮೀಸಲಾತಿಗೆ ನಿಗಧಿಪಡಿಸಿದ ಆದಾಯ ಮಿತಿ ವಾರ್ಷಿಕ ₹15 ಲಕ್ಷಕ್ಕೆ ಏರಿಸಬೇಕು. ಎಸ್‌ಸಿಪಿ, ಎಸ್‌ಪಿ ಹಣ ಬೇರೆ ಯೋಜನೆ ಗಳಿಗೆ ಬಳಸಬಾರದು. ಬಳಸಿರುವ ಹಣ ವಾಪಸ್ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಹೇಳಿದರು.ಕೆಎಸ್‌ಎಫ್‌ಸಿ ಮತ್ತು ಬ್ಯಾಂಕ್‌ಗಳಿಂದ ದಲಿತರಿಗೆ ಶೇ.4 ಬಡ್ಡಿಯಂತೆ ₹10 ಕೋಟಿ ಉದ್ಯಮ ನಡೆಸಲು ಸಾಲ ಸೌಲಭ್ಯ ನೀಡುವ ಯೋಜನೆಗಳಲ್ಲಿರುವ ಷರತ್ತು ಸಡಿಲಪಡಿಸಿ ನಗರ ಪ್ರದೇಶದಲ್ಲಿ ನಿವೇಶನ, ಮನೆ ಇತರೆ ಚರಾಸ್ತಿಗಳ ಕೋಲ್ಯಾಟ ರಲ್ ಇರಬೇಕು ಎಂಬ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ ಮತ್ತು ದೌರ್ಜನ್ಯ ತಡೆಕಾಯ್ದೆಗಳ ಅನುಷ್ಟಾನ ಸಮರ್ಪಕವಾಗಿಲ್ಲ. ಅಪರಾಧ ಗಳ ಪತ್ತೆ ಮತ್ತು ವಿಚಾರಣೆ ಸರಿಯಾಗಿ ನಡೆದು ರಕ್ಷಣೆಯಾಗುವ ಪ್ರಮಾಣ ಸರಿಯಾಗಿ ಆಗುವಂತೆ ನಿಗಾವಹಿಸಲು ಪ್ರತ್ಯೇಕ ಸಮಿತಿ ಸ್ಥಾಪಿಸಬೇಕು ಎಂದರು.
ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ದಸಂಸ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿ, ದಲಿತರಿಗೆ ಬಳಸಬೇಕು ಎಂದು ಒತ್ತಾಯಿಸಿದರು.