ಜಿಲ್ಲಾ ಪಂಚಾಯಿತಿಯಿಂದಲೇ ಮೇಲ್ವಿಚಾರಕರ ಖಾತೆಗಳಿಗೆ ವೇತನ ಜಮಾ ಆಗಲಿ । ಹಳಿಯಾಳ ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಂದ ರಾಜ್ಯ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ
ಬುಧವಾರ ಹಳಿಯಾಳ ತಾಲೂಕ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ಶಿರಸ್ತೇದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಕುಟುಂಬಕ್ಕೆ ನ್ಯಾಯ ನೀಡಿ:
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಪಂಯ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿ ಆರು ತಿಂಗಳಿಂದ ವೇತನ ದೊರೆಯದೇ ಹಾಗೂ ಕಿರುಕೋಳ ತಾಳಲಾರದೇ ಗ್ರಂಥಾಲಯದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಮಾಡಿಕೊಂಡಿರುವುದು ವಿಷಾದಕರವಾಗಿದೆ, ಮೃತದ ಕುಟುಂಬಕ್ಕೆ ನ್ಯಾಯ ಒದಗಿಸುವುದರ ಜೊತೆಗೆ ತಪ್ಪಿತಸ್ಥರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ರಾಜ್ಯದ ಎಲ್ಲಾ ಮೇಲ್ವಿಚಾರಕರ ಸಮಸ್ಯೆ:ವೇತನದ ಸಮಸ್ಯೆಯು ಇಡೀ ರಾಜ್ಯದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರದ್ದಾಗಿದೆ. ಎರಡು ವರ್ಷಗಳ ಹಿಂದೆಯೇ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಜಾರಿಯಾಗಿದ್ದರೂ ಅದರಲ್ಲಿ ₹12ಸಾವಿರ ಮಾತ್ರ ಬಿಡುಗಡೆ ಆಗುತ್ತಿದ್ದು, ಉಳಿದ ಮೊತ್ತವು ಗ್ರಾಪಂ ಉಪ-ಕರ ಖಾತೆಯಿಂದ ಜಿಪಂ ಖಾತೆಗೆ ಜಮಾ ಆಗಿ ಅಲ್ಲಿಂದ ನಮಗೆ ವೇತನ ಬಿಡುಗಡೆಯಾಗಲು ಬಾರಿ ವಿಳಂಬವಾಗುತ್ತದೆಯಲ್ಲದೇ ಇದರಿಂದ ಕಾಲಕಾಲಕ್ಕೆ ಪೂರ್ಣ ಪ್ರಮಾಣದ ಕನಿಷ್ಟ ವೇತನ ಕೈ ಸೇರದಿರುವುದರಿಂದ ಎಲ್ಲಾ ಮೇಲ್ವಿಚಾರಕರಿಗೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಜಿಪಂ ಖಾತೆಯಿಂದಲೇ ನೇರವಾಗಿ ಗ್ರಂಥಾಲಯ ಮೇಲ್ವಿಚಾರಕರ ಖಾತೆಗೆ ವೇತನ ಜಮಾ ಮಾಡಿಸುವಂತೆ ಆದೇಶ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೇಲ್ವಿಚಾರಕರ ಸಂಘದ ಅಧ್ಯಕ್ಷ ಸಹದೇವ ಪಾಳೇಕರ, ಕಾರ್ಯದರ್ಶಿ ಸುನೀಲ ವಾಲೇಕರ, ಬೆಳವಟಗಿಯ ಷಣ್ಮುಕ ಭಡಂಗಿ, ನಾಗಶೆಟ್ಟಿಕೊಪ್ಪಿನ ಮಾರುತಿ ಹೆಳವರ, ಚಿಬ್ಬಲಗೇರಿಯ ಅಶೋಕ ಶಿಂದೆ, ಮಲವಡಿಯ ಮಾರುತಿ ಮಲವಡಕರ, ತೇರಗಾಂವಿನ ರಮೇಶ ಘಟಕಾಂಬಳೆ, ಅರ್ಲವಾಡದ ವಿಠ್ಠಲ ಮರಾಠೆ, ಭಾಗವತಿಯ ಬಸವರಾಜ ಪೂಜಾರಿ, ಯಡೋಗಾದ ಗುಲಾಭಿ ಪೆಟ್ನೇಕರ, ಮುರ್ಕವಾಡಿನ ಜ್ಯೋತಿ ಗೌಡಾ, ಜನಗಾದ ಗೋವಿಂದ ಕದಂ, ಕಾವಲವಾಡಿನ ಚನ್ನಪ್ಪ ಉಗ್ಗಿನಕೇರಿ, ಕೆಸರೊಳ್ಳಯ ರಜೀನಾ ಬಿರ್ಜೆ, ಮದ್ನಳ್ಳಿಯ ರುದ್ರೇಶ ಬಡಿಗೇರ, ಸಾಂಬ್ರಾಣಿಯ ಪುರುಷೋತ್ತಮ ಮಿರಾಶಿ ಹಾಗೂ ಇತರರು ಇದ್ದರು. ಮೇಲ್ವಿಚಾರಕರ ನಿಯೋಗವು ತಾಲೂಕ ಪಂಚಾಯಿತಿಗೂ ತೆರಳಿ ತಾಪಂ ಇಒ ವಿಲಾಸರಾಜ ಅವರಿಗೂ ಮನವಿ ಸಲ್ಲಿಸಿತು.